ಇಂದು ಸ್ಪೀಕರ್ ಕಚೇರಿ ಬಳಿ ನಡೆಯಲಿದೆ ಹೈಡ್ರಾಮಾ! ರಾಜೀನಾಮೆ ನೀಡಿ ಅತೃಪ್ತರಿಗೆ ಜೊತೆಯಾಗಲಿದ್ದಾರೆ ಮತ್ತಷ್ಟು ಶಾಸಕರು!!

463

ನಿನ್ನೆ ಡಾ.ಸುಧಾಕರ್ ರಾಜೀನಾಮೆ ವೇಳೆ ವಿಧಾನಸೌಧದಲ್ಲಿ ಹೈಡ್ರಾಮಾ ನಡೆದ ಬೆನ್ನಲ್ಲೇ, ಇಂದು ಸಂಜೆ ಕೂಡ ವಿಧಾನಸೌಧದಲ್ಲಿ ಮತ್ತೊಂದು ಮಹಾಹೈಡ್ರಾಮಾ ನಡೆಯುವ ಮುನ್ಸೂಚನೆ ಲಭ್ಯವಾಗಿದೆ. ಹೌದು ಅತೃಪ್ತ ಶಾಸಕರು ಬೆಂಗಳೂರಿಗೆ ಬರ್ತಿದ್ದಂತೆ ವಿಧಾನಸೌಧದಲ್ಲಿ ಮತ್ತಷ್ಟು ಶಾಸಕರು ಅತೃಪ್ತರ ಗುಂಪು ಸೇರಿಕೊಳ್ಳುವ ಸಾಧ್ಯತೆ ಇದೆ.


ಸುಪ್ರೀಂ ಕೋರ್ಟ್ ಸೂಚನೆಯಂತೆ ಅತೃಪ್ತ ಶಾಸಕರು ಸಂಜೆ 6 ಗಂಟೆಯೊಳಗೆ ಸ್ಪೀಕರ್ ಕಚೇರಿಯಲ್ಲಿ ಹಾಜರಾಗಬೇಕು. ಈ ಹಿನ್ನೆಲೆಯಲ್ಲಿ ಈಗಾಗಲೇ ಶಾಸಕರು ಬೆಂಗಳೂರಿನತ್ತ ಮುಖಮಾಡಿದ್ದಾರೆ. ಈ ಮಧ್ಯೆ ಈ ಅತೃಪ್ತ ಶಾಸಕರು ಸ್ಪೀಕರ್ ಕಚೇರಿಗೆ ಬರುತ್ತಿದ್ದಂತೆ ಅವರೊಂದಿಗೆ ಇನ್ನೈದು ಅತೃಪ್ತ ಶಾಸಕರು ಸೇರಿಕೊಳ್ಳಲಿದ್ದಾರಂತೆ.

ad

ಬಸವನಗೌಡ ದದ್ದಲ್, ಅಂಜಲಿ ನಿಂಬಾಳ್ಕರ್,ಗಣೇಶ್ ಹುಕ್ಕೇರಿ,ಆನೇಕಲ್ ಶಿವಣ್ಣ ಹಾಗೂ ಸೌಮ್ಯ ರೆಡ್ಡಿ ಈ ಅತೃಪ್ತರ ಜೊತೆಗೂಡಿ ಸ್ಪೀಕರ್ ಕಚೇರಿಯಲ್ಲಿ ರಾಜೀನಾಮೆ ನೀಡಲಿದ್ದಾರಂತೆ. ಒಂದೊಮ್ಮೆ ಈ ಐವರು ಶಾಸಕರು ಅತೃಪ್ತರ ಟೀಂ ಸೇರಿಕೊಂಡ್ರೆ ಅತೃಪ್ತರ ಸಂಖ್ಯೆ 21 ಕ್ಕೆ ಏರಲಿದೆ.

Sponsored :

Related Articles