ಬಡಮಕ್ಕಳ ಪಾಲಿನ ಪುಸ್ತಕ ಕೇರಳದ ರದ್ದಿ ಅಂಗಡಿಗೆ-ಮೈಸೂರಿನಲ್ಲಿ ಬಯಲಾಯ್ತು ಸರ್ಕಾರಿ ಅಕ್ರಮ

407

 

ad

ಎಲ್ಲ ಸರ್ಕಾರಿ ಕಚೇರಿಗಳು ಭ್ರಷ್ಟಾಚಾರದ ಅಡ್ಡೆಗಳಾಗಿವ ಎಂಬ ಕೂಗಿನ ಮಧ್ಯೆಯೇ ಸರ್ಕಾರಿ ಶಾಲಾ ಮಕ್ಕಳ ಪುಸ್ತಕವನ್ನು ಸರ್ಕಾರಿ ಮುದ್ರಣಾಲಯದಿಂದ ರದ್ದಿಗಾಗಿ ಪಕ್ಕದ ರಾಜ್ಯಕ್ಕೆ ಸಾಗಿಸುತ್ತಿದ್ದ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂಗಿದೆ. ಸರ್ಕಾರಿ ಮುದ್ರಣಾಲಯದಿಂದಲೇ ರಾಜಾರೋಷವಾಗಿ ಹೀಗೆ ಪುಸ್ತಕವನ್ನು ರದ್ದಿಗಾಗಿ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದ್ದು, ಸಾಮಾಜಿಕ ಕಾರ್ಯಕರ್ತರು ಈ ಅಕ್ರಮ ಪತ್ತೆಹಚ್ಚಿದ್ದಾರೆ.

ಮೈಸೂರಿನ ಪಠ್ಯಪುಸ್ತಕ ಮುದ್ರಣಾಲಯದ ಗೇಟ್​ ಬಳಿ ಹೀಗೆ ಮುದ್ರಣಾಲಯದಿಂದ ಪುಸ್ತಕಗಳನ್ನು ಕೊಂಡೊಯ್ಯುತ್ತಿದ್ದ ವೇಳೆಯೇ ಲಾರಿಗಳನ್ನು ತಡೆಹಿಡಿಯಲಾಗಿದೆ. ಪ್ರಿಂಟಿಂಗ್​ ಪ್ರೆಸ್​​ನಲ್ಲಿ ಯಾವುದೇ ರೀತಿಯಲ್ಲೂ ಸರಿಯಾಗಿ ಲೆಕ್ಕಪತ್ರಗಳನ್ನು ಇಡಲಾಗಿಲ್ಲ ಎನ್ನಲಾಗಿದೆ. ಸರ್ಕಾರಿ ಅನುದಾನದಲ್ಲಿ ಬಡ ಮಕ್ಕಳಿಗಾಗಿ ಪುಸ್ತಕ ಮುದ್ರಿಸಲಾಗುತ್ತಿದ್ದು, ಬಳಿಕ ಇದನ್ನು ಅಕ್ರಮವಾಗಿ ಕೇರಳ ರಾಜ್ಯಕ್ಕೆ ರದ್ದಿ ಪೇಪರ್​ನಂತೆ ಮಾರಲಾಗುತ್ತಿತ್ತು. ಈ ಅಕ್ರಮವನ್ನು ಸಾಮಾಜಿಕ ಕಾರ್ಯಕರ್ತರು ಪತ್ತೆಹಚ್ಚಿದ್ದಾರೆ. ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

 

ಪರಿಶೀಲನೆ ವೇಳೆ ಲಾರಿಯಲ್ಲಿ ಪ್ರಸಕ್ತವರ್ಷದ ಜನವರಿಯಲ್ಲಿ ಮುದ್ರಣಗೊಂಡಿರುವ 10 ನೇ ತರಗತಿಯ ಇಂಗ್ಲೀಷ್ ಭಾಷೆಯ ಪುಸ್ತಕಗಳು ಲಭ್ಯವಾಗಿದ್ದು, ಮುದ್ರಣಾಲಯದ ಕೆಲ ಸಿಬ್ಬಂದಿಗಳು ದಾಳಿ ವೇಳೆ ಅಧಿಕಾರಿಗಳನ್ನೇ ನಿಂದಿಸಿದ್ದಾರೆ. ಇನ್ನು ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಸರಸ್ವತಿಪುರಂ ಪೊಲೀಸರು ಭೇಟಿ ನೀಡಿದ್ದು, ತನಿಖೆಕೈಗೊಂಡಿದ್ದಾರೆ.

 

 

Sponsored :

Related Articles