ನಿಯಮ ಉಲ್ಲಂಘಿಸಿದ್ದಕ್ಕೆ ಶೂನಲ್ಲಿ ಹೊಡೆದ ಸಂಚಾರಿ ಪೊಲೀಸ್ ಪೇದೆ- ಪೊಲೀಸರ ದುವರ್ತನೆಗೆ ವ್ಯಾಪಕ ಆಕ್ರೋಶ!

2381

ಸಾಕಷ್ಟು ಒಳ್ಳೆಯ ಕೆಲಸಗಳ ಮೂಲಕ ದೇಶದ ಗಮನ ಸೆಳೆದ ಬೆಂಗಳೂರು ಪೊಲೀಸರು ಆಗಾಗ ತಮ್ಮ ಎಡವಟ್ಟುಗಳಿಂದಲೂ ಸುದ್ದಿಯಾಗುತ್ತಾರೆ. ಇದೀಗ ಇಂತಹುದೇ ಘಟನೆಯೊಂದು ನಡೆದಿದ್ದು, ಸಂಚಾರಿ ನಿಯಮಗಳನ್ನು ಪಾಲಿಸದೇ ಸಂಚರಿಸುತ್ತಿದ್ದ ದ್ವಿಚಕ್ರವಾಹನ ಸವಾರರ ಮೇಲೆ ಶೂ ಎಸೆದು ಪೊಲೀಸ್ ಪೇದೆಯೊಬ್ಬ ಸುದ್ದಿಯಾಗಿದ್ದಾರೆ.

ad

ಹೌದು ನ್ಯೂ ಬಿಇಎಲ್​ ರಸ್ತೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಚಿಕ್ಕಜಾಲ ಸಂಚಾರಿ ಪೊಲೀಸ್ ಠಾಣೆಯ ಸಿಬ್ಬಂದಿ ಗಸ್ತಿನಲ್ಲಿದ್ದ ವೇಳೆ ಇಬ್ಬರು ಯುವಕರು ಬೈಕ್​ನಲ್ಲಿ ಹೆಲ್ಮೆಟ್​ ಇಲ್ಲದೇ ಸಂಚರಿಸುತ್ತಿದ್ದರು. ಈ ವೇಳೆ ರಸ್ತೆ ಬದಿಯಲ್ಲಿ ಸಂಚಾರಿ ನಿಯಮಗಳ ಉಲ್ಲಂಘನೆ ಪರಿಶೀಲಿಸುತ್ತಿದ್ದ ಪೇದೆಯೊಬ್ಬ ಬೈಕ್​ನಲ್ಲಿ ತೆರಳುತ್ತಿದ್ದ ವಾಹನ ಸವಾರರ ಮೇಲೆ ಶೂ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾನೆ. ಇದೇ ವೇಳೆ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ತಮ್ಮ ಮೊಬೈಲ್​​ನಲ್ಲಿ ಚಿತ್ರೀಕರಿಸಿದ್ದು, ಇದೀಗ ಈ ದೃಶ್ಯವನ್ನು ಯೂಟ್ಯೂಬ್​​​ಗೆ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್​ ಆಗಿದ್ದು, ನಿಯಮ ಉಲ್ಲಂಘಿಸಿದ್ದಕ್ಕೆ ಚಪ್ಪಲಿಯಲ್ಲಿ ಹೊಡೆಯುವುದು ಯಾವ ನ್ಯಾಯ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದು, ಸಂಚಾರಿ ಪೊಲೀಸರ ಕಾರ್ಯವೈಖರಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.

Sponsored :

Related Articles