ಡಾರ್ಲಿಂಗ್ ಪ್ರಭಾಸ್ ನಾಳೆ ಕೊಡ್ತಿದ್ದಾರೆ ಸೂಪರ್​ ಗಿಫ್ಟ್​..! ಏನದು..?

888

ಬಾಹುಬಲಿ ಸೂಪರ್ ಡೂಪರ್ ಸಕ್ಸಸ್ ಬಳಿ ಡಾರ್ಲಿಂಗ್ ಪ್ರಭಾಸ್​ ಅಭಿನಯಿಸ್ತಿರೋ ಅಪ್​ಕಮ್ಮಿಂಗ್ ಸಿನಿಮಾ ಸಾಹೋ. ಸ್ಯಾಂಪಲ್ಸ್​​ನಿಂದಲೇ ಸೌತ್ ಸಿನಿ ದುನಿಯಾದಲ್ಲಿ ಬೇಜಾನ್ ಟಾಕ್ ಕ್ರಿಯೇಟ್ ಮಾಡಿರೋ ಸಾಹೋ ರಿಲೀಸ್​ಗೆ ರೆಡಿಯಾಗಿದೆ. ಅಂದಹಾಗೇ ಸಾಹೋ ಆ್ಯಕ್ಷನ್ ಸಿನಿಮಾವಾಗಿದ್ದು, ಸುಜೀತ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ad

ಡಾರ್ಲಿಂಗ್​ಗೆ ಜೋಡಿಯಾಗಿ ಬಿಟೌನ್ ಬೆಡಗಿ ಶ್ರದ್ಧಾ ಕಪೂರ್ ಅಭಿನಯಿಸಿದ್ದಾರೆ. ಅಲ್ಲದೇ ಬಾಹುಬಲಿ ಹಿಟ್ ಬಳಿಕ ಪ್ರಭಾಸ್ ಅಭಿನಯದ ಯಾವುದೇ ಸಿನಿಮಾ ತೆರೆಗಪ್ಪಳಿಸ್ತಿಲ್ಲ. ಹೀಗಾಗಿ ಪ್ರಭಾಸ್ ಸಾಹೋ ನೋಡಲು ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಈ ಎಕ್ಸೈಟ್ ನಡುವೆ ಡಾರ್ಲಿಂಗ್ ಅಭಿಮಾನಿಗಳಿಗೆ ಸೂಪರ್ ಸರ್​ಪ್ರೈಸ್ ಕೊಡಲು ರೆಡಿಯಾಗಿದ್ದಾರೆ.

ಈ ಬಗ್ಗೆ ವಿಡಿಯೋವನ್ನ ಹಂಚಿಕೊಂಡಿರೋ ಪ್ರಭಾಸ್ ಹಲೋ ಡಾರ್ಲಿಂಗ್ ನಾಳೆ ನಿಮಗೊಂದು ಸರ್​ಪ್ರೈಸ್ ವೇಟ್ ಮಾಡ್ತಿದೆ. ನಾಳೆ ನನ್ನ ಇನ್​ಸ್ಟಾಗ್ರಾಂ ಚೆಕ್ ಮಾಡಿ ಅಂತಾ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ಅಷ್ಟಕ್ಕೂ ಪ್ರಭಾಸ್ ಕೊಡ್ತಿರೋ ಗಿಫ್ಟ್ ಏನು ಅಂತಾ ಅಭಿಮಾನಿಗಳು ಈಗಿನಿಂದಲ್ಲೇ ಕ್ಯಾಲಿಕೇಷನ್ ಮಾಡ್ತಿದ್ದಾರೆ. ಅದು ಸಾಹೋ ಸಿನಿಮಾದ ಬಗ್ಗೆ ಅನ್ನೋದು ಗೊತ್ತಾಗ್ತಿದೆ. ಹ್ಯಾಷ್ ಟ್ಯಾಗ್ ಹಾಕಿ ಸಾಹೋ ಸರ್​ಪ್ರೈಸ್ ಅಂತಾ ವಿಡಿಯೋ ಹಂಚಿಕೊಂಡಿದ್ದಾರೆ. ಹಾಗಿದ್ರೆ ನಾಳೆ ಡಾರ್ಲಿಂಗ್ ಫ್ಯಾನ್ಸ್​ಗೆ ಕೊಡ್ತಿರೋ ಆ ಸರ್​ಪ್ರೈಸ್​ ಏನು ಅಟನ್ನೋದು ಗೊತ್ತಾಗುತ್ತದೆ.

Sponsored :

Related Articles