ರೋಷನ್​ ಬೇಗ್​ ಮುಂದಿನ ನಡೆ ಏನು?! ಅಮಾನತ್ತುಗೊಂಡ ಬೇಗ್​​ ಪ್ರೆಸ್ಮಿಟ್​ನಲ್ಲಿ ಸಿಡಿಯುತ್ತಾ ಮತ್ತೊಂದು ಬಾಂಬ್​​?!

979

ಸಸ್ಪೆಂಡ್ ಶಾಕ್​​ ಕೊಟ್ಟಿರೋ ಕಾಂಗ್ರೆಸ್​ ವಿರುದ್ಧ ಮಾಜಿ ಸಚಿವ, ಶಿವಾಜಿನಗರ ಶಾಸಕ ರೋಷನ್​​​ ಬೇಗ್​​​ ಮತ್ತೆ ತಿರುಗಿ ಬೀಳ್ತಾರಾ..? ಹೌದು ಎನ್ನುತ್ತಿದೆ ಸಧ್ಯದ ಬೆಳವಣಿಗೆ. ಸಸ್ಪೆಂಡ್​ ಆದೇಶ ಹೊರಬೀಳುತ್ತಿರುವಂತೆ ಬೇಗ್​ ಇಂದು ತುರ್ತು ಸುದ್ದಿಗೋಷ್ಠಿ ಕರೆದಿದ್ದು, ಸುದ್ದಿಗೋಷ್ಠಿಯಲ್ಲಿ ಮಹತ್ವದ ಬಾಂಬ್​ ಸಿಡಿಸುವ ನೀರಿಕ್ಷೆ ಇದೆ.


ತಮ್ಮ ನಿವಾಸದಲ್ಲೇ ಬೇಗ್​ ಸುದ್ದಿಗೋಷ್ಠಿ ಆಯೋಜಿಸಿದ್ದು, ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್​ ರಾಜ್ಯ ಹಾಗೂ ಕೇಂದ್ರ ನಾಯಕರ ವಿರುದ್ಧ ಮಹತ್ವದ ವಿಚಾರಗಳನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ. ಅಲ್ಲದೇ ರೋಷನ್ ಬೇಗ್​ ಕಾಂಗ್ರೆಸ್​ ತೊರೆದು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತು ಕೇಳಿಬಂದಿದ್ದು, ಈ ವಿಚಾರವೂ ಕೂಡ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ.

ad


ನಿನ್ನೆ ಪಕ್ಷ ವಿರೋಧ ಚಟುವಟಿಕೆ ಹಿನ್ನೆಲೆಯಲ್ಲಿ ರೋಷನ್​ ಬೇಗ್​ರನ್ನು ಎಐಸಿಸಿ ಸಸ್ಪೆಂಡ್ ಮಾಡಿತ್ತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬೇಗ್​​​ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಬಫೂನ್​​​​​ಗಳು, ದುರಹಂಕಾರಿಗಳು ಎಂದೆಲ್ಲಾ ರೋಷನ್​ ಬೇಗ್ ಬಹಿರಂಗ ಆರೋಪ ಮಾಡಿದ್ದರು. ​​ ಬೇಗ್​​ ನಡವಳಿಕೆಯಿಂದ ಪಕ್ಷಕ್ಕೆ ಮುಜುಗರವಾಗಿದೆ.ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಎಐಸಿಸಿಗೆ ಕೆಪಿಸಿಸಿ ಶಿಫಾರಸು ಮಾಡಿತ್ತು.

Sponsored :

Related Articles