ಇಸ್ಪೀಟ್​ ಆಡುತ್ತ ರೌಡಿಸಂ ಮೆರೆದ ಈ ಸರ್ಕಾರಿ ಅಧಿಕಾರಿ ಯಾರ ಗೊತ್ತಾ?

1206

ತುಮಕೂರು ಕಸಬಾ ಹೋಬಳಿಯ ಕಂದಾಯ ನಿರೀಕ್ಷಕ ಮಹೇಶ್ ನ ರೌಡಿಸಂ ಮಿತಿಮೀರಿದೆ.

ಸದಾ ಒಂದಿಲ್ಲೊಂದು ಅಪರಾಧ ಪ್ರಕರಣದಲ್ಲಿ ಸುದ್ದಿಯಲ್ಲಿರುತಿದ್ದ ಆರ್ ಐ ಮಹೇಶ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ನಗರದ ಸಿ.ಟಿ. ಕ್ಲಬ್​​ನಲ್ಲಿ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿ ಗೂಂಡಾಗಿರಿ ನಡೆಸಿದ್ದಾನೆ. ಕ್ಲಬ್​​ನಲ್ಲಿ ಎಣ್ಣೆ ಕುಡಿದ ಅಮಲಿನಲ್ಲಿದ್ದ ಮಹೇಶ್ ಇಸ್ಪಿಟ್ ಆಟ ಆಡಿದ್ದಾನೆ. ಸಹ ಆಟಗಾರನೋರ್ವ ಈ ಎಲೆಯಾಟದಲ್ಲಿ ಗೆದ್ದಿದ್ದಾನೆ. ಇದನ್ನು ಸಹಿಸದ ಮಹೇಶ್ ಆತನ ಮೇಲೆ ದಾಳಿ ನಡೆಸಿದ್ದಾನೆ.

ad

ಆ ವ್ತಕ್ತಿಯನ್ನು ಕೆಳಕ್ಕೆ ತಳ್ಳಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಬಳಿಕ ಕ್ಲಬ್​ನಲ್ಲಿ ಇದ್ದ ಇತರರು ಮಹೇಶನನ್ನು ಬಿಡಿಸಿದ್ದಾರೆ. ಆರ್ ಐ ಮಹೇಶ ಈ ರಾಕ್ಷಿಸಿ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹೇಶ ನ ಗೂಂಡಾಗಿರಿ‌,‌ದರ್ಪ ಇದೇ ಮೊದಲಲ್ಲ, ಹಲವಾರು ಬಾರಿ ತನ್ನ ಹಿರಿಯ ಅಧಿಕಾರಿಗಳಿಗೆ, ಸಿಬ್ಬಂದಿ ಗಳಿಗೆ ಅವಾಚ್ಚವಾಗಿ ಬೈದು, ‌ನಿಂದಿಸಿ ಕೇಸು ಹಾಕಿಸಿಕೊಂಡಿದ್ದ ಉದಾಹರಣೆಗೆ ಇದೆ. ಇದರ ಜೊತೆ ಅಕ್ರಮ ಖಾತೆ ಮಾಡಿಸಿಕೊಟ್ಟು ಅಮಾನತು ಆಗಿದ್ರು. ಆದ್ರೂ ರಾಜಕೀಯ ಪ್ರಭಾವದಿಂದ ಮತ್ತೆ ಮೆರೆಯುತಿದ್ದಾನೆ ಎನ್ನಲಾಗಿದೆ.

Sponsored :

Related Articles