ಸ್ವಾತಂತ್ರ್ಯ ದಿನಾಚರಣೆಯಂದು ಕಾಶ್ಮೀರದಲ್ಲಿ ಏನಾಗುತ್ತೆ?! ಇಲ್ಲಿದೆ ಇಂಟ್ರಸ್ಟಿಂಗ್​ ಸ್ಟೋರಿ!!

1378
9900071610

ಈಗಾಗಲೇ ವಿಶೇಷ ಸ್ಥಾನಮಾನ ರದ್ದಗೊಂಡಿರುವ ಕಾರಣಕ್ಕೆ ವಿಶ್ವದ ಗಮನ ಸೆಳೆದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ವಾತಂತ್ರ್ಯದಿನಾಚರಣೆಯಂದು ಏನಾಗಲಿದೆ ಗೊತ್ತಾ? ಇಂತಹದೊಂದು ಪ್ರಶ್ನೆಯೇ ಎಲ್ಲರ ಮನಸ್ಸಿನಲ್ಲೂ ನಾನಾ ಪ್ರಶ್ನೆ ಹುಟ್ಟುಹಾಕಿದ್ದು, ಅಂದು ಕಾಶ್ಮೀರದ ಪ್ರಸಿದ್ಧ ಲಾಲ್​ ಚೌಕ್​ನಲ್ಲಿ ವಿಶೇಷ ಧ್ವಜಾರೋಹಣ ಸಮಾರಂಭ ನಡೆಯುವ ನೀರಿಕ್ಷೆ ಇದೆ.

ad


ಕೇಂದ್ರದ ಮೂಲಗಳ ಮಾಹಿತಿ ಪ್ರಕಾರ ಅಂದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಆದೇಶವನ್ನು ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಶ್ಮೀರಕ್ಕೆ ಭೇಟಿ ನೀಡಲಿದ್ದು, ಧ್ವಜಾರೋಹಣದಲ್ಲಿ ಭಾಗಿಯಾಗಲಿದ್ದಾರೆ. ಈಗಾಗಲೇ ರಾಷ್ಟ್ರೀಯ ಭದ್ರತೆ ಸಲಹೆಗಾರ ಅಜಿತ್ ಧೋವಲ್​ ಅಗಸ್ಟ್ 15 ರಂದು ಲಾಲ್​ಚೌಕ್​ನಲ್ಲಿ ಕೇಂದ್ರ ಗೃಹ ಸಚಿವರೊಂದಿಗೆ ಸಾಥ್ ನೀಡಲಿದ್ದಾರೆ ಎನ್ನಲಾಗುತ್ತಿದೆ.


ಆದರೆ ಈ ಗುಪ್ತ ಮಾಹಿತಿಯನ್ನು ಖಚಿತಪಡಿಸಲು ಕಾಶ್ಮೀರದ ಯಾವುದೇ ಭದ್ರತಾ ಸಿಬ್ಬಂದಿ ಸಿದ್ಧರಿಲ್ಲ. ಇನ್ನು ಗೃಹಸಚಿವರ ಕಚೇರಿ ಈ ಮಾಹಿತಿಯನ್ನು ಖಚಿತಪಡಿಸಿದೆಯಾದರೂ ನಿಗದಿತ ದಿನಾಂಕವನ್ನು ಹೇಳುತ್ತಿಲ್ಲ. ದರೆ ಕಾಶ್ಮೀರದ ಗಡಿಭಾಗದಲ್ಲಿ ನಡೆಯುತ್ತಿರುವ ಸಿದ್ಧತೆಗಳು ಸ್ವಾತಂತ್ರ್ಯೋತ್ಸವದಂದು ಏನೋ ವಿಶೇಷ ಘಟನೆ ನಡೆಯಲಿದೆ ಎಂಬುದಕ್ಕೆ ಸಾಕ್ಷಿ ಒದಗಿಸುತ್ತಿದ್ದು, ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

Sponsored :


9900071610