ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತೊಮ್ಮೆ ಗರಂ. ಕಾರಣವೇನು ಗೊತ್ತಾ?

579

ಈ ಹಿಂದೆ ತಮ್ಮ ಸೋಲಿಗೆ ಬಾಗಲಕೋಟೆ ಜಿಲ್ಲೆಯ ಕೆಲವು ಹಿರಿಯ ಕಾಂಗ್ರೆಸ್ಸಿಗರು ಕಾರಣ ಎಂದು ಆರೋಪಿಸಿದ್ದ ಹುನಗುಂದದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ಈಗ ಮತ್ತೊಮ್ಮೆ ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ನೀಡದಂತೆ ಹಿರಿಯ ಕಾಂಗ್ರೆಸ್  ಮುಖಂಡರ ವಿರುದ್ಧ ಗುಡುಗಿದ್ದಾರೆ.

ad

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಾವರಗಿಯಲ್ಲಿ ಮಾಜಿ ಸಚಿವ ದಿವಂಗತ ಎಸ್.ಆರ್.ಕಾಶಪ್ಪನವರ್ 15ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ , ವಿಧಾನ ಪರಿಷತ್ತಿನ ಸಭಾಪತಿ ಹುದ್ದೆಗೆ ಹೆಸರು ಕೇಳಿ ಬರುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್.ಪಾಟೀಲ್,ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್,ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹಾಗೂ ರವೀಂದ್ರ ಕಲಬುರ್ಗಿ ಯವರಿಗೆ ಯಾವುದೇ ಹುದ್ದೆ ನೀಡದಂತೆ ಕೆಪಿಸಿಸಿ ಗೆ ದೂರು ನೀಡಿದ್ದಾರೆ.

ಇವರೆಲ್ಲ ತಾವು ಗೆಲ್ಲುವಾಗ ಕಾಲು ಮುಗಿತಾರೆ,ಗೆದ್ದ ಮೇಲೆ ತಲೆ ಮೇಲೆ ಕಾಲು ಇಡ್ತಾರೆ.ಇಂಥವರಿಗೆ ಪಕ್ಷ ಯಾವುದೇ ಸ್ಥಾನಮಾನ ನೀಡಕೂಡದು,ಒಂದು ವೇಳೆ ಕೊಟ್ಟರೆ ಹೋರಾಟಕ್ಕಿಳಿಯುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

 

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಡಿಸಿಎಂ ಡಾ.ಜಿ.ಪರಮೇಶ್ವರ್ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರಿಗೆ ದೂರು ನೀಡಿರುವ ಕಾಶಪ್ಪನವರ್ ಮುಂದಿನ ದಿನಮಾನಗಳಲ್ಲಿ ತಮ್ಮ ಸೋಲಿಗೆ ಹಾಗೂ ಈ ಭಾಗದ ಕಾಂಗ್ರೆಸ್ –ಪಕ್ಷದ ಸೋಲಿಗೆ ಕಾರಣರಾದ ಈ ನಾಲ್ವರಿಗೆ ಸಂಬಂಧಪಟ್ಟ ದಾಖಲೆಗಳನ್ನ ಬಿಡುಗಡೆ ಮಾಡುವ ಎಚ್ಚರಿಕೆ ನೀಡಿದ್ದಾರೆ.ಇನ್ನು ಜಿಲ್ಲಾ ಕಾಂಗ್ರೆಸ್ ನಲ್ಲಿನ ಅಸಮಾಧಾನ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ ಎಂಬುದು ಮತ್ತೆ ಬಹರಂಗವಾಗಿದೆ,

 

Sponsored :

Related Articles