ಬಿಎಸ್​ವೈ ಸರ್ಕಾರದಲ್ಲಿ ಪ್ರಾಮಾಣಿಕರಿಗಿಲ್ಲ ಉಳಿಗಾಲ…! ಸರ್ಕಾರಿ ಭೂಮಿ ಉಳಿಸಿದ IAS ಅಧಿಕಾರಿ ಮೌದ್ಗಿಲ್​ಗೆ ಟ್ರಾನ್ಸಫರ್​ ಶಿಕ್ಷೆ​ !!

1661

ಎಲ್ಲೆ ಹಾಕಿದ್ರೂ ಬಡಜನ, ರೈತರು, ಸಾಮಾನ್ಯ ನಾಗರಿಕರಿಗಾಗಿ ಕೆಲಸ ಮಾಡುತ್ತಿದ್ದ ಹಿರಿಯ ಐಎಎಸ್ ಅಧಿಕಾರಿ ಸರ್ವೇ ಇಲಾಖೆ ಕಮಿಷನರ್​ ಮುನೀಶ್​ ಮೌದ್ಗಿಲ್​ರನ್ನು ಸರ್ಕಾರ ಎತ್ತಂಗಡಿ ಮಾಡಿದೆ. ಇವರ ದಕ್ಷತೆ, ಪ್ರಾಮಾಣಿಕತೆ ಹಾಗೂ ವರ್ಕೋಹಾಲಿಕ್​ ಗುಣವನ್ನು ಬಳಿಸಿಕೊಳ್ಳುವ ಬದಲು ಮೈಸೂರಿನ ಎಟಿಐಗೆ (ಆಡಳಿತ ಸುಧಾರಣೆ ಮತ್ತು ತರಬೇತಿ) ಸಂಸ್ಥೆಗೆ ಡೈರೈಕ್ಟರ್ ಜನರಲ್ ಆಗಿ ವರ್ಗಾಯಿಸಿದೆ.


ಕಳೆದ ಎರಡು ವರ್ಷದಿಂದ ಭೂಮಾಪನ ಇಲಾಖೆಯಲ್ಲಿ ಸಂಚಲನ ಮೂಡಿಸಿದ್ದ ಮೌದ್ಗಿಲ್ ಅವರು, ಲಂಚಬಾಕ, ಸೋಮಾರಿ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದರು. ಆನ್ಲೈನ್​ ಕನವರ್ಸನ್​, ಪಹಣಿ ತಿದ್ದುಪಡಿ, ಪೋಡಿ ಕಾರ್ಯಗಳಲ್ಲಿ ಟಾರ್ಗೆಟ್​ ಕೊಟ್ಟು ಅಧಿಕಾರಿಗಳನ್ನು ಕೆಲಸಕ್ಕೆ ಬಗ್ಗಿಸಿದ್ದರು.

ad

ಸಾಲಮನ್ನಾಕೋಶದ ಮುಖ್ಯಸ್ಥರು ಆಗಿದ್ದ ಇವರು, ತಂತ್ರಜ್ಞಾನದ ಮೂಲಕ ಅರ್ಹರಿಗೆ ಸಾಲಮನ್ನಾ ಸೌಲಭ್ಯ ತಲುಪಿಸಲು ಶ್ರಮಿಸುವ ಮೂಲಕ ಇಡಿ ದೇಶಕ್ಕೆ ಮಾದರಿಯಾಗಿದ್ದರು. ದಿಶಾಂಕ ಆ್ಯಪ್​ ಅಭಿವೃದ್ಧಿ ಪಡಿಸುವ ಮೂಲಕ ಯಾರದ್ದೋ ಭೂಮಿ,ನಿವೇಶನವನ್ನು ಕಬಳಿಸುವವರಿಗೆ ಪಾಠ ಕಲಿಸಿದ್ದರು.

 

ಮೊನ್ನೆಯಷ್ಟೇ ಆನೇಕಲ್​ ತಾಲೂಕಿನ 19 ಎಕರೆ ಸರ್ಕಾರಿ ಜಮೀನನ್ನು ಖಾಸಗಿ ಪಾಲು ಮಾಡಿದ್ದ ಅಧಿಕಾರಿಗಳು, ಖಾಸಗಿ ವ್ಯಕ್ತಿಗಳಿಗೆ ಶಿಕ್ಷೆಯಾಗುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ವರದಿ ಸಲ್ಲಿಸಿದ್ದರು. ಆದರೆ ಇದೆಲ್ಲ ಪರಿಗಣಿಸಬೇಕಾದ ಸರ್ಕಾರ ಇದೀಗ ವಿನಾಕಾರಣ ಮುನೀಶ್ ಮೌದ್ಗಿಲ್ ವರ್ಗಾಯಿಸುವ ಮೂಲಕ ಈ ಸರ್ಕಾರದಲ್ಲಿ ಪ್ರಾಮಾಣಿಕರಿಗೆ ವರ್ಗಾವಣೆಯೇ ಶಿಕ್ಷೆ ಎಂಬಂತೆ ವರ್ತಿಸಿದ್ದು, ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆಕ್ಷೇಪಕ್ಕೆ ಕಾರಣವಾಗಿದೆ.

Sponsored :

Related Articles