ರೌಡಿಶೀಟರ್​ ಲಕ್ಷ್ಮಣ ಹತ್ಯೆ ಪ್ರಕರಣ! ಕಂಬಿಹಿಂದೆ ಜೈಲುಹಕ್ಕಿಯ ಕಣ್ಣೀರು ಹಾಡು! ಪೋಷಕರಿಗೆ ಭಾವನಾತ್ಮಕ ಪತ್ರ ಬರೆದ ವರ್ಷಿಣಿ!!

3986
9900071610

ಆಕೆ ಅತಿಲೋಕ ಸುಂದರಿಯಂತಿದ್ಲು. ಒಳ್ಳೆಯ ಶಿಕ್ಷಣವಿತ್ತು. ಹೆತ್ತವರ ಬೆಂಬಲವಿತ್ತು. ಆದರೆ ಇದೆಲ್ಲವನ್ನು ಒಳ್ಳೆಯ ಹಾದಿಯಲ್ಲಿ ಸಾಗಲು ಬಳಸಿಕೊಳ್ಳದ ಕಾರಣ ಈಗ ಆಕೆ ಜೈಲು ಹಕ್ಕಿಯಾಗಿದ್ದಾಳೆ. ಅಷ್ಟೇ ಅಲ್ಲ ಜೈಲಿನಲ್ಲಿ ಕೂತು ಪಶ್ಚಾತಾಪದ ಬೇಗೆಯಲ್ಲಿ ಬೇಯುತ್ತಿದ್ದು, ಹೆತ್ತವರಿಗೆ ಪತ್ರ ಬರೆದು ಕ್ಷಮೆಯಾಚಿಸುವ ಮೂಲಕ ಸುದ್ದಿಯಾಗಿದ್ದಾಳೆ. ಈಕೆ ಮತ್ಯಾರೂ ಅಲ್ಲ ರಾಜ್ಯವನ್ನೆ ಬೆಚ್ಚಿಬೀಳಿಸಿದ್ದ ರೌಡಿಶೀಟರ್ ಲಕ್ಷ್ಮಣ ಹತ್ಯೆ ಪ್ರಕರಣ ಆರೋಪಿ ವರ್ಷಿಣಿ.

ad

ಹೌದು ವಿದೇಶದಲ್ಲಿ ಎಂ.ಎಸ್.ವ್ಯಾಸಂಗ ಮಾಡುತ್ತಿದ್ದ ವರ್ಷಿಣಿ, ಅದ್ಯಾವುದೋ ಗಳಿಗೆಯಲ್ಲಿ ರೌಡಿಶೀಟರ್ ಲಕ್ಷ್ಮಣ ಹತ್ಯೆಯಲ್ಲಿ ಕೈಜೋಡಿಸಿ ಬಿಟ್ಟಿದ್ದಳು. ಇದರ ಫಲವಾಗಿ ಕೋಕಾ ಕಾಯಿದೆ ಅಡಿಯಲ್ಲಿ ಜೈಲು ಸೇರಿರುವ ವರ್ಷಿಣಿ ಈಗ ಕಂಬಿ ಹಿಂದೆ ಕೂತು ಕಣ್ಣೀರಿಡುತ್ತಿದ್ದಾಳೆ. ಅಷ್ಟೇ ಅಲ್ಲ,  ಪೋಷಕರಿಗೆ ಕ್ಷಮೆಯಾಚಿಸಿ  ಪತ್ರ ಬರೆದಿದ್ದಾಳೆ.

 

ತಿಂಗಳುಗಳಿಂದ ಸೆರೆವಾಸದಲ್ಲಿರುವ ವರ್ಷಿಣಿ ತನ್ನ ಹುಟ್ಟು ಹಬ್ಬ ಜೂನ್ 4 ರಂದು ಪೋಷಕರಲ್ಲಿ ಕ್ಷಮೆಯಾಚಿಸಿ ಪತ್ರ ಬರೆದಿದ್ದು, ತನ್ನ ತಾಯಿ ಪದ್ಮ ಜೈಲಿಗೆ ಮಗಳನ್ನ ನೋಡಿಕೊಂಡು ಬರುವುದಕ್ಕೆ ಹೋದಾಗ ತಾಯಿ ಕೈಯಲ್ಲಿ ಪತ್ರ ಕಳಿಸಿಕೊಟ್ಟಿದ್ದಾಳೆ ಎನ್ನಲಾಗಿದೆ

ಪತ್ರದಲ್ಲಿ ವರ್ಷಿಣಿ “ಐ ಲವ್ ಯೂ ಅಪ್ಪ, ಅಮ್ಮ Sorry..sorry.sorry”… ಹಲೋ ಮಮ್ಮಿ ಡ್ಯಾಡಿ ಎಲ್ಲರೂ ಹೇಗಿದ್ದೀರಾ. ನನಗೆ ಜೈಲಿನಲ್ಲಿರುವುದಕ್ಕೆ ಹಿಂಸೆ ಆಗುತ್ತಿದೆ. ಅಮ್ಮ-ಅಪ್ಪ ನೀವೆಲ್ಲ ತುಂಬಾನೇ ಒಳ್ಳೆಯವರು, ನಾನು ಕೆಟ್ಟವಳು. ನಾನು ಕೆಟ್ಟ ಹುಡುಗಿ, ನನ್ನಿಂದ ನಿಮಗೆ ತುಂಬಾ ತೊಂದರೆಯಾಗಿದೆ. ನನ್ನನ್ನು ಜೈಲಿನಿಂದ ಹೊರಗಡೆ ಕರೆದುಕೊಂಡು ಹೋಗಿ. ಜೈಲಿನಲ್ಲಿ ಇರುವುದಕ್ಕೆ ರೋದನೆ ಆಗುತ್ತಿದೆ. ನನಗೆ ಮನಶಾಂತಿ ಬೇಕೆಂದು ಪೋಷಕರ ಬಳಿ ಆರೋಪಿ ವರ್ಷಿಣಿ ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.

ವರ್ಷಿಣಿ ವಿರುದ್ಧ ಪೊಲೀಸರು ಕೋಕಾ ಆ್ಯಕ್ಟ್ ಕೂಡ ಜಾರಿ ಮಾಡಿದ್ದಾರೆ. ಕೋಕಾ ಆ್ಯಕ್ಟ್ ಅಡಿಯಲ್ಲಿ  ವರ್ಷಿಣಿಗೆ ಜಾಮೀನು ಸಿಗೋದು ಅನುಮಾನ. ಹೀಗಾಗಿ ವರ್ಷಿಣಿಗೆ ಲಕ್ಷ್ಮಣನ ಕೊಲೆ ಕೇಸ್ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದ್ದು, ಜೈಲಿನಿಂದ ಭಾವನಾತ್ಮಕ ಪತ್ರ ಬರೆದು ತನ್ನ ಅಳಲನ್ನ ತೋಡಿಕೊಂಡಿದ್ದಾಳೆ.

Sponsored :


9900071610