ಸಿದ್ದರಾಮಯ್ಯ ಕೈನಲ್ಲಿ ಕತ್ತಿ !! ಕಾವೇರಿಯಿಂದ ದವಳಗಿರಿಗೆ ಸಿಡಿಯುತ್ತಾ ಕ್ಷಿಪಣಿ !!

1011

ನಿನ್ನೆಯಷ್ಟೇ ನನ್ನ ಮುಂದಿನ ನಡೆ ಮನೆ ಕಡೆ ಎಂದಿದ್ದ ಉಮೇಶ್ ಕತ್ತಿ, ಹಳೇ ಮನೆಯ ಕಡೆಗೆ ಮರಳುವ ಸೂಚನೆ ನೀಡಿದ್ದಾರೆ. ಒಂದು ಕಾಲದ ಜನತಾಪರಿವಾರದ ಗೆಳೆಯ ಸಿದ್ದರಾಮಯ್ಯ ಜೊತೆ ಉಮೇಶ್ ಕತ್ತಿ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ. ಕತ್ತಿ ಸಿದ್ದು ಮಾತುಕತೆ ಡಾಲರ್ಸ್ ಕಾಲನಿಯ ದವಳಗಿರಿ ನಿವಾಸವನ್ನು ನಡುಗಿಸಿದೆ.

ad

ಶಾಸಕರ ಅತೃಪ್ತಿಯನ್ನೇ ದಾಳವಾಗಿಸಿಕೊಂಡು ಸಮ್ಮಿಶ್ರ ಸರ್ಕಾರ ಉರುಳಿಸಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರಕ್ಕೂ ಶಾಸಕರ ಅತೃಪ್ತಿಯೇ ಮುಳುವಾಗುವ ಮುನ್ಸೂಚನೆ ಲಭ್ಯವಾಗಿದ್ದು, ಬಿಜೆಪಿಯ ಹಿರಿಯ ಶಾಸಕ ಉಮೇಶ್ ಕತ್ತಿ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

8 ಬಾರಿ ಶಾಸಕರಾಗಿರುವ ಉಮೇಶ್ ಕತ್ತಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವಲ್ಲಿ ಬಿಎಸ್​ವೈ ವಿಫಲರಾಗಿದ್ದರು. ಇದು ಉಮೇಶ್ ಕತ್ತಿಗೆ ತೀವ್ರ ಅಸಮಧಾನ ತಂದಿದ್ದು, ಬಹಿರಂಗವಾಗಿಯೇ ತಮ್ಮ ಅಸಮಧಾನ ತೋರಿಸಿಕೊಂಡಿದ್ದರು. ಅಷ್ಟೇ ಅಲ್ಲ ಇದೇ ಸಿಟ್ಟಿಗೆ ಪ್ರತ್ಯೇಕ ರಾಜ್ಯಕ್ಕೂ ಬೇಡಿಕೆ ಇಡಲು ಮುಂದಾಗಿದ್ದರು.

 

 

ಕತ್ತಿ ಟೀಂನಿಂದ ಬಂಡಾಯದ ಬಾವುಟ. 22 ಶಾಸಕರ ಬೆಂಬಲದಿಂದ ಸರ್ಕಾರಕ್ಕೆ ಸಂಕಷ್ಟ ತರ್ತಿದ್ದಾರಾ ಕತ್ತಿ?!

ಕತ್ತಿ ಟೀಂನಿಂದ ಬಂಡಾಯದ ಬಾವುಟ. 22 ಶಾಸಕರ ಬೆಂಬಲದಿಂದ ಸರ್ಕಾರಕ್ಕೆ ಸಂಕಷ್ಟ ತರ್ತಿದ್ದಾರಾ ಕತ್ತಿ?!

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಗುರುವಾರ, ಆಗಸ್ಟ್ 22, 2019

ಇದರ ಬೆನ್ನಲ್ಲೇ ಉಮೇಶ್ ಕತ್ತಿಯವರು ಸಿದ್ಧರಾಮಯ್ಯನವರನ್ನು ಭೇಟಿ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ ಸಿದ್ಧರಾಮಯ್ಯನವರಿಗೆ ದೂರವಾಣಿ ಕರೆ ಮಾಡಿ, ಮಾತನಾಡಿದ್ದಾರೆ. ಕತ್ತಿ ದೂರವಾಣಿ ಕರೆ ಮಾಡಿದ್ದರಿಂದ ಸಿದ್ಧರಾಮಯ್ಯ ತಮ್ಮ ದೆಹಲಿ ಪ್ರವಾಸವನ್ನು ರದ್ದುಗೊಳಿಸಿದ್ದು, ಯಾವುದೇ ಕ್ಷಣದಲ್ಲಿ ಕತ್ತಿ ಸಿದ್ದು ಭೇಟಿಯಾಗಬಹುದು.

 

Sponsored :

Related Articles