ಚಿತ್ರದಲ್ಲಿ ಮಿಂಚಲಾಗದಿದ್ದರೂ ಪೋಟೋ ಶೂಟ್​ನಲ್ಲಿ ಮನಸೆಳೆದ ಬೆಡಗಿ…! ಹಾಟ್​ ಲುಕ್​ನಲ್ಲಿ ಮೋಡಿ ಮಾಡಿದ ಟಾಲಿವುಡ್​​ ಹುಡುಗಿ…!!

2761

ಟಾಲಿವುಡ್ ನ ಮೆಂಟಲ್​ ಮದಿಲೊ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ನಿವೇತಾ. ಸಿನಿಮಾಗಳಲ್ಲಿ ತಾವು ನಿರೀಕ್ಷಿಸಿದ ಮಟ್ಟಕ್ಕೆ ಮಿಂಚಲು ಆಗದೇ ಇದ್ದರೂ ಸಹ ಇದೀಗಾ ಮುಂದಿನ ಚಿತ್ರದಲ್ಲಿ ಮತ್ತೊಮ್ಮೆ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ  ಸಂಚಲನ ಮೂಡಿಸಿದ್ದಾರೆ.


ಸದ್ಯ ಅಲಾ ವೈಕುಂಟಪುರಂಲೊ ಚಿತ್ರದಲ್ಲಿ ಬ್ಯುಸಿಯಾಗಿರುವ ನಿವೇತಾ ಆ ಚಿತ್ರಕ್ಕಾಗಿ ಸ್ಪೆಶಲ್ ಪೋಟೋ ಶೂಟ್​ ಮಾಡಿಸಿದ್ದು,  ಚಿತ್ರದ ಕೆಲವು  ಹಾಟ್ ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಅಲ್ಲದೆ ನಿವೇತಾ ಹಾಟ್ ಲುಕ್ ಗೆ ಪ್ರೇಕ್ಷಕ ಫುಲ್ ಫಿದಾ ಆಗಿದ್ದಾರೆ.

ad

ಹೌದು ತೆಲುಗಿನ ಮೆಂಟಲ್​ ಮದಿಲೊ ಚಿತ್ರದಲ್ಲಿ ನಾಯಕ ವಿಷ್ಣು ಜೊತೆ ಸಖತ್ ರೋಮ್ಯಾನ್ಸ್ ಮಾಡಿದ್ದರು ಅದ್ಯಾಕೋ ನಿವೇತಾಗೆ ಟಾಲಿವುಡ್ ನಲ್ಲಿ ನಟಿಸಲು ಅವಕಾಶಗಳು ಸಿಗಲಿಲ್ಲ. ನಂತರ ತಮಿಳಿನ ಸಿನಿಮಾದ ರಿಮೇಕ್ ಟಿಕ್​ ಟಿಕ್​ ಟಿಕ್​ ಚಿತ್ರದಲ್ಲೂ ವರುಣ್​ ತೇಜ್​ ಜತೆ ಬಣ್ಣಹಚ್ಚಿದ್ದರು.

ಇನ್ನೂ ಚಿತ್ರದಲ್ಲಿ ನಿವೇತಾ ಪಾರ್ಫಮೆನ್ಸ್ ಚೆನ್ನಾಗಿಯೇ ಇದ್ದರೂ ಚಿತ್ರ ಬಾಕ್ಸ್ ಆಫಿಸ್ ನಲ್ಲಿ ಸದ್ದಿಲ್ಲದಂತೆಯೇ ಬಂದ ಹಾಗೆಯೇ ಹೊರಟು ಹೋಯಿತು. ಆದರೂ ಪ್ರಯತ್ನ ಬಿಡದ ನಿವೇತಾ ಇದೀಗಾ ಮತ್ತೊಂದು ನೂತನ ಚಿತ್ರ ಅಲಾ ವೈಕುಂಟಪುರಂಲೊ ಚಿತ್ರದಲ್ಲಿ ನಟಿಸಲು ಮುಂದಾಗಿದ್ದಾರೆ. ಇನ್ನೂ ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡ್ ಕ್ಯಾರೆಕ್ಟರ್ ನಲ್ಲಿ ಕಾಣಿಸಿಕೊಳ್ಳಲಿರುವ ನಿವೇತಾ ಹಾಟ್ ಆಗಿಯು ಕಾಣಿಸಿಕೊಂಡಿದ್ದಾರೆ.

Sponsored :

Related Articles