ಉತ್ತರ ಕನ್ನಡ ಲೋಕಲ್ ಬಾಡಿ ಚುನಾವಣೆ- ಬಿಜೆಪಿ-ಕಾಂಗ್ರೆಸ್​ಗೆ ಮಿಶ್ರಫಲ!

313

 

ad

ಉತ್ತರಕನ್ನಡ ಜಿಲ್ಲೆಯಲ್ಲಿ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಮಿಶ್ರಫಲಿತಾಂಷ ಎದುರಾಗಿದೆ. 8 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾರವಾರ ನಗರಸಭೆಯ 31 ವಾರ್ಡಗಳಲ್ಲಿ ಕಾಂಗ್ರೆಸ್-11, ಬಿಜೆಪಿ-11, ಜೆಡಿಎಸ್-4, ಪಕ್ಷೇತ್ರರ-5 ಸ್ಥಾನ ಗೆದ್ದಿದ್ದು, ಇಲ್ಲಿ ಯಾವುದೆ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿಲ್ಲ,
ಇನ್ನು ಶಿರಸಿ ನಗರಸಭೆಯ 31 ವಾರ್ಡನಲ್ಲಿ ಬಿಜೆಪಿ-17, ಕಾಂಗ್ರೆಸ್-09, ಜೆಡಿಎಸ್-01, ಪಕ್ಷೇತರ-04 ಸ್ಥಾನ ಗೆದ್ದಿದ್ದು ಶಿರಸಿ ನಗರಸಭೆ ಬಿಜೆಪಿ ಪಾಲಾಗಿದೆ. ಇನ್ನೂ ದಾಂಡೇಲಿ ನಗರಸಭೆಯ ಒಟ್ಟೂ 31 ವಾರ್ಡನಲ್ಲಿ ಕಾಂಗ್ರೆಸ್-16, ಬಿಜೆಪಿ-11, ಪಕ್ಷೇತರ-04 ಸ್ಥಾನ ಗೆದ್ದುಕೊಂಡಿದ್ದು ಇಲ್ಲಿ ಕಾಂಗ್ರೆಸ್ ಅಧಿಕಾರ ನಡೆಸಲಿದೆ.

ಮೂರು ಪುರಸಭೆಗಳ ಪೈಕಿ ಅಂಕೋಲಾ ಪುರಸಭೆಯ 23 ವಾರ್ಡಗಳಲ್ಲಿ ಕಾಂಗ್ರೆಸ್-10, ಬಿಜೆಪಿ-08, ಪಕ್ಷೇತರ-05 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಅತಂತ್ರವಾಗಿದೆ, ಕುಮಟ ಪುರಸಭೆಯ 23 ವಾರ್ಡಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-16, ಕಾಂಗ್ರೆಸ್-06,ಜೆಡಿಎಸ್-01 ಸ್ಥಾನ ಪಡೆದಿದ್ದು ಕುಮಟ ಪುರಸಭೆಯಲ್ಲಿ ಬಿಜೆಪಿ ಅಧಿಕಾರ ನಡೆಸಲು ಮತದಾರ ಸ್ಪಷ್ಟ ಬಹುಮತ ನೀಡಿದ್ದಾರೆ.
ಹಳಿಯಾಳ ಪುರಸಭೆ ಒಟ್ಟೂ 23 ವಾರ್ಡಗಳಲ್ಲಿ. ಕಾಂಗ್ರೆಸ್-14, ಬಿಜೆಪಿ-07, ಜೆಡಿಎಸ್-01, ಪಕ್ಷೇತರ-01 ಹಳಿಯಾಳ ಪುರಸಭೆ ಕಾಂಗ್ರೆಸ್ ಪಾಲಾಗಿದೆ. ಯಲ್ಲಾಪುರ ಪಟ್ಟಣ ಪಂಚಾಯತನಲ್ಲಿ ಒಟ್ಟೂ 19 ವಾರ್ಡಗಳಲ್ಲಿ. ಕಾಂಗ್ರೆಸ್- 12, ಬಿಜೆಪಿ- 5, ಜೆಡಿಎಸ್-1, ಪಕ್ಷೇತರ- 1 ಸ್ಥಾನವನ್ನು ಗೆದ್ದುಕೊಂಡಿದ್ದು ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಮುಂಡಗೋಡ ಪಟ್ಟಣ ಪಂಚಾಯಿತಿ ಒಟ್ಟೂ 19 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ -19, ಕಾಂಗ್ರೆಸ್ 09 ಸ್ಥಾನ ಪಡೆದುಕೊಂಡಿದ್ದು ಇಲ್ಲಿ ಬಿಜೆಪಿ ಅಧಿಕಾರ ನಡೆಸಲಿದೆ.

Sponsored :

Related Articles