ನಿಮ್ಮ ಹೆಸರಲ್ಲಿ ಪೂಜೆ ಮಾಡಿದ್ದೇವೆ ಹಣ ಕೊಡಿ- ನಕಲಿ ಜ್ಯೋತಿಷ್ಯಿಗಳ ಕಾಟಕ್ಕೆ ಹುಡುಗಿ ಕಂಗಾಲು!

738

ಮೂಢನಂಬಿಕೆಗಳನ್ನ ತಡೆಯೋಕೆ ಸರ್ಕಾರ ಮೌಢ್ಯ ಪ್ರತಿಬಂಧಕ ಕಾಯ್ದೆಯನ್ನ ಜಾರಿಗೆ ತಂದ್ರು ನಕಲಿ ಜ್ಯೋತಿಷಿಗಳ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಸಿಲಿಕಾನ್ ಸಿಟಿಯಲ್ಲಿ ಜ್ಯೋತಿಷಿಗಳಿಬ್ಬರು ಜನರಿಗೆ ಮೋಸ ಮಾಡುತ್ತಿರುವುದು ಈಗ ಬೆಳಕಿಗೆ ಬಂದಿದೆ.ಆರ್ ಟಿ ನಗರ ಬಸ್ ನಿಲ್ದಾಣದ ಬಳಿಯಿರೋ ಕಾಳಿಕಾಂಭ ಜ್ಯೋತಿಷ್ಯಾಲಯದ ಶ್ರೀನಿವಾಸ ಶಾಸ್ತ್ರಿ ಹಾಗೂ ಕಾರ್ತಿಕ್ ಶಾಸ್ತ್ರಿ ಆ ಇಬ್ಬರು ನಕಲಿ ಜ್ಯೋತಿಷಿಗಳು.

ad

ಜನರ ದೌರ್ಬಲ್ಯವನ್ನೆ ಬಂಡವಾಳ ಮಾಡಿಕೊಂಡು ಜನರಿಂದ ಸಾವಿರಾರು ರೂಪಾಯಿ ದೋಚುತ್ತಿದ್ದಾರೆ. ಮೊದಲಿಗೆ ಸಮಸ್ಯೆ ಪರಿಹಾರಕ್ಕೆ ಹಣ ಕೊಡಿ ಎನ್ನುವ ಇವ್ರು ನಂತರ ಹಣ ಕೊಡಲಿಲ್ಲ ಎಂದರೆ ಬೆದರಿಸಿಯಾದ್ರು ಹಣ ವಸೂಲಿ ಮಾಡುತ್ತಿದ್ದಾರೆ.

ಅದ್ರಲ್ಲೂ ಯುವತಿಯರು ಸಿಕ್ಕರೆ ಹಣ ಕೀಳುವ ಜೊತೆಗೆ ಅಸಭ್ಯವಾಗಿಯೋ ಮಾತಾಡ್ತಾರಂತೆ ಈ ಕಳ್ಳ ಜ್ಯೋತಿಷಿಗಳು. ಮರ್ಯಾದೆಗೆ ಹೆದರಿ ಯುವತಿಯೊಬ್ಬಳು ಈಗ ಬಿಟಿವಿ ಬಳಿ ತನ್ನ ಅಳಲು ತೋಡಿಕೊಂಡಿದ್ದಾಳೆ. ಸದ್ಯ ಈ ಜ್ಯೋತಿಷ್ಯ ಕೇಂದ್ರ ಆರ್ ಟಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದು ಪೊಲಿಸ್ರು ಇನ್ನಾದ್ರು ಕ್ರಮ ಕೈಗೊಳ್ತಾರ ಅಂತಾ ಕಾದು ನೋಡಬೇಕು

Sponsored :

Related Articles