ಪ್ರವಾಹ ಹಾಗೂ ಗುಡ್ಡ ಕುಸಿತದ ಎಫೆಕ್ಟ್​! ಹಲವೆಡೆ ರೈಲ್ವೆ ಸಂಚಾರ ಸ್ಥಗಿತ!!

218
9900071610

ಭಾರೀ ಮಳೆಯಿಂದ ರಾಜ್ಯದಲ್ಲಿ ಕೇವಲ ರಸ್ತೆ ಮಾರ್ಗ ಮಾತ್ರವಲ್ಲ ರೈಲ್ವೇ ಮಾರ್ಗಗಳಿಗೂ ಧಕ್ಕೆಯಾಗಿದ್ದು, ಹೀಗಾಗಿ ಮಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳ ರೈಲ್ವೆ ಸಂಚಾರವನ್ನು ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶಿಸಿದೆ.

ad


ಸಕಲೇಶಪುರ- ಸುಬ್ರಹ್ಮಣ್ಯ ಘಟ್ಟಪ್ರದೇಶದಲ್ಲಿ ಸತತ ಭೂಕುಸಿತ ಉಂಟಾಗುತ್ತಿರುವುದರಿಂದ ನೈಋುತ್ಯ ರೈಲ್ವೆಯು ಆ.23ರ ವರೆಗೂ ಬೆಂಗಳೂರು- ಮಂಗಳೂರು ಮಾರ್ಗದ ರೈಲುಗಳ ಸಂಚಾರ ರದ್ದುಗೊಳಿಸಿದೆ. ಸಕಲೇಶಪುರ- ಸುಬ್ರಹ್ಮಣ್ಯ ಘಟ್ಟಪ್ರದೇಶದಲ್ಲಿ ಭಾರೀ ಪ್ರಮಾಣದ ಮಳೆ ಆಗುತ್ತಿರುವುದರಿಂದ ಭೂಕುಸಿತ ಉಂಟಾಗಿ ರೈಲ್ವೆ ಹಳಿ ಮೇಲೆ ದೊಡ್ಡ ಪ್ರಮಾಣದ ಕಲ್ಲು, ಮಣ್ಣು, ಮರಗಳು ಬಿದ್ದಿವೆ.


ಕಳೆದ ಐದು ದಿನಗಳಲ್ಲಿ ಈ ಮಾರ್ಗದಲ್ಲಿ 30 ಬಾರಿ ಭೂಕುಸಿತ ಉಂಟಾಗಿದೆ. ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರು ತೆರವು ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ನೈಋುತ್ಯ ರೈಲ್ವೆ ತಿಳಿಸಿದೆ.


ಇದಲ್ಲದೇ ಬೆಂಗಳೂರು ಕಾರವಾರ, ಬೆಂಗಳೂರು ತಾಳಗುಪ್ಪ ಸೇರಿದಂತೆ ಹಲವು ಪ್ರಮುಖ ರೈಲು ಮಾರ್ಗಗಳ ಸಂಚಾರವನ್ನು ಸ್ಥಗಿತಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

Sponsored :


9900071610