ಡಿ ಕೆ ”ಶಿವ”ಕುಮಾರ್ ಮೂರನೇ ಕಣ್ಣು ಬಿಟ್ರೆ ಜೈಲು ಸೇರೋ ಬಿಜೆಪಿ ನಾಯಕರು ಯಾರು ? ಪತ್ರ ನನ್ನದಲ್ಲ ಎಂದು ಬಿ ಎಸ್ ವೈ ಮನವಿ ಮಾಡುತ್ತಿರೋದ್ಯಾಕೆ ? ದೆಹಲಿಯಲ್ಲಿ ಡಿಕೆಶಿ ಗುಟುರು ಹಾಕಿರೋದೇನು ?

19295

ಕೇಂದ್ರದ ಬಿಜೆಪಿ ಸರಕಾರ ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್ ರವರನ್ನು ಐಟಿ, ಇಡಿ ಸಿಬಿಐ ಮೂಲಕ ಹೆದರಿಸಲು ನೋಡಿದ್ರೆ, ಭಯದಿಂದ ನಡುಗುತ್ತಿರುವುದು ರಾಜ್ಯ ಬಿಜೆಪಿ ಮುಖಂಡರು !! ಹೌದು. ಬಿಜೆಪಿ ರಾಜ್ಯ ಮುಖಂಡರು ಎಲ್ಲಾ ಅಕ್ರಮ ಆಸ್ತಿ, ತೆರಿಗೆ ವಂಚನೆಯ ಪಿನ್ ಟು ಪಿನ್ ಡೀಟೆಲ್ ಅನ್ನು ಡಿ ಕೆ ಶಿವಕುಮಾರ್ ದಾಖಲೆ ಸಹಿತ ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ದಾಳಿ ಹಿಂದೆ ನಮ್ಮ ಕೈವಾಡವಿಲ್ಲ ಎಂದು ಡಿ ಕೆ ಶಿವಕುಮಾರ್ ಗೆ ಬಿಜೆಪಿ ನಾಯಕರು ಪರಿ ಪರಿಯಾಗಿ ಮನವರಿಕೆ ಮಾಡಲು ಯತ್ನಿಸುತ್ತಿದ್ದಾರೆ.ಕೇಂದ್ರ ಜಾರಿ ನಿರ್ದೇಶನಾಲಯದ ಮೂಲಕ ಡಿ ಕೆ ಶಿವಕುಮಾರ್ ವಿರುದ್ಧ ಎಫ್ ಐಅರ್ ದಾಖಲಾಗಿಸಿ, ಬಂಧನಕ್ಕೆ ಯತ್ನಿಸಲಾಗುತ್ತಿದೆ ಎಂದು ಶನಿವಾರ ಸುದ್ದಿ ಹರಡಿತ್ತು. ತಕ್ಷಣ ಪತ್ರಿಕಾಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಸಹೋಧರ, ಸಂಸದ ಡಿ ಕೆ ಸುರೇಶ್, ಐಟಿ ಇಡಿ ದಾಳಿಯ ಹಿಂದೆ ಬಿಜೆಪಿ ಇದೆ. ರಾಜ್ಯ ಸರಕಾರವನ್ನು ಅಸ್ಥಿರಗೊಳಿಸಲು ಡಿ ಕೆ ಶಿವಕುಮಾರ್ ವಿರುದ್ಧ ರಾಜಕೀಯದ ದ್ವೇಷ ಸಾಧಿಸಲಾಗುತ್ತಿದೆ ಎಂದು ಆರೋಪಿಸಿದ್ದರು. ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಐಟಿ ಇಲಾಖೆಗೆ ಡಿಕೆಶಿ ಸಹೋಧರರ ವಿರುದ್ಧ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಬಿಡುಗಡೆಗೊಳಿಸಿದ್ದರು. ಇದು ರಾಜಕೀಯವಾಗಿ ಸಂಚಲನಕ್ಕೆ ಕಾರಣವಾಗಿತ್ತು.

ad

ಡಿ ಕೆ ಶಿವಕುಮಾರ್ ಅಕ್ರಮ ಆಸ್ತಿ ಮಾಡಿದ್ದರೆ ಅದರ ವಿರುದ್ಧ ಐಟಿಗೆ ಸಂಸದರಾಗಿ ಪತ್ರ ಬರೆಯುವುದು ತಪ್ಪೇನಲ್ಲ. ಆದರೆ ಬಿ ಎಸ್ ವೈ ಮಾತ್ರ ಆ ಪತ್ರ ನನ್ನದಲ್ಲ ಎಂದು ಅವಲತ್ತುಕೊಂಡಿದ್ದಾರೆ. ನಾನು ಪತ್ರ ಬರೆದಿಲ್ಲ ಎಂದು ಅಂದೇ ಸ್ಪಷ್ಟೀಕರಣ ನೀಡಿದ್ದರು. ಇಂದು ಮತ್ತೆ, ನಾನು ಡಿಕೆ ಶಿವಕುಮಾರ್ ಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಈ ಪತ್ರ ನನ್ನದಲ್ಲ. ನನ್ನ ಬಗ್ಗೆ ತಪ್ಪು ತಿಳಿಯಬೇಡಿ. ನಾನು ನಿಮ್ಮ ಗೆಳೆಯ ಎಂದಿದ್ದಾರೆ. ಈ ರೀತಿ ಪರಿಪರಿಯಾಗಿ ಕೇಳಿಕೊಳ್ಳಲು ಕಾರಣ, ಡಿ ಕೆ ಶಿವಕುಮಾರ್ ಬಳಿಯೂ ಯಡಿಯೂರಪ್ಪಗೆ ಸಂಬಂಧಿಸಿದ ದಾಖಲೆಗಳಿಗೆ ಎಂಬ ಮಾಹಿತಿ.ಡಿ ಕೆ ಸುರೇಶ್ ಇದನ್ನು ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ಹೇಳಿದ್ದರು. ”ಡಿ ಕೆ ಶಿವಕುಮಾರ್ ಮನೆಯಲ್ಲಿ ದೊರೆತ ದಾಖಲೆಗಳ ಎಲ್ಲಾ ಹೆಸರುಗಳನ್ನು ಐಟಿ ಇಲಾಖೆ ಬಹಿರಂಗಪಡಿಸಬೇಕು. ಡಿ ಕೆ ಶಿವಕುಮಾರ್ ಮನೆಯಲ್ಲಿ ಯಾವೆಲ್ಲಾ ರಾಜಕಾರಣಿಗಳಿಗೆ ಸಂಬಂದಿಸಿದ ದಾಖಲೆಗಳಿದ್ದವು ಎಂಬುದನ್ನು ಐಟಿ ಹೇಳಬೇಕು ಮತ್ತು ಅದೆಲ್ಲವನ್ನೂ ಇಡಿಗೆ ವಹಿಸಬೇಕು” ಎಂದು ಆಗ್ರಹಿಸಿದ್ದರು. ಸೂಕ್ತ ಸಂಧರ್ಭದಲ್ಲಿ ಬಿಡುಗಡೆ ಮಾಡಲು ಬಿ ಎಸ್ ವೈಗೆ ಸಂಬಂದಿಸಿದ ದಾಖಲೆಗಳನ್ನು ಡಿಕೆಶಿ ಸಂಗ್ರಹಿಸಿದ್ದು ಅವೂ ಕೂಡಾ ಐಟಿ ಕೈಯ್ಯಲ್ಲಿದೆ ಎನ್ನಲಾಗಿದೆ.ಇಂದು ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್, ದ್ವೇಷದ ರಾಜಕಾರಣ ಮಾಡಬೇಡಿ. ಅಧಿಕಾರ ಶಾಶ್ವತ ಅಲ್ಲ. ಕಾನೂನು ಎಲ್ಲರಿಗೂ ಒಂದೇ. ಯಾರು ಯಾರ ಬಂಡವಾಳ ಏನು ಎಂದು ನನಗೂ ಗೊತ್ತಿದೆ” ಎಂದು ಗುಟುರು ಹಾಕಿರೋದು ರಾಜ್ಯದ ಹಲವು ಬಿಜೆಪಿಗರ ನಿದ್ದೆಗೆಡಿಸಿದೆ. ಒಟ್ಟಾರೆ ಡಿ ಕೆ ಶಿವಕುಮಾರ್ ರನ್ನು ಹೆದರಿಸಲು ಕೇಂದ್ರದ ಬಿಜೆಪಿ ಸರಕಾರ ಐಟಿ ಇಡಿ ದಾಳಿ ನಡೆಸಿದ್ರೆ, ನಡುಕ ಶುರುವಾಗಿದ್ದು ಮಾತ್ರ ರಾಜ್ಯ ಬಿಜೆಪಿ ನಾಯಕರಿಗೆ !!

Sponsored :

Related Articles