ಯೋಗಿ ದುನಿಯಾದಲ್ಲಿ ಸದ್ದು ಮಾಡ್ತಿದೆ ರಾಜರಥ.!!

1016

ಸ್ಯಾಂಡಲ್ ವುಡ್ ನಲ್ಲಿ ಯು ಎಫ್ ಓ ಹಾಗೆ ಕ್ಯೂಬ್ ಸಮಸ್ಯೆಯಿಂದ ಕಳೆದೆರೆಡುವಾರಗಳಿಂದ ಸಿನಿಮಾಗಳು ರಿಲೀಸ್ ಆಗಿರ್ಲಿಲ್ಲ.ಆದ್ರೆ ಇದಕ್ಕೆ ತಾತ್ಕಾಲಿಕವಾಗಿ ತೆರೆ ಬಿದ್ದಿದ್ದು ,ಈ ವಾರ ಸಿನಿ ಪ್ರೇಕ್ಷಕರು ಎರಡು ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾವನ್ನ ತೆರೆ ಮೇಲೆ ನೋಡಿದ್ದಾರೆ.ಹಾಗಿದ್ರೆ ಈ ವಾರ ರಿಲೀಸ್ ಆಗಿರೋ ಸಿನಿಮಾಗಳು ಯಾವ್ದು? ಆಚಿತ್ರಕ್ಕೆ ಪ್ರೇಕ್ಷಕರು ಯಾವ್ ರೀತಿ ರೆಸ್ಪಾನ್ಸ್ ಕೊಟ್ಟಿದ್ದಾರೆ.ಇಲ್ಲಿದೆ ನೋಡಿ ಆ ಬಗ್ಗೆ ಸ್ಪೆಷಲ್ ರಿಪೋರ್ಟ್.

ad

ರಂಗಿತರಗದಂತ ಸೂಪರ್ ಡೂಪರ್​​ ಹಿಟ್ ಚಿತ್ರ ಕೊಟ್ಟಿದ್ದ ಭಂಡಾರಿ ಸಹೋದರರ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ರಾಜರಥ ಈ ವಾರ ತೆರೆಕಂಡಿದೆ. ವಿಶ್ವದಾದ್ಯಂತ ರಿಲೀಸ್ ಆಗಿರೋ ರಾಜರಥ ಚಿತ್ರಕ್ಕೆ ಎಲ್ಲೆಡೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ.ಈಗಾಗ್ಲೆ ರಿಲೀಸ್ ಆಗಿದ್ದ ಟ್ರೇಲರ್ ಸಾಂಗ್ಸ್ ನೋಡಿದ ಸಿನಿ ರಸಿಕರಲ್ಲಿ ಚಿತ್ರದ ಮೇಲೆ ಆಸೆ ಮೂಡಿತ್ತು.ಈ ಸಿನಿಮಾವನ್ನ ನೋಡಿದ್ರೆ ನಮ್ಗೆ ಪಕ್ಕಾ ಎಂಟ್ರಟೈನ್ ಮೆಂಟ್ ಗ್ಯಾರಂಟಿ ಅನ್ನೋ ಟಾಕ್ ಇತ್ತು. ಇಂದು ಆ ಕುತೂಹಲಕ್ಕೆ ಬ್ರೇಕ್ ಬಿದ್ದಿದೆ. ಚಿತ್ರವನ್ನ ತೆರೆ ಮೇಲೆ ನೋಡಿದ ಪ್ರೇಕ್ಷಕ ಮೆಚ್ಚುಗೆ ಮಾತುಗಳನ್ನಾಡಿದ್ದಾನೆ..

ರೊಮ್ಯಾಂಟಿಕ್ ಕಥೆಗೆ ಕಾಮಿಡಿ ಟಚ್ ಕೊಟ್ಟಿರೋ ರಾಜರಥ ಸಿನಿಮಾದಲ್ಲಿ ಒಂದು ಬಸ್ ಮೂಲಕ ಬಿಚ್ಚಿಕೊಳ್ಳುವ ವಿಭಿನ್ನ ಕಥೆ ಇದೆ.ಜೊತೆಗೆ ಕಾಲೇಜ್ ಸ್ಟೋರಿ, ಕಣ್ಮನ ಸೆಳೆಯೋ ದೃಶ್ಯಗಳು,ಥ್ರಿಲ್ ಆಗಿಸೋ ಡೈಲಾಗ್ , ಸಿಂಪಲ್ ಲವ್ ಸ್ಟೋರಿ ಎಲ್ಲಾ ಇದೆ. ರಾಜರಥ ಚಿತ್ರದಲ್ಲಿ ರಾಜಕೀಯ, ನೈಜ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ, ಹಗರಣಗಳು,ಮೀಡಿಯಾಗೆ ಸಂಬಂದಿಸಿದ ಸಾಕಷ್ಟು ಇಂಟ್ರೆಸ್ಟಿಂಗ್ ಕಥೆ ಇದೆ.ಇನ್ನೂ ವಿಶೆಷ ಅಂದ್ರೆ ರಂಗಿತರಂಗ ಚಿತ್ರದಲ್ಲಿ ಸರಳ ಹುಡಗನಾಗಿ ಕಾಣಿಸಿದ್ದ ನಿರೂಪ್ ರಾಜರಥ ಸಿನಿಮಾದಲ್ಲಿ ಪಕ್ಕಾ ತರಲೆ ಕಾಲೇಜು ಹುಡಗನಾಗಿ ವಿಭಿನ್ನ ಲುಕ್ ನಲ್ಲಿ ಅದ್ಬುತವಾಗಿ ನಟಿಸಿದ್ದಾರೆ.

ಅಂದ್ಹಾಗೆ ನಿರೂಪ್ ಜೊತೆ ತೆರೆ ಮೇಲೆ ಆವಂತಿಕಾ ಶೆಟ್ಟಿ ಸ್ಕ್ರೀನ್ ಶೇರ್ ಮಾಡಿದ್ದು ಚಿತ್ರದಲ್ಲಿ ಬಬ್ಲಿ ಹುಡ್ಗಿಯಾಗಿ ನೋಡುಗರಿಗೆ ಇಷ್ಟವಾಗ್ತಾರೆ. ವಿಶೇಷ ಅಂದ್ರೆ ರಾಜರಥ ಚಿತ್ರದಲ್ಲಿ ಕಾಲಿವುಡ್​ ಸ್ಟಾರ್​ ಆರ್ಯ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಹಾಗೆ ರವಿಶಂಕರ್ ಕೂಡ ಡಿಫರೆಂಟ್ ಲುಕ್ ನಲ್ಲಿ ಅಭಿನಯಿಸಿದ್ದಾರೆ. ಇನ್ನೂ ರಾಜರಥದಲ್ಲಿ ಸಿನಿಮಾಟೋಗ್ರಫಿ, ಲೊಕೇಷನ್‌ಗಳು ಅದ್ಭುತವಾಗಿ ಮೂಡಿ ಬಂದಿದ್ದು ಅನೂಪ್ ಭಂಡಾರಿಯ ಸಂಗೀತ ಕೇಳುಗರಿಗೆ ಇಷ್ಟವಾಗ್ತಿದೆ. ,ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು,ರಾಜರಥವನ್ನ ತೆರೆ ಮೇಲೆ ಕಂಡು ಸಿನಿ ರಸಿಕರು ಎಂಜಾಯ್ ಮಾಡಿದ್ದಾರೆ.

ಈ ವಾರ ರಾಜರಥನೊಂದಿಗೆ ರಿಲೀಸ್ ಆಗಿರೋ ಮತ್ತೊಂದು ಸಿನಿಮಾ ಯೋಗಿ ದುನಿಯಾ. ಯೋಗಿ ದುನಿಯಾ ಎಲ್ಲಾ ಅಡೆತಡೆಗಳನ್ನ ಮೀರಿ ಇಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದು,ಪ್ರೇಕ್ಷಕರಿಗೆ ಮನೋರಂಜನೆಯ ರುಚಿ ನೀಡಲು ಯಶಸ್ವಿಯಾಗಿದೆ. ಯೋಗಿ ದುನಿಯಾ’ದಲ್ಲಿ ಮೆಜೆಸ್ಟಿಕ್‌ನ ರಾತ್ರಿ ಜಗತ್ತನ್ನ ಅನಾವರಣಗೊಳಿಸಲಾಗಿದೆ. ಈ ಕತ್ತಲೆ ಜಗತ್ತಿನೊಳಗೂ ನಾಯಕನಿಗೆ ಲವ್ ಹೇಗೆ ಶುರುವಾಗತ್ತೆ ಅನ್ನೋದೇ ಈ ಚಿತ್ರದ ಸೀಕ್ರೆಟ್ ಸ್ಟೋರಿ. ಹರಿ ನಿರ್ದೇಶನದ ಈ ಚಿತ್ರದಲ್ಲಿ ಹಿತಾ ಚಂದ್ರಶೇಖರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

ಬಿ.ಜೆ.ಭರತ್ ಸಂಗೀತ ನಿರ್ದೇಶನವಿರೋ ಯೋಗಿ ದುನಿಯಾಗೆ ಸಿದ್ದರಾಜು, ಎನ್‌.ವೆಂಕಟೇಶ್‌ ಬಾಬು,ಕೆ. ನಾರಾಯಣ ಮೂರ್ತಿ, ಚಂದ್ರಶೇಖರ್ ಹಣ ಹೂಡಿದ್ದಾರೆ. ಹೀಗಾಗಿಈ ವಾರ ರಿಲೀಸ್ ಆದ 2 ವಿಭಿನ್ನ ಸಿನಿಮಾಗಳು ಪ್ರೇಕ್ಷಕರಿಗೆ ಫುಲ್ ಎಂಟ್ರಟೈನ್ಮೆಂಟ್ ಕೊಡ್ತಿದೆ.

Sponsored :

Related Articles