“ಉಗ್ರವಾದ ಬಿಜೆಪಿಯವರಿಗೆ ರಾಜಕೀಯ ದಾಳ” – ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಗರಂ

310

ಉಗ್ರರ ದಾಳಿಯನ್ನು ರಾಜಕೀಯದಾಟದಲ್ಲಿ ದಾಳವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಜಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ನಡೆಯನ್ನು ಖಂಡಿಸಿದ ಗುಂಡೂರಾವ್ , ಬಿಜೆಪಿ ಮತವನ್ನು ಹೇಗೆ ಪಡೆಯಬೇಕು ಎಂಬ ತಂತ್ರಗಾರಿಕೆ ಹೆಣೆದಿದೆ ಎಂದು ಆರೋಪಿದ್ದಾರೆ.

ad

ಉಗ್ರರ ದಾಳಿಯನ್ನು ಅನುಕೂಲ ಸಿಂಧುವಾಗಿ ಬಿಜೆಪಿ ಬಳಸಿಕೊಂಡಿದ್ದು ಸರ್ಜಿಕಲ್ ಸ್ಟ್ರೈಕ್ ನಡೆಸಿ ಪ್ರಚಾರ ಗಿಟ್ಟಿಸಿಕೊಂಡಿದ್ದಾಗಿ ಹೇಳಿದ್ದಾರೆ. ಯುಪಿಯೆ ಸರ್ಕಾರವಿದ್ದಾಗಲೂ ಇಂತಹ ನಾಲ್ಕು ಸರ್ಜಿಕಲ್ ಸ್ಟ್ರೈಕ್ ನಡಿದಿವೆ. ಆದರೆ ಆಗಿನ ಸರ್ಕಾರ ಎಂದಿಗೂ ಪ್ರಚಾರಕ್ಕಾಗಿ ಅದನ್ನು ಬಳಸಿಕೊಂಡಿಲ್ಲ. ಗೌಪ್ಯತೆಯನ್ನು ಕಾಪಾಡಿಕೊಂಡು ಬಂದಿತ್ತು. ಮೋದಿ ಸರ್ಕಾರದ ಅವಧಿಯಲ್ಲೇ ಉಗ್ರವಾದಿಗಳ ಆತಂಕ ಹೆಚ್ಚಾಗಿದೆ ಎಂದರು, ಈ ನಡುವೆ ಅಮಿತ್ ಶಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿರುವುದಾಗಿಯೂ, ಪಾಕಿಸ್ತಾನವನ್ನು ಮಟ್ಟ ಹಾಕಲು ಬಿಜೆಪಿ ಅಸಮರ್ಥವಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Sponsored :

Related Articles