ಸುಮಲತಾ ವಿರುದ್ಧ ತಿರುಗಿ ಬಿದ್ರಾ ದರ್ಶನ ಅಭಿಮಾನಿಗಳು?! ನಿಖಿಲ್​ ಬೆಂಬಲಕ್ಕೆ ನಿಂತ ದಚ್ಚು ಫ್ಯಾನ್ಸ್​​​​ ​ ಹೇಳಿದ್ದೇನು?

19859

ಮಂಡ್ಯ ಲೋಕಸಭೆ ಚುನಾವಣಾ ಅಖಾಡ ಪ್ರತಿ ಕ್ಷಣ ಚಿತ್ರ-ವಿಚಿತ್ರ ತಿರುವು ಪಡೆದುಕೊಳ್ಳುತ್ತಿದೆ. ನಿನ್ನೆ ಮೊನ್ನೆವರೆಗೂ  ಪಕ್ಷೇತರ ಅಭ್ಯರ್ಥಿ ಸುಮಲತಾ ಪರ  ಪ್ರಚಾರ ಮಾಡ್ತಿದ್ದ ದರ್ಶನ್ ಅಭಿಮಾನಿ ಗಿರೀಶ್  ಇದ್ದಕ್ಕಿದ್ದಂತೆ ಯೂ ಟರ್ನ್​​ ಹೊಡೆದಿದ್ದು, ದೀಢೀರ ಜೆಡಿಎಸ್​​​ಗೆ ಬೆಂಬಲ ಘೋಷಿಸಿ ಶಾಕ್​ ನೀಡಿದ್ದಾರೆ.

ad

ಹೌದು ಕಳೆದ ಒಂದು ವಾರದ ಹಿಂದೆ ಒಂದೂವರೆ ಸಾವಿರ ಬೆಂಬಲಿಗರೊಂದಿಗೆ ದರ್ಶನ್​ ಜೊತೆ ಸುಮಲತಾ ಪರ ಪ್ರಚಾರಕ್ಕೆ ಇಳಿದಿದ್ದ ಗಿರೀಶ್​ ಇದೀಗ ನಿಖಿಲ್​​ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಇಂದು ನಿಖಿಲ್ ಪರ ಗಿರೀಶ್​ ಅಧಿಕೃತ  ಪ್ರಚಾರ ಆರಂಭಿಸಿದ್ದು, ನಿಖಿಲ್ ಕುಮಾರಸ್ವಾಮಿ ಗೆದ್ದರೇ, ಜಿಲ್ಲೆಗೆ ಇನ್ನಷ್ಟು ಉದ್ಯೋಗಾವಕಾಶ ಹಾಗೂ ಅಭಿವೃದ್ಧಿಯಾಗಲಿದೆ ಎಂಬ ಕಾರಣಕ್ಕೆ ಬೆಂಬಲಿಸುತ್ತಿರುವುದಾಗಿ ಗಿರೀಶ್​ ಹೇಳಿಕೊಂಡಿದ್ದಾರೆ.

 

ದರ್ಶನ ಅಭಿಮಾನಿ ಗಿರೀಶ್​ ಮತ್ತು ಬೆಂಬಲಿಗರು ನಿಖಿಲ್ ಕುಮಾರಸ್ವಾಮಿಗೆ ಬೆಂಬಲ ನೀಡಿದ ಬೆನ್ನಲ್ಲೇ, ​ ವಿಷ್ಣು ಅಭಿಮಾನಿಗಳ ಸಂಘವೂ ಕೂಡ ಜೆಡಿಎಸ್​​ನತ್ತ ಒಲವು ತೋರಿದೆ. ಕೆಆರ್​​ಎಸ್​ನಲ್ಲಿ ಮಗನ ಪರ ಪ್ರಚಾರ ಕೈಗೊಂಡಿದ್ದ ಕುಮಾರಸ್ವಾಮಿಯವರಿಗೆ ವಿಷ್ಣು ಅಭಿಮಾನಿಗಳು ಬೆಂಬಲ ನೀಡಿದ್ದು, ಪ್ರಚಾರದಲ್ಲಿ ಕೈಜೋಡಿಸಿದ್ದಾರೆ.

Sponsored :

Related Articles