ಮೇಟಿ ರಾಸಲೀಲೆ ಪ್ರಕರಣದ ಸಂತ್ರಸ್ಥೆ ಮೇಲೆ ಚಾಕು ಇರಿತ! ಮೇಟಿ ವಿರುದ್ಧ ಕೊಲೆ ಸುಫಾರಿ ಆರೋಪ!

2477
9900071610

ಮಾಜಿ‌‌ ಸಚಿವ ಹೆಚ್ ವೈ ಮೇಟಿ ಪ್ರಕರಣದ ಸಂತ್ರಸ್ತ ಮಹಿಳೆಯ ಕೊಲೆಯತ್ನ ನಡೆದಿದ್ದು, ರಾಜ್ಯವೇ ಬೆಚ್ಚಿ ಬಿದ್ದಿದೆ. ಶನಿವಾರ ಬಾಗಲಕೋಟೆಯ ನವನಗರದಲ್ಲಿರುವ ಸಂತ್ರಸ್ಥೆ ನಿವಾಸದಲ್ಲಿರುವ ವೇಳೆ ಮನೆಗೆ ನುಗ್ಗಿದ ಅಪರಿಚಿತರ ತಂಡ ಮಹಿಳೆಯ ಮುಖ ಹಾಗೂ ಕೈಗೆ ಚಾಕುವಿನಿಂದ ಇರಿದು ಹಲ್ಲೆಗೈದಿದ್ದಾರೆ.

ad

ಗಾಯಗೊಂಡಿರುವ ಸಂತ್ರಸ್ಥೆಯನ್ನು ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗ್ತಿದೆ. ಮಾಜಿ ಸಚಿವ ಹೆಚ್​ವೈ ಮೇಟಿ ನನ್ನ ಕೊಲೆಗೆ ಸುಪಾರಿ ಕೊಟ್ಟಿದ್ದಾರೆ. ನನಗೆ ಜೀವ ಭಯವಿದೆ ರಕ್ಷಣೆ ಬೇಕೆಂದು ಬಾಗಲಕೋಟೆ ನವನಗರ ಠಾಣೆಯಲ್ಲಿ ಸಂತ್ರಸ್ತೆ ದೂರು ದಾಖಲಿಸಿದ್ದಾರೆ.


ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿರುವ ವಿಜಯಲಕ್ಷ್ಮೀ ಕಳೆದ ತಿಂಗಳು ಪಲ್ಸರ್ ಬೈಕ್​ನಲ್ಲಿ ಬಂದ ಇಬ್ಬರು ನನ್ನ ಹತ್ಯೆಗೆ ಯತ್ನಿಸಿದ್ದರು. ಆಗ ನಾನು ತಪ್ಪಿಸಿಕೊಂಡಿದ್ದೇನೆ. ವಿಜಯಪುರದ ರೇಷ್ಮಾ ಮಾದರಿಯಲ್ಲೇ ನನ್ನ ಹತ್ಯೆಗೂ ಸಂಚು ರೂಪಿಸಲಾಗಿದೆ. ನನಗೆ ರಕ್ಷಣೆ ಕೊಡಿ ಎಂದು ಪೊಲೀಸರಿ ಮನವಿ ಮಾಡಿದ್ದಾರೆ.


ಕಳೆದ ಎರಡು ವರ್ಷದ ಹಿಂದೆ ಸಂತ್ರಸ್ಥ ಮಹಿಳೆ ಹಾಗೂ ಎಚ್.ವೈ. ಮೇಟಿ ನಡುವಿನ ಸಿಡಿಯೊಂದು ಬಿಡುಗಡೆಗೊಂಡು ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಸಂತ್ರಸ್ಥ ಮಹಿಳೆ ಆತ್ಮಹತ್ಯೆಗೂ ಕೂಡ ಯತ್ನಿಸಿದ್ದರು.

Sponsored :


9900071610