ಜಲಪ್ರಳಯಕ್ಕೆ ಮುಳುಗಿದ ಉತ್ತರ ಕನ್ನಡ ಜಿಲ್ಲೆ! ಕೊಚ್ಚಿಹೋದ ಬೇಡ್ತಿ ಸೇತುವೆ,ಕುಸಿದ ಅರ್​ಬೈಲ್​ ಘಾಟ್​!!

526
9900071610

ಉತ್ತರಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರೋ ಮಳೆಗೆ ಕಾರವಾರದಲ್ಲಿ ಜಲಪ್ರಳಯವೇ ಉಂಟಾಗಿದೆ. ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ಪದೇ ಪದೇ ಗುಡ್ಡ ಕುಸಿಯುತ್ತಿದ್ದು, ಜೆಸಿಬಿಯಿಂದ ಮಣ್ಣು ತೆರವು ಕಾರ್ಯ ನಡೆಯುತ್ತಿದೆ.

ad


ಅಂಕೋಲಾ ಹುಬ್ಬಳ್ಳಿ ನಡುವಿನ ಸಂಪರ್ಕ ಸ್ಥಗಿತವಾಗಿದ್ದು, ಸತತ 5 ದಿನಗಳಿಂದ ರಾಷ್ಟ್ರೀಯ ಹೆದ್ದಾರಿ 63 ಬಂದ್ ಆಗಿದೆ. ಇನ್ನೊಂದೆಡೆ ಕಾಳಿ ಜಲಾಶಯದಿಂದ ಹೊರ ಹರಿವು ಹೆಚ್ಚಾಗಿದ್ದು, ಕಾರವಾರದ ಕಿನ್ನರ, ಸಿದ್ದರ, ವೈಲವಾಡ ಗ್ರಾಮಗಳು ಮುಳುಗಡೆಯಾಗಿವೆ.


ಗ್ರಾಮದ ಜನ್ರು ಮನೆ, ಮಠ ಬಿಟ್ಟು ಪ್ರಾಣ ಉಳಿದ್ರೆ ಸಾಕು ಅಂತಾ ಸುರಕ್ಷಿಯ ಸ್ಥಳಕ್ಕೆ ದೌಡಾಯಿಸ್ತಿದ್ದಾರೆ. ಇನ್ನು ಬಿಟ್ರಿಷ್ ಕಾಲದಲ್ಲಿ ನಿರ್ಮಾಣವಾಗಿದ್ದ ಬೇಡ್ತಿ ಸೇತುವೆ ಮುರಿದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಯಲ್ಲಾಪುರ ಶಿರಸಿ ಸಂಪರ್ಕ ಕಡಿತಗೊಂಡಿದೆ.

 

ಇನ್ನೊಂದೆಡೆ ಮುಂಡಗೋಡ ಹಾಗೂ ಯಲ್ಲಾಪುರಕ್ಕೆ ಸಂಪರ್ಕ ಕಲ್ಪಿಸುವ ಶಿಡ್ಲಗುಂಡಿ ಸೇತುವೆ ನೀರಿನ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದು, ಈಗ ಯಲ್ಲಾಪುರ ಯಾವುದೇ ಹೊರಜಗತ್ತಿನ ಸಂಪರ್ಕವಿಲ್ಲದೇ ದ್ವೀಪದಂತಾಗಿದೆ.

Sponsored :


9900071610