‘ಉದ್ಯೋಗ ಸೃಷ್ಟಿ ಎಂಬ ಸಂಕೀರ್ಣ ಸಮಸ್ಯೆಯ ಸುತ್ತ…’

332

ಲೇಖನ- ಸೋಮನಗೌಡ ಎಸ್.ಎಂ. ಕಟ್ಟಿಗೆಹಳ್ಳಿ, ಬಿಟಿವಿ, ಬೆಂಗಳೂರು

 

ad

ಸರ್ಕಾರಗಳು ಉದ್ಯೋಗಾವಕಾಶದ ಪರಿಸ್ಥಿತಿಯನ್ನು ಸುಧಾರಿಸಬೇಕು ಎಂದು ಅಖಂಡ ಭಾರತದ ಗ್ರಾಮೀಣ ಮತ್ತು ನಗರ ಪ್ರದೇಶಗಳ ಮತದಾರರ ಅಭಿಪ್ರಾಯವಾಗಿತ್ತು. ಮತಯಾರಿಗೆ ನೀಡಬೇಕು ಎಂದು ನಿರ್ಧರಿಸುವಾಗ ಉದ್ಯೋಗಾವಕಾಶವು ಗ್ರಾಮೀಣ ಮತ್ತು ನಗರ ಎರಡೂ ಪ್ರದೇಶಗಳ ಜನರ ಆದ್ಯತೆಯಾಗಿತ್ತು. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಉದ್ಯೋಗಾವಕಾಶದ ವಿಚಾರದಲ್ಲಿಜನರ ನಿರೀಕ್ಷೆಗೆತಕ್ಕ ಕೆಲಸ ಮಾಡಿಲ್ಲ. ಆದರೂ ಮತದಾರರು ಕೇಂದ್ರ ಸರ್ಕಾರದ ಮೇಲೆ ಭರವಸೆಯನಿಟ್ಟು ಮತ್ತೆ ಪ್ರಧಾನಿ ನರೇಂದ್ರ ಮೋದಿಯವರನ್ನುಎರಡನೇಬಾರಿಗೆ ಪ್ರಚಂಡ ಬಹುಮತದಿಂದ ಆಯ್ಕೆ ಮಾಡಿಕೊಂಡಿದ್ದಾರೆ.

 

ಪ್ರಧಾನಿ ಮೋದಿ ಅವರನ್ನು‘ಚೌಕಿದಾರ್‍ಚೋರ್ ಹೈ’ ಎಂದುದೇಶದುದ್ದಗಲಕ್ಕೂ ಸಂಚರಿಸಿ ಪ್ರಚಾರ ಭಾಷಣದಲ್ಲಿಟೀಕಿಸಿದ್ದ ಎಐಸಿಸಿ ಅಧ್ಯಕ್ಷರಾಹುಲ್‍ಗಾಂಧಿಅವರ ಸಾಕ್ಷರಹಿತ ಮೂದಲಿಕೆಗೆ ಜನ ಜಪ್ಪಯ್ಯಎನ್ನಲಿಲ್ಲ. ಮೋದಿಯವರ ಮೇಲೆ ನಿರೀಕ್ಷೆಯಿಟ್ಟುಕೊಂಡು ಮತ್ತೊಮ್ಮೆ ಎನ್‍ಡಿಎ-2.0 ಸರ್ಕಾರ ರಚನೆಗೆ ಅವಕಾಶ ನೀಡಿದ್ದಾನೆ ಮತದಾರ.

ಉದ್ಯೋಗಕ್ಕಿಂತಲೂದೇಶದ ಭದ್ರತೆಯನ್ನೇ ಮುಂದಾಗಿಟ್ಟುಕೊಂಡುಜನ ಮೋದಿ ಅವರಿಗೆ ಮತ ಹಾಕಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮೋದಿ, ದೇಶಕ್ಕೆ ಸಮರ್ಥರಾಜಕೀಯ ನಾಯಕತ್ವ ನೀಡಿದ್ದಾರೆ. ಆದರೆ ಉದ್ಯೋಗ ಸೃಷ್ಟಿಯ ವಿಷಯದಲ್ಲಿ ಅವರು ನುಡಿದಂತೆ ನಡೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನೀತಿಆಯೋಗದ ಸದಸ್ಯ ಮತ್ತು ಪ್ರಧಾನಿ ಮೋದಿ ಅವರಆರ್ಥಿಕ ಸಲಹಾ ಮಂಡಯ ಅಧ್ಯಕ್ಷ ವಿವೇಕ್‍ದೇವರಾಯ್‍ಅವರು ಹೇಳಿರುವ ಪ್ರಕಾರ‘ಅಸಂಘಟಿತ ವಲಯದಲ್ಲಿರುವಕಾರ್ಮಿಕರಿಗೆ ಸರಿಯಾಗಿ ಬದುಕುವ ಅವಕಾಶಗಳನ್ನು ಒದಗಿಸಲು ಸರ್ಕಾರವೇ ನಿರ್ಧಿಷ್ಟಗುರಿ ಹೊಂದಿರುವಕಾರ್ಯಸೂಚಿಯನ್ನುರೂಪಿಸುವ ಅಗತ್ಯವಿದೆ’ಎಂದು ಹೇಳಿದ್ದಾರೆ.ಇದುಅಕ್ಷರಶಃ ಸತ್ಯವಾದ ಮಾತು.

ಉದ್ಯೋಗ ಸೃಷ್ಟಿ ಎಂಬ ಬಿಸಿಲಗುದುರೆ…!

ಚುನಾವಣಾಪ್ರಚಾರದ ಸಮಯದಲ್ಲಿ ವಿಪಕ್ಷಗಳ ಮುಖಂಡರು, ಪ್ರಧಾನಿ ಮೋದಿಯವರನ್ನುಉದ್ಯೋಗ ಸೃಷ್ಟಿಸುವಲ್ಲಿ ವಿಫಲತೆಯಕುರಿತು ಪ್ರಧಾನಿ ಮತ್ತುಕೇಂದ್ರ ಸರ್ಕಾರಹಿಂದೆ ಬಿದ್ದಿದೆ ಟೀಕಾಸ್ತ್ರಗಳನ್ನು ಬಿಟ್ಟರು. ಕೇಂದ್ರ ಸರ್ಕಾರವೇತನ್ನದಾಖಲೆಯಲ್ಲಿ 27.5 ಲಕ್ಷಉದ್ಯೋಗ ನಾಲ್ಕು ಮುಕ್ಕಾಲು ವರ್ಷಗಳಲ್ಲಿ ಸೃಷ್ಟಿಯಾಗಿವೆಎಂದು ಉಲ್ಲೇಖಿಸಿದೆ. 2022ರೊಳಗೆ ‘ಮೇಕ್‍ಇನ್‍ಇಡಿಂಡಿಯಾ’ಯೋಜನೆ ಅಡಿ 10 ಕೋಟಿಉದ್ಯೋಗ ಸೃಷ್ಟಿಸುವ ಭರವಸೆಯನ್ನುಕೇಂದ್ರ ಸರ್ಕಾರ ನೀಡಿತ್ತು. ಅಸಂಘಟಿತ ವಲಯ ಹಾಗೂ ಸ್ವಯಂಉದ್ಯೋಗ ಸೇರಿದಂತೆಕೋಟ್ಯಂತರಉದ್ಯೋಗ ಸೃಷ್ಟಿಸಲಾಗಿದೆಎಂದು ಪ್ರಧಾನಿ ಮೋದಿ ಅವರು ಸಂಸತ್ತಿನತಮ್ಮಕೊನೆಯ ಭಾಷಣದಲ್ಲಿ ಪ್ರಸ್ತಾಪ ಮಾಡಿದ್ದರು. ಆದರೆಕೇಂದ್ರಸರ್ಕಾರದದಾಖಲೆಗಳ ಪ್ರಕಾರ ಸೃಷ್ಟಿಯಾಗಿದ್ದಉದ್ಯೋಗ 27.5 ಲಕ್ಷ ಮಾತ್ರ. ಇದು ಬಿಸಿಲಗುದುರೆಯ ಹಿಡಿಯುವ ಹರಸಾಹಸವೇ ಸರಿ.

ಸಣ್ಣ ಉದ್ದಿಮೆ ಹಾಗೂ ಕೃಷಿಯೇತ್ತರ ವಲಯದಲ್ಲಿಉದ್ಯೋಗರಚನೆಉದ್ದೇಶ ಹೊಂದಿದ್ದ ಪ್ರಧಾನಮಂತ್ರಿಉದ್ಯೋಗಕಾರ್ಯಕ್ರಮದಡಿ (ಪಿಎಂಇಜಿಪಿ) 2014-18ರ ಅವಧಿಯಲ್ಲಿ 11.88 ಲಕ್ಷಉದ್ಯೋಗ ಸಿಕ್ಕಿದೆ. ಹೆಚ್ಚು ಉದ್ಯೋಗ ಸೃಷ್ಟಿಯಾಗಿರುವ ರಾಜ್ಯಗಳೆಂದರೆ ಉತ್ತರಪ್ರದೇಶ-2 ಲಕ್ಷ, ತಮಿಳುನಾಡು-1.38 ಲಕ್ಷ, ಮಹಾರಾಷ್ಟ್ರ-1.17 ಲಕ್ಷ ಹಾಗೂ ಕರ್ನಾಟಕದಲ್ಲಿ-1.08 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ದಿನ ದಯಾಳ್ ಉಪಾಧ್ಯಾಯಗ್ರಾಮೀಣ ಕೌಶಲ ಯೋಜನೆಯುದೇಶದಾದ್ಯಂತ 5 ಲಕ್ಷಉದ್ಯೋಗ ಸೃಷ್ಟಿಸುವ ನಿರಿಕ್ಷೆಯಿದೆ. ನಗರ ಪ್ರದೇಶಗಳಲ್ಲಿ ಬಡತನ ನಿರ್ಮೂಲನೆಗಾಗಿ ಮೋದಿ ಅವರ ಸರ್ಕಾರ ಜಾರಿಗೊಳಿಸಿದ್ದ ದೀನ ದಯಾಳ್ ನಗರಯೋಜನೆ–ರಾಷ್ಟ್ರೀಯ ನಗರಜೀವನೋಪಾಯ ಮಿಷನ್ ಕೇವಲ 4.72 ಲಕ್ಷಜನರಿಗೆ ನೌಕರಿ ನೀಡಲು ಸಾಧ್ಯವಾಗಿದೆ.
ಗ್ರಾಮೀಣಜನರಿಗೆಉದ್ಯೋಗ ಮೂಗಿಗೆ ತುಪ್ಪ ಸವರಿದಂತೆ…!

 


ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಎಂಬುದು ನಿಜ್ಕಕೂ ಸವಾಲಿನ ಕೆಲಸವಾಗಿದೆ. ಕಳೆದ ಐದು ವರ್ಷಗಳಲ್ಲಿ ಅಕಾಲಿಕ ಮಳೆಯಿಂದ ಬೆಳೆ ಬಾರದ ಹಿನ್ನೆಲೆ ಗುಳೇ ಹೋಗುವ ಜನರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ನಗರ ಪ್ರದೇಶಗಳಿಗೆ ಜನ ಗುಳೇ ಬಾರದಂತೆತಪ್ಪಿಸಲುತಂದ ಮಹತ್ಮಾಗಾಂಧಿಉದ್ಯೋಗರಾಷ್ಟ್ರೀಯಉದ್ಯೋಗಖಾತ್ರಿಯೋಜನೆ (ನರೇಗಾ) ಸ್ಥಳೀಯ ರಾಜಕಾರಣಿಗಳ ಕೈಗೆ ಸಿಲುಕಿ ಭ್ರಷ್ಟಾಚಾರ ಪಂಚಾಯಿತಿಗಳ ಮಟ್ಟದಲ್ಲಿ ಆಳವಾಗಿ ಬೇರೂವಂತೆ ಮಾಡಿದೆ. ಎನ್‍ಡಿಎ ಸರ್ಕಾರಅವಧಿಯಲ್ಲಿ ನರೇಗಾಯೋಜನೆ ಅಡಿ 1,080.6 ಕೋಟಿ ಕೆಲಸದ ದಿನಗಳು ಸೃಷ್ಟಿಯಾಗಿವೆಎಂದುರಾಜ್ಯಸಭೆಯಲ್ಲಿ ಮಂಡನೆಯಾದ ದಾಖಲೆಗಳಲ್ಲಿ ದಾಖಲೆಯಾಗಿಯೇ ಉಳಿದೆ. ಆದರೆ ಆ ಮಾನವ ದಿನಗಳೆಲ್ಲವೂ ಜೆಸಿಬಿ, ಟ್ರಾಕ್ಟರ್‍ಗಳು ಕೆಲಸ ಮಾಡಿ ಹಣಧನಿಕರಅಕೌಂಟ್‍ಗೆಜಮೆಯಾಗುತ್ತಿದೆ.
ಕಾರ್ಮಿಕರ ವರದಿಯಿಂದಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕಿತ್ತು

ದೇಶದಲ್ಲಿಉದ್ಯೋಗ ಪ್ರಮಾಣವು 2015-16ನೇ ಸಾಲಿನಲ್ಲಿ ಶೇ.5ರಷ್ಟು ಹೆಚ್ಚಿದೆ ಎಂಬ ಆತಂಕಾರಿ ಸಂಗತಿಯನ್ನುಕಾರ್ಮಿಕ ಮಂಡಳಿ ವರದಿ ಬಹಿರಂಗಪಡಿಸಿತ್ತು. 2010-11ರಲ್ಲಿ ಶೇ.9.3ರ ಹಂತದಲ್ಲಿದ್ದಉದ್ಯೋಗ ಸೃಷ್ಟಿಯ ಪ್ರಮಾಣ ನಂತರಕಡಿಮೆಯಾಯಿತು. ‘ಭಾರತದಲ್ಲೇ ತಯಾರಿಸಿ’ (ಮೇಕ್‍ಇನ್‍ಇಂಡಿಯಾ) ಯೋಜನೆಯನ್ನು ಪರಿಣಾಮಕಾರಿಯಾಗಿಜಾರಿಗೆತರುವಲ್ಲಿಕೇಂದ್ರ ಸರ್ಕಾರ ವಿಫಲವಾಯಿತು. ಅದಕ್ಕೆಕಾರಣಉತ್ಪಾದನೆಯಾಗುವ ವಸ್ತುಗಳಿಗಿಂತ ನೆರೆಯಚೀನಾ, ಬಾಂಗ್ಲ, ಜಪಾನ್‍ಸೇರಿದಂತೆ ವಿವಿಧದೇಶಗಳಿಂದ ಬರುವಅಗ್ಗದ ವಸ್ತುಗಳ ಮೇಲೆ ವ್ಯಾಮೋಹ ಹೆಚ್ಚಾಗಿದ್ದೆಇದಕ್ಕೆಲ್ಲಾಕಾರಣ. ಭಾರತದಲ್ಲಿತಯಾರಾಗುವ ವಸ್ತುಗಳಿಗೆ ವಿದೇಶಗಳಲ್ಲಿ ಅಷ್ಟಾಗಿ ಮಾರುಕಟ್ಟೆಯಿಲ್ಲ. ಸಾಫ್ಟ್‍ವೇರ್‍ಉದ್ಯಮ ಹೊರತುಪಡಿಸಿ ಎಲ್ಲಾರಫ್ತು ಸಾಮಾಗ್ರಿಗಳಿಗೆ ವಿದೇಶಗಳಲ್ಲಿ ಕೊಳ್ಳುವ ಜನರ ಪ್ರಮಾಣತೀರಾಕಡಿಮೆಯಾಗಿದೆ.ಇದರಿಂದ ಭಾರತೀಯಆರ್ಥಿಕ ಮಾರುಕ್ಟೆಕುಬ್ಜವಾಗುತ್ತಿದೆ.

ಉದ್ಯೋಗರೇಸ್‍ನಲ್ಲಿ ಯಂತ್ರಗಳೇ ಮುಂದು!

ಇತ್ತೀಚೆಗೆ ಶಿವಮೊಗ್ಗದಲ್ಲಿ ಒಂದು ಹೋಟೆಲ್ ಬಾರಿ ಸುದ್ದಿಯಾಗಿತ್ತು. ಕಾರಣ ಹೋಟೆಲ್‍ವೊಂದರಲ್ಲಿ ಸಪ್ಲೇಯರ್‍ಯಾಗಿಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿ ಮನುಷ್ಯನಲ್ಲ. ರೋಬೋ ಸಪ್ಲೆಯರ್. ಯಾಂತ್ರಿಕ ಮಾನವನಿಂದ ಊಟ ತರಿಸಿಕೊಂಡು ತಿನ್ನಲುಜನ ಹೋಟೆಲ್‍ಗೆ ಮುಗಿಬಿದ್ದ ಸುದ್ದಿ ಮಾಧ್ಯಮಗಳಲ್ಲಿ ಬಹುದೊಡ್ಡ ಸುದ್ದಿಯಾಗಿತ್ತು. ಮನುಷ್ಯ ಈಗ ಮಾಡುತ್ತಿರುವಅರ್ಧಕ್ಕಿಂತ ಹೆಚ್ಚಿನ ಪ್ರಮಾಣದ ಕೆಲಸಗಳನ್ನು 2025 ಹೊತ್ತಿಗೆ ಯಂತ್ರಗಳೇ ಮಾಡಲಿವೆಯಂತೆ.   ಹೀಗೆಂದು ವಿಶ್ವಆರ್ಥಿಕ ವೇದಿಕೆಯಅಧ್ಯಯನವರದಿ ಹೇಳಿದೆ. ಹೆಚ್ಚು ಹೆಚ್ಚು ಕೆಲಸಗಳಿಗೆ ಯಂತ್ರಗಳ ಬಳಕೆಯಿಂದಾಗಿ ಈಗ ಮನುಷ್ಯ ಮಾಡುತ್ತಿರುವ ಹತ್ತಾರು ಕೆಲಸಗಳು ಅಸ್ತಿತ್ವವನ್ನೇ ಕಳೆದುಕೊಳ್ಳಲಿವೆ. ಈಗ ಮನುಷ್ಯ ಮಾಡುತ್ತಿರುವ ಕೆಲಸಗಳ ಪ್ರಮಾಣ ಶೇ.71ರಷ್ಟು. 2025ರ ವೇಳೆಗೆ ಮನುಷ್ಯ ಮಾಡುವ ಕೆಲಸದ ಪ್ರಮಾಣ ಶೇ.48ಕ್ಕೆ ಕುಸಿದು. ಯಂತ್ರಗಳು ಕಾರ್ಯನಿರ್ವಹಿಸುವ ಪ್ರಮಾಣ ಶೇ.52ಕ್ಕೆ ಹೆಚ್ಚಾಗಲಿವೆಯಂತೆ. ಡಾಟಾಎಂಟ್ರಿ, ಲೆಕ್ಕಪತ್ರ ವಿಭಾಗದ ಕ್ಲರ್ಕಗಳು, ಹೆಚ್ಚಿನ ಬಿಳಿ ಕಾಲರ್ ಕೆಲಸಗಳೆಲ್ಲವನ್ನೂ ಯಂತ್ರಗಳೇ ಮಾಡುವುದರಿಂದ ವಿಶ್ವದಾದ್ಯಂತ 7.5 ಕೋಟಿಉದ್ಯೋಗ ನಷ್ಟವಾಗುವ ಸಾಧ್ಯತೆ ಹೆಚ್ಚಾಗಲಿವೆ ಎಂದುಡಬ್ಲ್ಯುಇಎಫ್‍ ತನ್ನ ಅಧ್ಯಯನ ವರದಿಯಲ್ಲಿ ದಾಖಲಿಸಿದೆ. ಆದರೆ ಯಂತ್ರಗಳನ್ನು ನಿರ್ಮಾಣ ಮಾಡಲು ವಿಜ್ಞಾನಿಗಳಿಗೆ ಬಾರಿ ಬೇಡಿಕೆ ಹೆಚ್ಚಾಗಲಿದೆಎಂದುವರದಿ ಹೇಳಿದೆ.

ಉದ್ಯೋಗ ಸೃಷ್ಟಿಗೆ ಕೇಂದ್ರಸರ್ಕಾರದ ಮುಂದಿನ ಹೆಜ್ಜೆಗಳು:

ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ 5 ವರ್ಷಗಳಲ್ಲಿ ತಮ್ಮದೇಆದದೂರದೃಷ್ಟಿಹೊಂದಲೇ ಬೇಕಾಗಿದೆ. ಉದ್ಯೋಗ ಸೃಷ್ಟಿಯಾಗದಿದ್ದರೆದೇಶದಲ್ಲಿಆಂತರಿಕ ಸಂರ್ಷಗಳು ಸೃಷ್ಟಿಯಾಗೋದುಗ್ಯಾರಂಟಿ. ಕೇವಲ ದೇಶದರಕ್ಷಣೆ ಮಾಡಿದರೆ ಸಾಲದು. ದೇಶದಗಂಭೀರ ಸಮಸ್ಯೆಯಾಗಿರುವಉದ್ಯೋಗ ಸೃಷ್ಟಿ, ಆರೋಗ್ಯ ಸೇವೆ, ವಿದ್ಯುತ್ ಲಭ್ಯತೆ, ಕೃಷಿಗೆ ನೀರು, ಸಾರ್ವಜನಿಕ ಸಾರಿಗೆ, ಪರಿಸರ ಸಂಕ್ಷಣೆ, ಕೃಷಿ ಉತ್ಪನ್ನಕ್ಕೆ ಹೆಚ್ಚಿನಬೆಲೆ, ಕಡಿಮೆ ಬಡ್ಡಿದರಲ್ಲಿ ಕೃಷಿ ಸಾಲ, ಕೃಷಿಗೆ ಸಹಾಯಧನ, ಆನ್‍ಲೈನ್ ಮೂಲಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ, ಉತ್ತಮಆರೋಗ್ಯ ಸೇವೆ, ಉತ್ತಮ ಶಿಕ್ಷಣ,ಅದರಲ್ಲೂ ಕೌಶಲ ಭರಿತ ಶಿಕ್ಷಣವನ್ನು ಮೊದಲ ಆದ್ಯತೆಯಾಗಿ ನೀಡಿದರೆ ಮಾತ್ರಭವ್ಯ ಭಾರತದ ಕನಸು ನನಸಾಗುತ್ತದೆ. ಇಲ್ಲವಾದರೆಭಾರತದರಕ್ಷಣೆಗಾಗಿಯೇ ಶೇ. 25ರಷ್ಟು ಹಣವನ್ನುವ್ಯಯ ಮಾಡಬೇಕಾದೀತು!

ಪ್ರಧಾನಿ ಮೋದಿಯವರನ್ನು ನಂಬಿ ವೋಟ್ ಹಾಕಿದಜನ ನಿರೀಕ್ಷಿಸುವುದನ್ನುಉತ್ತಮ ಆಡಳಿತ, ಸ್ವಾವಲಂಬಿ ಬದುಕು ಬದುಕಲು ಸ್ವಯಂ ಉದ್ಯೋಗ ಅಥವಾ ಖಾಯಂ ಉದ್ಯೋಗ ಪ್ರತಿಯೊಬ್ಬರ ಬಯಕೆ ಮತ್ತು ಆದ್ಯತೆಯಾಗಿರುತ್ತದೆ. ಆದರೆ ಪರಿಸ್ಥಿತಿಗಳು ಜನರನ್ನು ಸಂಕಷ್ಟಕ್ಕೆ ಸಿಲುಕಿಸಿ ನರಳುವಂತೆ ಮಾಡುತ್ತದೆ. ನೋಟ್ ಬ್ಯಾನ್, ಜಿಎಸ್‍ಟಿಯಂತ ದಿಢೀರ್ ಯೋಜನೆಗಳು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮವನ್ನೇ ಸೃಷ್ಟಿಮಾಡಿವೆ. ಮೋದಿ ಅವರು ಈಗ ಎಲ್ಲಾ ಸಮುದಾಯಗಳ, ಜಾತಿ, ಧರ್ಮಗಳ ನೇತಾರ. ಇಡೀದೇಶಕ್ಕೆ ಸಂವಿಧಾನವೇ ನಿಜವಾದ ಪವಿತ್ರ ಗ್ರಂಥ ಎಂದು ಅವರು ಅದರ ಮೇಲೆ ಕೈ ಇಟ್ಟು ನಮಸ್ಕರಿಸಿ ಪ್ರಮಾಣ ಮಾಡಿದ್ದಾರೆ. ‘ಸರ್ಕಾರ ನಿಮ್ಮದೇ, ಸರ್ಕಾರಎಲ್ಲರಜೊತೆಗಿದೆ, ಅಭಿವೃದ್ಧಿ ಎಂಬುದು ಎಲ್ಲಾ ವರ್ಗದವರಿಗಾಗಿ, ಎಲ್ಲರನ್ನು ವಿಶ್ವಾಸದ ತಕ್ಕಡಿಯಲ್ಲಿ ತೂಗಿದಾಗ ಮಾತ್ರ ಇದು ಭವ್ಯಭಾರತ. ಈಗ ಜನಾಭಿಪ್ರಾಯ ಮೋದಿ ಅವರ ಮೇಲೆ ವಾಲಿದೆ. ಶೇ.56ಕ್ಕಿಂತ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ. ಸೌಹಾರ್ದ ಭಾರತ. ಸಮಾನತೆಯ ಭಾರತವನ್ನುಈಗಲಾದರೂ ಸೃಷ್ಟಿಸಲು ನಮ್ಮ ಪ್ರಧಾನಿಗಳಾದ ಮೋದಿ ದೃಢ ಸಂಕಲ್ಪ ಮಾಡಬೇಕು. ನೆರೆಯ ಭಯೋತ್ಪದಾದಕರು, ದಾಳಿಕೋರರು ಬರುವುದಿರಲಿ,ಉದ್ಯೋಗ ವಂಚಿತಯುವಜನರಲ್ಲಿ ಬಂದೂಕು ಹಿಡಿಯುವ ಕೈಗಳು ಹೆಚ್ಚಾಗುತ್ತವೆ. ಆಗ ಭಯೋತ್ಪಾದಕರನ್ನು ಹತ್ತಿಕ್ಕಬೇಕೋ, ನಕ್ಸಲ್, ಮಾವೋವಾದಿಗಳನ್ನು ನಿಯಂತ್ರಿಸಬೇಕೋ ಎಂಬ ಹೋರಾಟದಲ್ಲಿಇಡೀ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಹುದೊಡ್ಡ ಪೆಟ್ಟಾಗುವುದರಲ್ಲಿಅನುಮಾನವಿಲ್ಲ.2014ರಲ್ಲಿ ಮೋದಿಯವರುಕಟ್ಟಿದಕೋಟೆಗಿಂತ ಈಗ ಏಳು ಸುತ್ತಿನಕೋಟೆಕಟ್ಟಿ ಭಾರತ ಮತ್ತು ಸಂವಿಧಾನದ ಆಶಯಗಳನ್ನು ರಕ್ಷಣೆ ಮಾಡುವ ಹೊಣೆ ಮೋದಿ ಅವರ ಮೇಲಿದೆ.

ಲೇಖನ- ಸೋಮನಗೌಡ ಎಸ್.ಎಂ. ಕಟ್ಟಿಗೆಹಳ್ಳಿ, ಬಿಟಿವಿ, ಬೆಂಗಳೂರು

 

Sponsored :

Related Articles