ಬಾಟಲ್​ ಕ್ಯಾಪ್​ ಓಫನ್ ಚಾಲೆಂಜ್​ ಪೊರೈಸಿದ ದೇವರು! ವಿಡಿಯೋ ಸಖತ್ ವೈರಲ್​!!

311

ಕಾಲಿನಿಂದ ಬಾಟಲಿನ ಕ್ಯಾಪ್ ನನ್ನು ಓಪನ್ ಮಾಡಿದರೆ ಬಾಟಲ್ ​​ಕ್ಯಾಪ್​ ಚಾಲೆಂಜ್ರೈ ಪೊರೈಸಿದಂತೆ ಸದ್ಯ ಈ ಚಾಲೆಂಜ್ ಎಷ್ಟು ಫೇಮಸ್ ಆಗಿದೆ ಎಂದರೆ ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರೆಟಿಗಳವರೆಗೂ ಈ ಬಾಟಲ್ ಕ್ಯಾಪ್ ಚಾಲೆಂಜ್ ಕ್ರೇಜ್ ಹುಟ್ಟಿಸಿದೆ. ಅಷ್ಟಲ್ಲದೆ ಹಿರಿಯರಿಂದ ಹಿಡಿದು ಕಿರಿಯರು, ಹೆಂಗಸರು ಸಹ ಬಾಟಲ್ ​​ಕ್ಯಾಪ್​ ಓಪನ್​ ಚಾಲೆಂಜ್ ಮಾಡಲು ಪ್ರಾರಂಭಿಸಿದ್ದಾರೆ. ಇದೀಗಾ ಅಷ್ಟು ಟ್ರೆಂಡ್ ಸೆಟ್ ಹುಟ್ಟುಹಾಕಿರುವ ಬಾಟಲ್ ಕ್ಯಾಪ್ ಚಾಲೆಂಜ್ ನನ್ನು ಸಾಮನ್ಯರು, ಸೆಲೆಬ್ರೆಟಿಗಳನ್ನು ಬಿಟ್ಟು ದೇವರೆ ಬಂದು ಮಾಡಿದರೆ ಹೇಗಿರುತ್ತದೆ? ಹಾಗಾದರೆ ಈ ಸ್ಟೋರಿ ಓದಿ..

ad

ಹೌದು ಟಿಕ್ ಟಾಕ್ ನಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ಫೇಮಸ್ ಆಗಿದೆ. ಇನ್ನೂ ಜನರು ಭಿನ್ನ ವಿಭಿನ್ನವಾಗಿ ಬಾಟಲ್​ ಕ್ಯಾಪ್​ ಓಪನ್​ ಮಾಡುವ ಮೂಲಕ ತಮ್ಮ ವೀಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಇದೀಗಾ ಇದೇ ಸಾಲಿಗೆ ದೇವರನ್ನು ಸಹ ಬಿಡದೇ ಕೊಂಡೊಯ್ದಿದ್ದಾರೆ.

ಹೌದು ಟಿಕ್​​ಟಾಕ್​ ಬಳಕೆದಾರ ವೈಭವ್​ ಎನ್ನುವ ವ್ಯಕ್ತಿ ದೇವರ ರೀತಿ ವೇಷ ಧರಿಸಿ ಬಾಟಲ್​​ ಮುಂದೆ ಒಂದು ಸುತ್ತು ತಿರುಗಿ, ಅರ್ಧಕ್ಕೇ ನಿಂತು, ವಾಪಸ್​ ತಿರುಗಿ ಕೇವಲ ಕೈ ತೋರಿಸಿ ಬಾಟಲ್​​​ ಕ್ಯಾಪ್​​ ಓಪನ್​ ಮಾಡುತ್ತಾರೆ. ಒಂದು ಕ್ಷಣ ಇದು ಹೇಗಪ್ಪಾ ಸಾಧ್ಯ ಅಂತ ಜನ ನಿಬ್ಬೆರಗಾಗಿದ್ದಾರೆ. ಸದ್ಯ ಈ ವೀಡಿಯೋವನ್ನು ಸೋಷಿಯಲ್ ಮೀಡಿಯದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗುತ್ತಿದೆ.

Sponsored :

Related Articles