ವಿದ್ಯುತ್​ ಕದ್ದ ಮಾಜಿ ಕೇಂದ್ರ ಸಚಿವರ ಪತ್ನಿ…! ನೇರ ವಿದ್ಯುತ್​ ಪಡೆದು ವಂಚಿಸಿದವರಿಗೆ ಬೆಸ್ಕಾಂ ವಿಧಿಸಿದ ದಂಡ ಎಷ್ಟು ಗೊತ್ತಾ?!

1269

ರಾಜಕೀಯ ನಾಯಕರು, ಸಚಿವರು, ಶಾಸಕರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸೋದು ಸಾಮಾನ್ಯವಾದ ವಿಚಾರ. ಇದೇ ರೀತಿ ವಿದ್ಯುತ್ ಕಳ್ಳತನ ಮಾಡಿದ ಮಾಜಿ ಕೇಂದ್ರ ಸಚಿವರ ಪತ್ನಿಯೊಬ್ಬರು ಇದೀಗ ಮಾಡಿದ ತಪ್ಪಿಗಾಗಿ ದಂಡ ತೆತ್ತು ಸುದ್ದಿಯಾಗಿದ್ದಾರೆ.

ad

ಹೌದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್​ನ ಹಿರಿಯ ನಾಯಕ ಕೆ.ಎಚ್​.ಮುನಿಯಪ್ಪ ಪತ್ನಿ ಮೇಲೆ ವಿದ್ಯುತ್ ಕಳ್ಳತನ ಆರೋಪ ಕೇಳಿಬಂದಿದೆ. ಬೆಂಗಳೂರಿನ ಸಂಜಯನಗರದ ಬಿಇಎಲ್​​ ರಸ್ತೆಯಲ್ಲಿರುವ ಎರಡು ಅಂತಸ್ಥಿನ ಕಟ್ಟಡಕ್ಕೆ ಮುನಿಯಪ್ಪನವರ ಪತ್ನಿ ರಂಗರತ್ನಮ್ಮ ಮಾಲೀಕರಾಗಿದ್ದಾರೆ. ಈ ಕಟ್ಟಡದಲ್ಲಿ ಜಿಮ್ ಹಾಗೂ ರೆಸ್ಟೋರೆಂಟ್ ನಡೆಯುತ್ತಿದೆ. ಈ ಎರಡು ವಾಣಿಜ್ಯ ಉದ್ದಿಮೆಗಳಿಗೂ ಸಪರೇಟ್​ ಮೀಟರ್ ಅಳವಡಿಸದೇ ಒಂದೇ ಮೀಟರ್ ಅಳವಡಿಸಲಾಗಿದ್ದು, ಆದರೆ ಹೆಚ್ಚಾಗಿ ಬಳಕೆ ಮಾಡಿದ ವಿದ್ಯುತ್​ ಬಿಲ್​ನ್ನು ಅವರು ಪಾವತಿಸಿಲ್ಲ.

ಕಳೆದ 11 ತಿಂಗಳುಗಳಿಂದಲೂ ಮುಖ್ಯ ಲೈನ್ ನಿಂದಲೇ ವಿದ್ಯುತ್’ನ್ನು ನೇರವಾಗಿ ಬಳಕೆ ಮಾಡಿಕೊಳ್ಳಲಾಗಿದೆ. ವಿದ್ಯುತ್ ಕಳ್ಳತನ ಮಾಡಿದ ಹಿನ್ನಲೆಯಲ್ಲಿ ರಂಗರತ್ನಮ್ಮ ಅವರಿಗೆ ಬೆಸ್ಕಾಂ ನಿಯಮಗಳ ಅನ್ವಯ ದಂಡ ವಿಧಿಸಿದ್ದು, ಎರಡು ತಿಂಗಳೊಳಗಾಗಿ ದಂಡದ ಹಣವನ್ನು ಪಾವತಿಸುವಂತೆ ಬೆಸ್ಕಾಂ ಮಾಜಿ ಕೇಂದ್ರ ಸಚಿವರ ಪತ್ನಿಗೆ ತಾಕೀತು ಮಾಡಿದೆ.

Sponsored :

Related Articles