ಕ್ರೀಡಾಂಗಣದಲ್ಲೇ ವೀರೂಗೆ ಸದ್ದಿಲ್ಲದೆ ಅನುಷ್ಕಾ ಕಿಸ್ : ವಿಡಿಯೋ ಸಿಕ್ಕಾಪಟ್ಟೆ ವೈರಲ್

1910

ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ಟೀಂ ಇಂಡಿಯಾ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿಗೆ ಕ್ರೀಡಾಂಗಣದಲ್ಲಿ ಮುತ್ತಿಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ad

ಈ ಘಟನೆ ನಡೆದಿದ್ದು ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ. ಈ ಕ್ರೀಡಾಂಗಣಕ್ಕೆ ಬಿಜೆಪಿ ಹಿರಿಯ ನಾಯಕ ಮಾಜಿ ಸಚಿವ ದಿ. ಅರುಣ್​ ಜೇಟ್ಲಿ ಹೆಸರನ್ನು ಮರು ನಾಮಕರಣ ಮಾಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಕ್ರೀಡಾ ಸಚಿವ ಕಿರಣ್​ ರಿಜಿಜು, ಬಿಸಿಸಿಐಯ ಪ್ರಮುಖ ಅಧಿಕಾರಿಗಳು ಸೇರಿದಂತೆ ಗಣ್ಯಾತಿಗಣ್ಯರು ಹಾಜರಿದ್ದರು.

ಸಮಾರಂಭಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಕೊಹ್ಲಿ-ಅನುಷ್ಕಾ ದಂಪತಿ ಕಾರ್ಯಕ್ರಮದ ಮಧ್ಯೆ ಕೈಗೆ ಮುತ್ತಿಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಿನಿ ಮಾಧ್ಯಮವೊಂದು ಟ್ವಿಟರ್ ನಲ್ಲಿ ಈ ದೃಶ್ಯವನ್ನು ಹಂಚಿಕೊಂಡಿದ್ದು ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್​ಗಳು ಬರುತ್ತಿದ್ದು, ಕೆಲವರು ಇಬ್ಬರ ಪ್ರೇಮವನ್ನು ಕೊಂಡಾಡಿದರೆ, ಮತ್ತೂ ಕೆಲವರು ‘ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದು ಸರಿಯಲ್ಲ’ ಎಂದಿದ್ದಾರೆ.

ಅಲ್ಲದೆ ಕ್ರೀಡಾಂಗಣದ ಒಂದು ಸ್ಟ್ಯಾಂಡ್​ಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೆಸರಿಟ್ಟು ಗೌರವಿಸಲಾಗಿದೆ.

Sponsored :

Related Articles