ರಾಜ್ಯದಲ್ಲಿ ಇಂದೂ ಮುಂದುವರೆಯಲಿದೆ ರಾಜೀನಾಮೆ ಪರ್ವ! ಕಾಂಗ್ರೆಸ್​​​ ಗೆ ಕೈಕೊಡ್ತಾರೆ ಮತ್ತೆ ಐವರು ಶಾಸಕರು!!

461

ಒಂದೆಡೆ ಮುಂಬೈನಲ್ಲಿ ಡಿಕೆಶಿ ಹಾಗೂ ಅತೃಪ್ತರ ನಡುವೆ ಹೈಡ್ರಾಮಾ ನಡೆದಿರುವ ಬೆನ್ನಲ್ಲೇ ರಾಜ್ಯದಲ್ಲಿಯೂ ಪೊಲಿಟಿಕಲ್​ ಡ್ರಾಮಾ ನಡೆಯುವ ಮುನ್ಸೂಚನೆ ಲಭ್ಯವಾಗಿದೆ. ಇಂದೂ ರಾಜೀನಾಮೆ ಪರ್ವ ಮುಂದುವರಿಯಲಿದ್ದು, 4-5 ಶಾಸಕರು ಮತ್ತೆ ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಲಿದ್ದಾರೆ.

ad

ನಿನ್ನೆ ಮಂಗಳವಾರದ ಹಿನ್ನೆಲೆಯಲ್ಲಿ ಕೆಲ ಶಾಸಕರು ರಾಜೀನಾಮೆಗೆ ಹಿಂಜರಿದಿದ್ದರು. ಆದರೆ ಇಂದು ಎಂಟಿಬಿ ನಾಗರಾಜ್, ಅಂಜಲಿ ನಿಂಬಾಳ್ಕರ್,ಡಾ.ಕೆ.ಸುಧಾಕರ್ ಸೇರಿದಂತೆ ಒಟ್ಟು 5 ಶಾಸಕರು ರಾಜೀನಾಮೆಗೆ ಸಿದ್ಧವಾಗಿದ್ದಾರೆ.


ನಿನ್ನೆ ಕೆಲವು ಕಾರಣಗಳನ್ನು ಕೊಟ್ಟು ಶಾಸಕರುಗಳು ಕಾಂಗ್ರೆಸ್​ ಶಾಸಕಾಂಗ ಸಭೆಗೆ ಗೈರಾಗಿದ್ದರು. ಎಂಟಿಬಿ ನಾಗರಾಜ ಹಾಗೂ ಅಂಜಲಿ ನಿಂಬಾಳ್ಕರ್ ಸೇರಿದಂತೆ ಹಲವರು ಗೈರಾಗಿದ್ದು, ಇಂದು ರಾಜೀನಾಮೆಯೊಂದಿಗೆ ಪ್ರತ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರ್ಕಾರಕ್ಕೆ ಇಂದೂ ಮತ್ತಷ್ಟು ಶಾಕ್​ಗಳು ಕಾದಿದ್ದು, ಏನಾಗುತ್ತೆ ಕಾದು ನೋಡಬೇಕಿದೆ.

Sponsored :

Related Articles