ಬಾಟಲ್​ ಕ್ಯಾಪ್​ ಓಫನ್​ ಚಾಲೆಂಜ್​ಗೆ ಸಲ್ಲು ಡಿಫರೆಂಟ್​​ ಟಚ್! ಬ್ಯಾಡ್​ ಬಾಟಲ್​ ಕ್ಯಾಪ್​ ಬೀಳಿಸಿದ್ಹೇಗೆ ಗೊತ್ತಾ?!

436
9900071610

ಸ್ಯಾಂಡಲ್​ವುಡ್,ಬಾಲಿವುಡ್​,ಟಾಲಿವುಡ್ ಹೀಗೆ ದೇಶದ ಚಿತ್ರರಂಗ, ಕ್ರೀಡಾರಂಗವೆಲ್ಲವೂ  ಬಾಟಲ್ ಕ್ಯಾಪ್ ಚಾಲೆಂಜ್ ನಲ್ಲಿ ಮುಳುಗಿದೆ. ಈಗ ಸೋಷಿಯಲ್ ಮೀಡಿಯಾದಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು, ಎಲ್ಲಾ ಸೆಲಬ್ರಿಟಿಗಳು ಈ ಚಾಲೆಂಜ್​ ಅಕ್ಸೆಪ್ಟ್​ ಮಾಡಿ ವಿಡಿಯೋ ಹರಿಬಿಡುತ್ತಿದ್ದಾರೆ. ಆದರೇ ಬಾಲಿವುಡ್​ ಬ್ಯಾಡ್​ಬಾಯ್ ಸಲ್ಮಾನ್ ಖಾನ್ ಈ ಚಾಲೆಂಜ್​ಗೆ ವಿಶಿಷ್ಟ ರೂಪ ನೀಡಿ ಸುದ್ದಿಯಾಗಿದ್ದಾರೆ.

ad

ಸಲ್ಲು ಏನೇ ಮಾಡಿದ್ರೂ ಅದನ್ನು ಡಿಫರೆಂಟಾಗಿ ಮಾಡಿ ಗಮನ ಸೆಳೆಯುವ ಸಲ್ಲು ಬಾಟಲ್​ ಓಪನ್​ ಚಾಲೆಂಜ್​ನಲ್ಲೂ ಇದೇ ಪ್ರಯತ್ನ ಮಾಡಿದ್ದಾರೆ.  ಎಲ್ಲರೂ ಬಾಟಲಿ ಓಫನ್​ ಚಾಲೆಂಜ್​ನಲ್ಲಿ ಬಾಟಲಿಗೆ ಒದ್ದು ಕ್ಯಾಪ್​ ಬೀಳಿಸಿದರೇ, ಸಲ್ಮಾನ್ ಖಾನ್ ಮಾತ್ರ, ಬಾಯಿಯಿಂದ ಊದಿ ಮುಚ್ಚಳವನ್ನು ಬೀಳಿಸಿ ನಂತರ ಪಾನಿ ಬಚಾವ್ ಎಂಬ ಸಂದೇಶವನ್ನು ನೀಡಿದ್ದಾರೆ.

ನಂತರ ಬಾಟಲಿಯಲ್ಲಿರುವ ನೀರನ್ನು ಸಂಪೂರ್ಣವಾಗಿ ಕುಡಿದು ನೀರನ್ನು ಉಳಿಸಿ ಎಂದು ಸಂದೇಶ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಸಲ್ಮಾನ್ ಖಾನ್ ಪರಿಸರ ಪ್ರೀತಿ ಹಾಗೂ ನೀರಿನ ಬಗ್ಗೆ ಇರುವ ಕಾಳಜಿಗೆ ಜನರಿಂದ ಶ್ಲಾಘನೆ ವ್ಯಕ್ತವಾಗಿದೆ.

ಬಾಟಲ್​ ಕ್ಯಾಪ್​ ಓಫನ್​ ಚಾಲೆಂಜ್​ಗೆ ಸಲ್ಲು ಡಿಫರೆಂಟ್​​ ಟಚ್

ಬಾಟಲ್​ ಕ್ಯಾಪ್​ ಓಫನ್​ ಚಾಲೆಂಜ್​ಗೆ ಸಲ್ಲು ಡಿಫರೆಂಟ್​​ ಟಚ್

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಸೋಮವಾರ, ಜುಲೈ 15, 2019

Sponsored :


9900071610