ಈ ಸಿನೇಮಾಗೆ ಮಂಗಳಮುಖಿಯೇ ನಾಯಕಿ !! ಸಿನೇಮಾ ಚಿತ್ರೀಕರಣ ಹೇಗಿದೆ ಗೊತ್ತಾ ?

877
9900071610

ಸ್ಯಾಂಡಲ್​ವುಡ್​ನಲ್ಲಿ ಮೊಟ್ಟ ಮೊದಲ ಬಾರಿಗೆ ಮಂಗಳಮುಖಿ ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಲವ್ ಬಾಬಾ ಸಿನಿಮಾಗೆ ಆಯ್ಕೆಯಾಗಿರುವ ಕಾಜೋಲ್ ಮಂಡ್ಯದವ್ರು. ರೇಡಿಯೋ ಜಾಕಿ ಆಗಿ ಕೆಲಸ ಮಾಡ್ತಿರುವ ಕಾಜೋಲ್​ರನ್ನ ತಮ್ಮ ಚಿತ್ರಕ್ಕೆ ನಿರ್ದೇಶಕ ಚಂದನ್ ಗೌಡ ಸೆಲೆಕ್ಟ್ ಮಾಡಿದ್ದಾರೆ.
ಕಾಜೋಲ್ ಈ ಅವಕಾಶ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದಾಳೆ. ಮತ್ತೊಂದು ವಿಶೇಷ ಅಂದ್ರೆ ಲವ್ ಬಾಬಾ ಸಿನಿಮಾ ಮೊಬೈಲ್​ನಲ್ಲೇ ಚಿತ್ರೀಕರಣ ನಡೆಯಲಿದೆ.

ad

ಮೂಲತಃ ಮಂಡ್ಯದವರಾದ ಇವರು ಕಳೆದ ಒಂದು ದಶಕದಿಂದ ಉಡುಪಿಯಲ್ಲಿ ನೆಲೆಸಿದ್ದಾರೆ. ಇಲ್ಲಿಗೆ ಬಂದ ನಂತ್ರ ರಂಗಭೂಮಿ ನಟಿಯಾಗಿ, ರೇಡಿಯೋ ಜಾಕಿಯಾಗಿ ಗಮನಸೆಳೆದಿದ್ದು, ಈಗ ಸ್ಯಾಂಡಲ್‌ವುಡ್ ಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.
ತೃತೀಯ ಲಿಂಗಿಗಳು ಮತ್ತು ಮಂಗಳಮುಖಿಯರನ್ನು ಸಿನಿಮಾಗಳಲ್ಲಿ ತಮಾಷೆಯ ವಸ್ತುವಾಗಿ ತೋರಿಸೋರೇ ಹೆಚ್ಚು. ಆದರೆ ಸ್ಯಾಂಡಲ್‌ವುಡ್ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಲು ಆಯ್ಕೆಯಾಗಿದ್ದಾರೆ.

ರಂಗಭೂಮಿ ನಟಿಯಾಗಿ `ಐ…ಸಿಯೂ ನೋಡುವೆ ನಿನ್ನ’ ಎಂಬ ನಾಟಕದ ಮೂಲಕ ಸದ್ದು ಮಾಡಿದ್ದ ಕಾಜೋಲ್ ಈ ಅವಕಾಶ ಪಡೆಯುವ ಮೂಲಕ ರಾಜ್ಯದ ಗಮನ ಸೆಳೆದಿದ್ದಾಳೆ. ಇನ್ನೂ ಆರಂಭದಲ್ಲಿ ಡ್ಯಾನ್ಸರ್ ಆಗಿದ್ದ ಕಾಜೋಲ್, 2008ರಲ್ಲಿ ಮುಂಬೈನಲ್ಲಿ ಬಿಪಾಷಾ ಬಸು ಜೊತೆ ನೃತ್ಯ ಮಾಡಿರುವುದು ಬಿಟ್ಟರೆ, ಸಿನಿಮಾದ ಯಾವುದೇ ಅನುಭವವಿಲ್ಲ. ಇತ್ತೀಚಿನ ದಿನಗಳಲ್ಲಿ ತೃತೀಯ ಲಿಂಗಿಗಳು ನಾನಾ ಕ್ಷೇತ್ರಗಳಲ್ಲಿ ಹೆಸರು ಮಾಡೋದನ್ನು ನೊಡಿದ್ದೇವೆ. ಆದರೆ, ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ನಾಯಕಿಯಾಗುವ ಮೂಲಕ ಆ ವರ್ಗದವರಿಗೆ ಮಾದರಿಯಾಗಲ್ಲಿದ್ದಾರೆ. ಪ್ರೇಕ್ಷಕರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರೆ ಕನ್ನಡ ಚಿತ್ರರಂಗದಲ್ಲಿ ಇದೊಂದು ಮೈಲಿಗಲ್ಲಾಗಲಿದೆ.

Sponsored :


9900071610