ಸಿಎಂ ಬಿಎಸ್​ವೈ ಗೆ ಎದುರಾಯ್ತು ”ಪ್ರತ್ಯೇಕ” ಸಂಕಟ !! ಬಿಜೆಪಿಯಲ್ಲಿ ಶುರುವಾಗಿದೆ ”ಕತ್ತಿ” ಕಾಳಗ !!

883

ಕಾಂಗ್ರೆಸ್ ಸರ್ಕಾರ ಇದ್ದ ವೇಳೆ ಉತ್ತರ ಕರ್ನಾಟಕ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಬೇಕೆಂದು ತಕರಾರು ತೆಗೆದಿದ್ದ ಉಮೇಶ್‌ ಕತ್ತಿ, ಬಿಎಸ್ ವೈ ಸಂಪುಟದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಮತ್ತೆ ಪ್ರತ್ಯೇಕ ರಾಜ್ಯದ ಕೂಗನ್ನ ಎತ್ತಿದ್ದಾರೆ.

ವಿಧಾನಸಭಾ ಚುನಾವಣಾ ಅಖಾಡದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸರ್ಕಾರ ರಚಿಸಲಾಗದೇ ಅತಂತ್ರ ಸ್ಥಿತಿಯಲ್ಲಿದ್ದ ಬಿಜೆಪಿ ಕೊನೆಗೂ ಸಚಿವ ಸಂಪುಟ ರಚಿಸಿ ಇನ್ನೇನೋ ನಿರ್ವಿಘ್ನವಾಗಿ ಅಧಿಕಾರ ನಡೆಸಬಹುದು ಎಂದು ನಿಟ್ಟುಸಿರು ಬಿಡುವೆ ವೇಳೆಯಲ್ಲೇ, ಸಿಎಂ ಬಿಎಸ್​ವೈಗೆ ಮತ್ತೊಂದು ಮಹಾ ಕಂಟಕ ಎದುರಾಗ್ತಿದೆ.

ad

ಮಂತ್ರಿ ಪಟ್ಟ ಸಿಗದ ಬಿಜೆಪಿ ಶಾಸಕರು ಬಿಎಸ್​ವೈ ವಿರುದ್ಧವೇ ಇದೀಗ ತಿರುಗಿ ಬಿದ್ದಿದ್ದಾರೆ. ಮಂತ್ರಿ ಚಾನ್ಸ್​ ತಪ್ಪುತ್ತಿದ್ದಂತೆ ಯಡಿಯೂರಪ್ಪ ಆಪ್ತರೇ ಕತ್ತಿ ಬೀಸಲು ಮುಂದಾಗಿದ್ದಾರೆ. ಬಿಎಸ್​ವೈ ಪರಮಾಪ್ತ ಉಮೇಶ್​ ಕತ್ತಿ ಪ್ರತ್ಯೇಕ ರಾಜ್ಯದ ಕೂಗನ್ನು ಮತ್ತೆ ಶುರು ಮಾಡಿದ್ದಾರೆ.

ಈ ಹಿಂದೆ ಹಲವು ಬಾರಿ ಪ್ರತ್ಯೇಕ ರಾಜ್ಯದ ಕೂಗೆಬ್ಬಿಸಿದ್ದ ಉಮೇಶ್ ಕತ್ತಿ 8 ಬಾರಿ ಗೆದ್ದರೂ ಸಚಿವ ಸ್ಥಾನ ಕೊಟ್ಟಿಲ್ಲ ಅಂತಾ ಬೇಸರಗೊಂಡು ಪ್ರತ್ಯೇಕ ಪಕ್ಷವನ್ನೇ ಕಟ್ಟೋ ಚಿಂತನೆ ನಡೆಸಿದ್ದಾರೆ. ವಿಧಾನಸಭೆಯಲ್ಲಿ ಮೊದಲ ಸಾಲಿನ ನಾಯಕರಾಗಿದ್ದ ಉಮೇಶ್​ ಕತ್ತಿ ಇದೀಗ ಸಚಿವರಾಗದ ಕಾರಣ ಮೂರನೇ ಸಾಲಿನಲ್ಲಿ ಕೂರಬೇಕಿದೆ. ಇದ್ರಿಂದ ಕತ್ತಿ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಪ್ರತ್ಯೇಕ ಪಕ್ಷ ರಚನೆ ಮತ್ತು ಪ್ರತ್ಯೇಕ ರಾಜ್ಯದ ಹೋರಾಟ ಸಂಬಂಧ ಆಪ್ತರ ಜತೆ ಉಮೇಶ್​ ಕತ್ತಿ ಚರ್ಚೆ ಮಾಡ್ತಿದ್ದಾರೆ.

Sponsored :

Related Articles