ರಾಜ್ಯದಲ್ಲಿ ನಡೆಯುತ್ತಿದೆ ಯೂನಿಫಾರ್ಂ ದಂಧೆ-ಏನದು ? ಇಲ್ಲಿದೆ ವಿವರ!

110

ಶಾಲೆ-ಕಾಲೇಜುಗಳು ಆರಂಭವಾಗ್ತಿದ್ದಂತೆ ಬಡ ಮಕ್ಕಳಿಗೆ ಸಿಗಬೇಕಾದ ಸೌಲಭ್ಯದಲ್ಲೂ ದುಡ್ಡು ತಿನ್ನಲು ಅಧಿಕಾರಿಗಳು ಸಿದ್ದರಾಗಿದ್ದಾರೆ. ಹೌದು 1 ರಿಂದ 8 ನೇ ತರಗತಿಯ ಯೂನಿಫಾರ್ಂ ಗೆ 96 ಕೋಟಿ ರೂಪಾಯಿ ಟೆಂಡರ್​​ ನೀಡಲು ಅಧಿಕಾರಿಗಳು ಸಿದ್ಧವಾಗಿದ್ದು, ಇದು ಅಧಿಕಾರಿಗಳ ದುಡ್ಡು ತಿನ್ನುವ ಪ್ಲ್ಯಾನ್ ಅಂತಿದ್ದಾರೆ ಪೋಷಕರು.
ಹೌದು ಇದುವರೆಗೂ ಶಾಲಾ ಮಕ್ಕಳ ಯೂನಿಫಾರ್ಂ ಗಾಗಿ ಆಯಾ ಶಾಲೆಯ ಎಸ್​ಡಿಎಂಸಿಗಳಿಗೆ ಹಣ ಮಂಜೂರಾಗುತಿತ್ತು. ಅಲ್ಲದೇ ಒಂದು ಯೂನಿಫಾರ್ಂ ಗೆ ಕೇವಲ 200 ರೂಪಾಯಿ ನಿಗದಿಪಡಿಸಲಾಗುತ್ತಿತ್ತು. ಆದರೇ ಈ ಭಾರಿ ಅಧಿಕಾರಿಗಳು 96 ಕೋಟಿ ರೂಪಾಯಿ ಟೆಂಡರ್​ ಕರೆದಿದ್ದು, ಸಮವಸ್ತ್ರ ತಯಾರಿಕಾ ವೆಚ್ಚವನ್ನು 250 ರೂಪಾಯಿಗೆ ಹೆಚ್ಚಿಸಲಾಗಿದೆ.

ad

ಇದು ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡುವ ಪ್ರಯತ್ನ ಎಂಬುದು ಪೋಷಕರು ವಾದ. ಇನ್ನು ಫ್ರೀ ಟೆಂಡರ್​ ಕರೆಯಲಾಗಿರೋದರಿಂದ ಬೇರೆ ರಾಜ್ಯದ ಕಂಪನಿಗಳು ಭಾಗಿಯಾಗಿದ್ದು, ಇದು ಸ್ಥಳೀಯ ಟೇಲರ್​ಗಳ ಹೊಟ್ಟೆಗೆ ತಣ್ಣಿರು ಬಟ್ಟೆ ಹಾಕಿ ಹೊರ ರಾಜ್ಯದ ಕಂಪನಿಗಳನ್ನು ಉದ್ಧಾರ ಮಾಡುವ ಪ್ರಯತ್ನ ಎಂದು ಟ್ರೇಲರ್​ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದ್ರೂಮ ಶಿಕ್ಷಣ ಸಚಿವರು ಎಚ್ಚೆತ್ತುಕೊಂಡು ಇತ್ತ ಗಮನ ಹರಿಸ್ತಾರಾ ಕಾದು ನೋಡಬೇಕಿದೆ.

 

Sponsored :

Related Articles