ಟೋಯಿಂಗ್​ ಏಜೆನ್ಸಿಗಳ ವಿರುದ್ಧ ಖುದ್ದು ಫಿಲ್ಡ್​​ಗಿಳಿದ ಟ್ರಾಫಿಕ್​ ಕಮೀಷನರ್​​​! ಅಂಧಾ ದರ್ಬಾರ್ ಗೆ ಬಿತ್ತು ಬ್ರೇಕ್​!!

3003
9900071610

ಬೆಂಗಳೂರಿನಲ್ಲಿ ಟೋಯಿಂಗ್ ಏಜೆನ್ಸಿ ಮಾಲೀಕರ ಅಟ್ಟಹಾಸ ಎಲ್ಲೇ ಮೀರಿತ್ತು. ನೋ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ ವಾಹನಗಳನ್ನು ತೆಗೆದುಕೊಂಡು ಹೋಗುವ ನೆಪದಲ್ಲಿ ದಂಧೆಯೇ ಆರಂಭವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ಬೆಂಗಳೂರು ಟ್ರಾಫಿಕ್ ಕಮೀಷನರ್ ಪಿ.ಹರಿಶೇಖರ್​ ಖುದ್ದು ಕಣಕ್ಕೆ ಇಳಿದಿದ್ದಾರೆ.

ad


ಹೌದು ಟೋಯಿಂಗ್ ಹೆಸರಿನಲ್ಲಿ ವಾಹನ ಎತ್ತಿಕೊಂಡು ಹೋಗುವ ಸಿಬ್ಬಂದಿ ಬೇಕಾಬಿಟ್ಟಿ ವರ್ತಿಸುತ್ತಿದ್ದರು. ಈ ಬಗ್ಗೆ ಸಾರ್ವಜನಿಕರ ಸಾಕಷ್ಟು ಭಾರಿ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದರೂ ಕ್ರಮವಾಗಿರಲಿಲ್ಲ. ಆದರೆ ಇದೀಗ ಈ ಅಂಧಾದರ್ಬಾರ ಮಾಹಿತಿ ಪಡೆದ ಟ್ರಾಫಿಕ್ ಕಮೀಷನರ್ ಹರಿಶೇಖರ್ ಟೋಯಿಂಗ್ ಎಜೆನ್ಸಿಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


ವಾಹನಗಳನ್ನು ಟೋಯಿಂಗ್ ಮಾಡುವ ಮುನ್ನ ಮೂರು ಬಾರಿ ವಾಹನ ಸಂಖ್ಯೆಯನ್ನು ಅನೌನ್ಸ್ ಮಾಡಬೇಕು. ವಾಹನಗಳನ್ನು ನೋಡಿದ್ರೆ ನೀವು ಎಷ್ಟು ಗುಣಮಟ್ಟದಲ್ಲಿ ಟೋಯಿಂಗ್ ಮಾಡುತ್ತೀರಿ ಎಂಬುದು ಅರ್ಥವಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡ ಹರಿಶೇಖರ್​ ಎಜೆನ್ಸಿಗಳಿಗೆ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.


ದೂರುಗಳ ಹಿನ್ನೆಲೆಯಲ್ಲಿ ಖುದ್ದು ರಸ್ತೆಗಿಳಿದ ಹರಿಶೇಖರನ್​, ಪೂರ್ವ ಸಂಚಾರ ವಿಭಾಗದಲ್ಲಿರುವ ಒಟ್ಟು 16 ಸಂಚಾರ ಪೊಲೀಸ್ ಠಾಣೆಗಳ ಟೋಯಿಂಗ್ ವಾಹನಗಳ ಪರಿಶೀಲನೆ ನಡೆಸಿದರು. ಅಶೋಕ್ ನಗರ ಕೆ ಎಸ್ ಆರ್ ಪಿ ಮೈದಾನದಲ್ಲಿ ಟೋಯಿಂಗ್ ವಾಹನಗಳ ಗುಣಮಟ್ಟ ಪರಿಶೀಲನೆ ನಡೆಸಿದ ಅವರಿಗೆ 16 ಠಾಣೆ ಸಂಚಾರ ಇನ್ಸ್‌ಪೆಕ್ಟರ್ ಗಳು ,ಎಸಿಪಿಗಳು ಸಂಚಾರ ಆಯುಕ್ತರಿಗೆ ಸಾಥ್ ನೀಡಿದರು.

Sponsored :


9900071610