ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಅತೃಪ್ತಿಯ ಆಕ್ರೋಶ! ಬಿಜೆಪಿ ಎಮ್​ಎಲ್​ಎಗಳಿಂದ ರಹಸ್ಯ ಸಭೆ!!

631

ಅತೃಪ್ತ ಶಾಸಕರಿಂದಾಗಿ ಸಮ್ಮಿಶ್ರ ಸರ್ಕಾರ ಉರುಳಿದ ಪರಿಣಾಮ ಅಧಿಕಾರಕ್ಕೆ ಬಂದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಂಪುಟ ರಚನೆಯ ದಿನವೇ ಅತೃಪ್ತ ಶಾಸಕರನ್ನು ಸೃಷ್ಟಿಮಾಡಿದೆ.


ಸಚಿವ ಸಂಪುಟದಲ್ಲಿ ಅವಕಾಶ ವಂಚಿತ ಸುಮಾರು 8ಕ್ಕೂ ಅಧಿಕ ಶಾಸಕರು ಸಭೆ ನಡೆಸಿದ್ದಾರೆ. ರೇಸ್​ ಕೋರ್ಸ್​ ರಸ್ತೆಯಲ್ಲಿರುವ ರೇಸ್​ ವ್ಯೂ ಹೊಟೇಲ್​ನಲ್ಲಿ ರೇಣುಕಾಚಾರ್ಯ ಸೇರಿದಂತೆ ಹಲವು ಶಾಸಕರ ಜೊತೆಗೆ ಬಾಲಚಂದ್ರ ಜಾರಕಿಹೊಳಿ ಸಭೆ ನಡೆಸಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಲು ರಮೇಶ್ ಜಾರಕಿಹೊಳಿ ಕಾರಣವಾಗಿದ್ದ ಹಿನ್ನೆಲೆಯಲ್ಲಿ ಸಹೋದರ ಬಾಲಚಂದ್ರ ಜಾರಕಿಹೊಳಿ ಬಿಜೆಪಿ ಸರ್ಕಾರದ ವಿರುದ್ಧ ಸಭೆ ನಡೆಸಿರುವುದು ಹಲವು ರಾಜಕೀಯ ಕುತೂಹಲಗಳಿಗೆ ಕಾರಣವಾಗಿದೆ.

ad


ಒಂದೆಡೆ ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ರಾಜ್ಯಾದ್ಯಂತ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆಗೆ ಟೈರ್​ ಹಾಕಿ ಬೆಂಕಿ ಹಚ್ಚಿ ಪ್ರತಿಭಟಿಸುತ್ತಿದ್ದರು. ಮತ್ತೊಂದೆಡೆ ಅತೃಪ್ತ ಶಾಸಕರು ಶಾಸಕರ ಭವನದಲ್ಲಿ ಸಭೆ ನಡೆಸಿದರು. 6 ಭಾರಿ ನಿರಂತರ ಶಾಸಕರಾಗಿದ್ದ ದಕ್ಷಿಣ ಕನ್ನಡದ ಸೋಲಿಲ್ಲದ ಸರದಾರ ಎಸ್.ಅಂಗಾರ ಶಾಸಕರ ಭವನದಲ್ಲಿ ಕಾರ್ಯಕರ್ತರು ಹಾಗೂ ನಾಯಕರೊಂದಿಗೆ ಸಭೆ ನಡೆಸಿದರು.


ಬಿಎಸ್​ವೈ ಒಂದು ಕಾಲದ ಆಪ್ತ ರೇಣುಕಾಚಾರ್ಯ ಮತ್ತು ಬಾಲಚಂದ್ರ ಜಾರಕಿಹೊಳಿ ರೇಸ್​ ವ್ಯೂದಲ್ಲಿ ಸಭೆ ನಡೆಸಿ ಮುಂದಿನ ರಾಜಕೀಯ ನಡೆ ಬಗ್ಗೆ ಚರ್ಚೆ ನಡೆಸಿದರು. ನಿನ್ನೆ ಸಂಜೆಯವರೆಗೂ ಸಚಿವರಾಗ್ತೀವಿ ಅಂದುಕೊಂಡಿದ್ದ ಹಿರಿಯ ಶಾಸಕರಲ್ಲಿ ಬಹುತೇಕರಿಗೆ ಇಂದು ಬೆಳಗ್ಗೆ ಶಾಕ್​ ಕಾದಿತ್ತು. ಉಮೇಶ್ ಕತ್ತಿಯಂತಹ 8 ಭಾರಿ ಗೆದ್ದ ಹಿರಿಯ ಶಾಸಕರಂತೂ ಕಂಗಾಲಾಗಿ ಆಪ್ತರ ಜೊತೆಗೆ ಸಭೆ ನಡೆಸಿದ್ರು. ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ, ರೇಣುಕಾಚಾರ್ಯ ಸೇರಿದಂತೆ ಹಲವು ಹಿರಿಯ ಶಾಸಕರು ಒಟ್ಟಾಗಿ ಬಂಡಾಯ ಎದ್ದರೇ ಬಿಎಸ್​ವೈ ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ.

Sponsored :

Related Articles