“ವಿ ಆರ್ ನಾಟ್ ಬೆಗ್ಗರ್ಸ್..” – ಸಿ.ಎಮ್. ಕುಮಾರಸ್ವಾಮಿ

317
CM Kumarswamy visits Mysore

ನಮಗೆ ಏಳೋ.. ಐದೋ.. ಮೂರೋ..ಸೀಟು ಬಿಟ್ಟು ಕೊಡಕ್ಕೆ ‘ವೀ ಆರ್​​ ನಾಟ್​ ಬೆಗ್ಗರ್ಸ್ ಎಂದು’ ಲೋಕಸಭೆ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಸಿ ಎಂ ಕುಮಾರಸ್ವಾಮಿ ಕಾಂಗ್ರೆಸ್ ನ ನಿಲುವಿನ ವಿರುದ್ದ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ad

ಮೈಸೂರಿನಲ್ಲಿ ಮಾತನಾಡಿದ ಸಿ.ಎಮ್. ಕುಮಾರಸ್ವಾಮಿ ಸೀಟು ಹಂಚಿಕೆಯ ಕುರಿತು ಎರಡೂ ಪಕ್ಷಗಳು ಕೂತು ಸಮಗ್ರವಾಗಿ ಚರ್ಚೆ ಮಾಡಿ ಒಂದು ನಿರ್ಧಾರಕ್ಕೆ ಬರಬೇಕಾಗಿದೆ. ನನ್ನ ಈ ಮೈತ್ರಿ ಸರ್ಕಾರದಲ್ಲಿ ಜವಾಬ್ದಾರಿ ಇರುವುದು ನಾಡಿನ ಜನತೆಗೆ ಒಳ್ಳೆಯ ಆಡಳಿತವನ್ನು ಕೊಡುವುದರ ಮೇಲೆ. ಸದ್ಯಕ್ಕೆ ಇದರ ಮೇಲೆ ನನ್ನ ಗಮನ ಇದೆ. ಸೀಟಿನ ಹಂಚಿಕೆ ವಿಚಾರದಲ್ಲಿ ನಮ್ಮ ರಾಷ್ಟ್ರಾಧ್ಯಕ್ಷರು ಹಾಗೂ ಕಾಂಗ್ರೆಸ್ ನಾಯಕರು ಏನು ಮಾಡುತ್ತಾರೆ ಎಂದು ಕಾದು ನೋಡೋಣ. ಪ್ರಸ್ತುತ ಕಾಂಗ್ರೆಸ್ ನಾಯಕರು ಸೀಟು ಹಂಚಿಕೆ ವಿಚಾರದಲ್ಲಿ ನನ್ನ ಬಳಿ ಏನನ್ನೂ ಚರ್ಚೆ ಮಾಡಿಲ್ಲ ಎಂದರು.

 

ಲ್ಯಾನ್ಸ್ ಡೌನ್ ಕಟ್ಟಡ ಹಾಗೂ ದೇವರಾಜ ಮಾರುಕಟ್ಟೆ ನೆಲಸಮ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದೊಂದು ಭಾವನಾತ್ಮಕ ಸಂಬಂಧದ ವಿಚಾರ.ಇಂದು ಕಟ್ಟಡ ವೀಕ್ಷಣೆ ಮಾಡಿದ್ದೇನೆ.ಕಟ್ಟಡ ನೆಲಸಮ ಮಾಡೋ ವಿಚಾರ ಸಂಬಂಧ ಯಾವುದೇ ವರದಿ ನನ್ನ ಕೈ ಸೇರಿಲ್ಲ. ಅಲ್ಲಲ್ಲಿ ಕಟ್ಟಡ ಶಿಥಿಲವಾಗಿದೆ.ಪಾರಂಪರಿಕತೆ, ಭಾವನಾತ್ಮಕ ವಿಚಾರಕ್ಕೆ ಧಕ್ಕೆ ಬಾರದಂತೆ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

Sponsored :

Related Articles