ರಾಜ್ಯದಲ್ಲಿ ಅಧಿಕಾರಿಗಳ ವರ್ಗಾವಣೆಗೆ ಬಿಡ್ಡಿಂಗ್​​ ದಂಧೆ ನಡೆದಿದೆ! ಬಿಎಸ್​ವೈ ವಿರುದ್ಧ ಎಚ್​ಡಿಕೆ ಆರೋಪ!!

432

ರಾಜ್ಯದಲ್ಲಿ ಎದುರಾಗಿರುವ ಪ್ರವಾಹಸ್ಥಿತಿಗೆ ಸ್ಪಂದಿಸುವ ಬದಲು ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಬಿಎಸ್​ವೈ ಸರ್ಕಾರಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ. ಸ್ವಲ್ಪ ದಿನ ವರ್ಗಾವಣೆ ದಂಧೆ ಬಿಟ್ಟು ಜನರ ಕೆಲಸ ಮಾಡಿ. ವರ್ಗಾವಣೆಗೆ ಬಿಡ್ಡಿಂಗ್ ಮಾದರಿಯ ದಂಧೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಿ ಎಂದು ಸೂಚನೆ ನೀಡಿದ್ದಾರೆ.


ಹಾಸನದಲ್ಲಿ ಬಿಎಸ್ವೈ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿಸಿಎಂ ಕುಮಾರಸ್ವಾಮಿ, ರಾಜ್ಯದಲ್ಲಿ ಬೆಡ್ಡಿಂಗ್ ದಂಧೆಯ ಮೂಲಕ ಅಧಿಕಾರಿಗಳನ್ನು ವರ್ಗಾಯಿಸುವ ಕೆಟ್ಟ ಸಂಪ್ರದಾಯಕ್ಕೆ ನಾಂದಿಹಾಡಲಾಗಿದೆ. ಹುದ್ದೆಗಳನ್ನು ಕೋಟಿ ಕೋಟಿ ರೂಪಾಯಿಗೆ ಮಾರಿ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ. ಸಿಎಂ ಯಡಿಯೂರಪ್ಪನವರನ್ನು ದೇವರೇ ಕಾಪಾಡಬೇಕು ಎಂದು ಎಚ್ಡಿಕೆ ವ್ಯಂಗ್ಯವಾಡಿದ್ದಾರೆ.

ad


ಮೈತ್ರಿ ಸರ್ಕಾರದ ಅವಧಿಯಲ್ಲಿ ಸರ್ಕಾರ ಮತ್ತು ಅಧಿಕಾರಿಗಳ ನಡುವೆ ಉತ್ತರ ಬಾಂಧವ್ಯವಿತ್ತು. ಆದರೆ ಬಿಎಸ್​ವೈ ಸರ್ಕಾರದಲ್ಲಿ ಅಧಿಕಾರಿಗಳನ್ನು ಕೋಟಿ ಕೋಟಿ ಹಣಕ್ಕೆ ಹರಾಜುಹಾಕಲಾಗುತ್ತಿದೆ. ಪ್ರಮುಖ ಇಂಜಿನಿಯರ್ ಹುದ್ದೆಗಳಿಗೆ ಓಪನ್ ಬಿಡ್ಡಿಂಗ್ ನಡೀತಿದೆ. ಯಡಿಯೂರಪ್ಪ ಮಾಡಿರುವ ವರ್ಗಾವಣೆ ದಂಧೆ ಬಗ್ಗೆ ತನಿಖೆ ಆಗಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಒಂದಷ್ಟು ದಿನ ವರ್ಗಾವಣೆ ದಂಧೆ ಬಿಟ್ಟು ಪ್ರವಾಹಸಂತ್ರಸ್ಥರಿಗೆ ಸ್ಪಂದಿಸುವ ಕೆಲಸ ಮಾಡಿ BSYಗೆ HDK ಸಲಹೆ

ಒಂದಷ್ಟು ದಿನ ವರ್ಗಾವಣೆ ದಂಧೆ ಬಿಟ್ಟು ಪ್ರವಾಹಸಂತ್ರಸ್ಥರಿಗೆ ಸ್ಪಂದಿಸುವ ಕೆಲಸ ಮಾಡಿ BSYಗೆ HDK ಸಲಹೆ

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಆಗಸ್ಟ್ 11, 2019

ಇನ್ನು ಸಂಪುಟ ರಚನೆ ವಿಚಾರಕ್ಕೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪಗೆ ದೆಹಲಿಯಲ್ಲಿ ಮರ್ಯಾದೆನೇ ಇಲ್ಲ. ಈ ತಿಂಗಳ 16ರ ನಂತರ ದೆಹಲಿಗೆ ಬನ್ನಿ ಎಂದು ಬಿಎಸ್​​ವೈಗೆ ಹೇಳಿದ್ದಾರೆ. ಆದ್ರೆ, ಯಾವಾಗ ಸಂಪುಟ ರಚನೆಯಾಗುತ್ತೋ ಗೊತ್ತಿಲ್ಲ. ಸಂಪುಟ ರಚನೆಯಾಗದೇ ಸಂತ್ರಸ್ತರಿಗೆ ಪರಿಹಾರ ಕಷ್ಟಸಾಧ್ಯ.NDRF ಗೈಡ್​ಲೈನ್ ಪ್ರಕಾರವಾದ್ರೂ ಪರಿಹಾರ ನೀಡಬೇಕು. ಕೇಂದ್ರದಿಂದ 4-5 ಸಾವಿರ ಕೋಟಿ ಹಣ ಬಿಡುಗಡೆ ಮಾಡಬೇಕು . ಕೇಂದ್ರ ಸರ್ಕಾರ ನೆರೆ ರಾಜ್ಯಗಳಿಗೆ ಕೊಟ್ಟ ನೆರವನ್ನ ನಮಗೂ ಕೊಡಬೇಕು. ತಕ್ಷಣ ಸರ್ವಪಕ್ಷ ಸಭೆ ಕರೆದು, ಪ್ರವಾಹದ ಬಗ್ಗೆ ಚರ್ಚೆ ನಡೆಸಬೇಕು ಎಂದು ಎಚ್​ಡಿಕೆ ಆಗ್ರಹಿಸಿದ್ದಾರೆ.

Sponsored :

Related Articles