ಪ್ರಧಾನಿಗೆ ಮತ್ತೊಬ್ಬ ನಟಿಮಣಿಯ ಕಾಟ! ಇಷ್ಟಕ್ಕೂ ಪಾಕ್​ ಮೂಲದ ನಟಿ ಮೋದಿಗೆ ಏನಂದ್ರು ಗೊತ್ತಾ?!

1778
9900071610

ಪ್ರಧಾನಿ ನರೇಂದ್ರ ಮೋದಿಯವರಿಗೆ ಸದಾಕಾಲ ನಟಿಮಣಿಯರದ್ದೇ ಕಾಟ.  ಸ್ಯಾಂಡಲವುಡ್​ ಕ್ವೀನ್​ ಹಾಗೂ ಮಾಜಿ ಸಂಸದೆ ಸದಾಕಾಲ ಪ್ರಧಾನಿಯವರ ಕಾಲೆಳೆಯುವ ಕೆಲಸ ಮಾಡ್ತಿದ್ದರು. ಆದರೆ ಈಗ ಪದ್ಮಾವತಿ ಸೈಲೆಂಟ್​ ಆಗ್ತಿದ್ದಂತೇ ಪಾಕ್​ ನಟಿಯೊಬ್ಬರು ಪ್ರಧಾನಿಯೊಬ್ಬರ ವಿರುದ್ಧ ಕಿಡಿಕಾರಿ ಸುದ್ದಿಯಾಗಿದ್ದಾರೆ.

ad

ಹೌದು ಪಾಕ್​ ನಟಿ ವೀಣಾ ಮಲಿಕ್ ಕ್ಲೌಡಿ ವೆದರ್ ಹಾಗೂ ಭಾರೀ ಮಳೆಯಿಂದಾಗಿ ಭಾರತೀಯ ವಾಯುಸೇನೆಯ ವಿಮಾನ ರೆಡಾರ್ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಭಾರತದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ  ವ್ಯಂಗ್ಯವಾಡಿದ್ದಾರೆ.

ಕೆಲವು ದಿನಗಳ ಹಿಂದೆ ಭಾರತ ಪಾಕ್ ವಿರುದ್ಧ ಸರ್ಜಿಕಲ್ ಸ್ಟ್ರೇಕ್ ದಾಳಿ ನಡೆಸಿತ್ತು. ದಾಳಿಯ ನಂತರ ಪ್ರಧಾನಿ ಮೋದಿ ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆ ನಡುವೆ, ಪಾಕಿಸ್ತಾನ ರೆಡಾರ್ ಕಣ್ತಪ್ಪಿಸಿ ಬಾಲಾಕೋಟ್ ವಾಯುದಾಳಿ ನಡೆಸಲಾಯಿತು ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯು ಎಲ್ಲೆಡೆ ಭಾರಿ ಚರ್ಚೆಗೆ ಕಾರಣವಾಯಿತು.

ಭಾರೀ ಮಳೆಯ ಮಧ್ಯೆ ಯುದ್ಧ ವಿಮಾನಗಳು ರೆಡಾರ್ ಕಣ್ಣಿಗೆ ಕಾಣಿಸುವುದಿಲ್ಲವೇ ಎಂಬ ಚರ್ಚೆ ಹಾಗೂ ಪ್ರಶ್ನೆಗಳು ಹರಿದಾಡಲು ಪ್ರಾರಂಭವಾಗಿತ್ತು.  ಈ ಮಧ್ಯೆ ಮೊನ್ನೆ ಅಸ್ಸಾಂನಲ್ಲಿ  ಭಾರತೀಯ ವಾಯುಸೇನೆಯ ವಿಮಾನವೊಂದು ಕಣ್ಮರೆಯಾಗಿತ್ತು. ಈ ಘಟನೆಯನ್ನು ಟೀಕಿಸಿರುವ ಪಾಕಿಸ್ತಾನದ ನಟಿ ವೀಣಾ ಮಲಿಕ್ ಹವಾಮಾನ ವೈಪರೀತ್ಯ ಮತ್ತು ಭಾರೀ ಮಳೆಯಿಂದಾಗಿ ಭಾರತೀಯ ವಾಯುಸೇನೆಯ ವಿಮಾನ ರೆಡಾರ್ ಕಣ್ಣಿಗೆ ಕಾಣಿಸುತ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಪ್ರಧಾನಿ ಮೋದಿಯನ್ನು ಅಣಕಿಸಿದ್ದಾರೆ.

 

ಸದ್ಯ ವೀಣಾ ಮಲಿಕ್ ಮಾಡಿರುವ ಟ್ವೀಟ್‌ ಸಾಮಾಜಿಕ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಭಾರತೀಯ ಸಿನಿಮಾಗಳಲ್ಲಿ ನಟಿಸಿ ತನ್ನ ಹೊಟ್ಟೆ ತುಂಬಿಸಿಕೊಂಡ ನಟಿ ಮರಳಿ ಭಾರತಕ್ಕೆ ಅವಮಾನವಲ್ಲದೇ ಮತ್ತೇನು ನೀಡಿಲ್ಲ ಎಂದು ನೆಟ್ಟಿಗರು ಕಿಡಿ ಕಾರಿದ್ದಾರೆ.

ಇನ್ನೂ ಪಾಕ್ ನಟಿ ವೀಣಾ ಮಲಿಕ್ ಭಾರತೀಯ ಸಿನಿಮಾಗಳಲ್ಲೂ ನಟಿಸಿದ್ದು, ಕನ್ನಡದ ‘ಡರ್ಟಿ ಪಿಕ್ಚರ್ಸ್ ಸಿಲ್ಕ್’ನಲ್ಲೂ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Sponsored :


9900071610