ಚಿದಂಬರಂಗಾಗಿ ಹುಡುಕುತ್ತಿರುವ ಸಿಬಿ”ಐ” !! ಸುಪ್ರಿಂ ಕೋರ್ಟ್​ನಿಂದ ಸಿಗುತ್ತಾ ರಿಲೀಫ್ ?

449

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂಗೆ ಬಂಧನದ ಭೀತಿ ಎದುರಾಗಿದೆ. ಐಎನ್‍ಎಕ್ಸ್ ಮೀಡಿಯಾ ಮತ್ತು ಏರ್‍ಸೆಲ್ ಮ್ಯಾಕ್ಸಿಸ್ ಪ್ರಕರಣದಲ್ಲಿ ಚಿದಂಬರಂ ಅವರ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕೃತಗೊಳಿಸಿದ ಬೆನ್ನಲ್ಲೇ, ಚಿದಂಬರಂ ಬಂಧಿಸಲು ಸಿಬಿಐ ಮುಂದಾಗಿದೆ.ಈ ಭೀತಿಯಲ್ಲೇ ಇದೀಗ ಚಿದಂಬರಂ ಸುಪ್ರಿಂ ಕೋರ್ಟಿನಲ್ಲಿ ಜಾಮೀನು ಅರ್ಜಿ ಹಾಕಿದ್ದಾರೆ.

ಮುಂದಿನ ತನಿಖೆಗೆ ಸಹಕಾರ ನೀಡುವಂತೆ ಕಳೆದ ರಾತ್ರಿ ಚಿದಂಬರಂ ನಿವಾಸದ ಬಳಿ ಸಿಬಿಐ, ಇಡಿ ಅಧಿಕಾರಿಗಳು ತೆರಳಿದ್ದರು. ಚಿದಂಬರಂ ಈ ವೇಳೆ ಅವರು ಮನೆಯಲ್ಲಿ ಇಲ್ಲದ ಕಾರಣ 2 ಗಂಟೆಯ ಒಳಗಡೆ ವಿಚಾರಣೆಗೆ ಹಾಜರಾಗಿ ಎಂದು ಸಿಬಿಐ ಅಧಿಕಾರಿಗಳು ಬಾಗಿಲಿಗೆ ನೋಟಿಸ್ ಅಂಟಿಸಿದ್ದಾರೆ. ಹೀಗಾಗಿ ಚಿದಂಬರಂ ಇಂದು ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ.

ad

ಕಳೆದ ರಾತ್ರಿಯಿಂದಲೂ ಚಿದಂಬರಂಗಾಗಿ ಸಿಬಿಐ ಹುಡುಕಾಟ ನಡೆಸುತ್ತಿದೆ. ಸಿಬಿಐ ನವರ ಕೈಗೆ ಸಿಗದೆ ಕಾಂಗ್ರೆಸ್ ಸರ್ಕಾರ ಇರುವ ಪಂಜಾಬ್​​ನಲ್ಲಿ ಅಡಗಿ ಕುಳಿತಿದ್ದಾರೆ. ಸಿಬಿಐ ಕಿವಿಗೆ ಚಿದಂಬರಂ ಅಡಗಿ ಕುಳಿತಿರುವ ರಹಸ್ಯ ಸ್ಥಳ ತಿಳಿದ ತಕ್ಷಣ ಆತನನ್ನು ಬಂಧಿಸಲು ಸಿಬಿಐ ಅಧಿಕಾರಿಗಳ ತಂಡ ಪಂಜಾಬ್​​ಗೆ ತೆರಳಿದೆ.

Sponsored :

Related Articles