ಮಂಡ್ಯ ಬಸ್​ ದುರಂತ ಸಂತ್ರಸ್ಥರಿಗೆ ಕೇಂದ್ರದಿಂದ ಪರಿಹಾರ ಕೊಡಿಸಿದ್ದು ಯಾರು ಗೊತ್ತಾ?! ಇಲ್ಲಿದೆ ಎಕ್ಸ್​​ಕ್ಲೂಸಿವ್​​​ ಡಿಟೇಲ್ಸ್​​​​​​​​​​!!

23527

ರಾಜ್ಯವನ್ನೇ ದುಃಖದ ಮಡುವಿನಲ್ಲಿ ಮುಳುಗಿಸಿದ್ದ ಮಂಡ್ಯದ ಕನಕನ ಮರಡಿ ಬಸ್​ ದುರಂತ ಪ್ರಕರಣ ಇನ್ನು ಜನಮಾನಸದಿಂದ ದೂರವಾಗಿಲ್ಲ. ಮನೆಯ ಸದಸ್ಯರನ್ನು ಕಳೆದುಕೊಂಡು ದುಃಖದಲ್ಲಿದ್ದ ಜನತೆಗೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಿದ್ದು, ತಕ್ಕಮಟ್ಟಿಗೆ ಸಂತ್ರಸ್ಥರ ನೆರವಿಗೆ ಬಂದಿದೆ. ಆದರೆ ಈ ನೆರವಿನ ಹಿಂದಿನ ಶಕ್ತಿ ಯಾರು ಗೊತ್ತಾ? ಇಲ್ಲಿದೆ ಡಿಟೇಲ್ಸ್​.
ಹೌದು ಕಳೆದೆರಡು ದಿನಗಳಿಂದ ಮಂಡ್ಯ ಕನಕನ ಮರಡಿ ಸಂತ್ರಸ್ಥರಿಗೆ ಕೇಂದ್ರ ಸರ್ಕಾರ ಪರಿಹಾರ ನೀಡಿರುವ ವಿಚಾರ ಸಾಕಷ್ಟು ಚರ್ಚೆ ಹಾಗೂ ಶ್ಲಾಘನೆಗೆ ಪಾತ್ರವಾಗಿದೆ. ಆದರೆ ಇದರ ಹಿಂದಿನ ನಿಜವಾದ ಶಕ್ತಿ ಯಾರು ಎಂಬುದು ಯಾರಿಗೂ ಅರಿವಿಲ್ಲ. ಅದು ಮತ್ಯಾರು ಅಲ್ಲ ಮಂಡ್ಯದ ದಕ್ಷ ಡಿಸಿ ಮಂಜುಶ್ರೀ.


ಹೌದು ಡಿಸಿ ಮಂಜುಶ್ರೀಯವರು ಈ ದುರಂತದ ಬಗ್ಗೆ ಕೇಂದ್ರ ಸರ್ಕಾರಕ್ಕೆ ವಿವರವಾದ ಪತ್ರ ಬರೆದಿದ್ದು, ಮನೆಯ ಸದಸ್ಯರನ್ನು ಕಳೆದುಕೊಂಡ ಕುಟುಂಬಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೆರವು ನೀಡುವಂತೆ ಮನವಿ ಮಾಡಿದ್ದರು.ಫೆಬ್ರುವರಿ 6ರಂದು ಪ್ರಧಾನಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದ ಮಂಡ್ಯ ಡಿಸಿ ಮಂಜುಶ್ರೀ, ಘಟನೆಯ ತೀವ್ರತೆಯನ್ನು ವಿವರಿಸಿ ಹೆಚ್ಚಿನ ಸಹಾಯಕ್ಕೆ ಮನವಿ ಮಾಡಿದ್ದರು.

ad


ಡಿಸಿ ಮಂಜುಶ್ರೀ ಮನವಿಗೆ ತಕ್ಷಣ ಸ್ಪಂದಿಸಿದ್ದ ಪ್ರಧಾನಿ ಕಾರ್ಯಾಲಯ,ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಣೆ ಮಾಡಿದೆ. ಆದರೆ ಡಿಸಿ ಮಂಜುಶ್ರೀ ಪ್ರಯತ್ನದಿಂದ ದೊರಕಿದ ಈ ಪರಿಹಾರಕ್ಕೆ ಕೆಲ ರಾಜಕಾರಣಿಗಳು ಬಣ್ಣ ಹಚ್ಚಲು ಮುಂದಾಗಿದ್ದಾರೆ. ಅಲ್ಲದೇ ಚುನಾವಣೆ ವೇಳೆ ಇದೇ ದಕ್ಷ ಡಿಸಿಗೆ ಕೆಲವರು ಇನ್ನಿಲ್ಲದ ಕಿರುಕುಳ ನೀಡಿದ್ದರು.


ಜಿಲ್ಲಾಧಿಕಾರಿ ಮಂಜುಶ್ರೀ ಪ್ರಯತ್ನದಿಂದ ದೊರಕಿದ ಪರಿಹಾರವನ್ನು ಕೆಲವರು ತಮ್ಮ ಪ್ರಯತ್ನ ಎಂದು ಸುಳ್ಳು ಹೇಳಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹರಿಬಿಟ್ಟು ಪಬ್ಲಿಸಿಟಿಗಳಿಸಿಕೊಳ್ಳುವ ಪ್ರಯತ್ನದಲ್ಲಿರೋದು ಮಾತ್ರ ವಿಪರ್ಯಾಸವೇ ಸರಿ. ಡಿಸಿ ಮಂಜುಶ್ರೀ ಪರಿಹಾರ ದೊರಕಿಸಲು ನಡೆಸಿದ ಪ್ರಯತ್ನದ ಎಲ್ಲ ದಾಖಲೆ ಬಿಟಿವಿನ್ಯೂಸ್​ಗೆ ಲಭ್ಯವಾಗಿದ್ದು, ಬಿಟಿವಿ ವಿವರವಾದ ಸುದ್ದಿ ಪ್ರಕಟಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.


ಇನ್ನು ಮಂಡ್ಯ ಜನತೆ ಮಾತ್ರ ಜಿಲ್ಲಾಧಿಕಾರಿಯವರ ಪ್ರಯತ್ನದಿಂದಲೇ ತಮಗೆ ಪರಿಹಾರ ದೊರಕಿರುವುದನ್ನು ತಿಳಿದು ಡಿಸಿ ಮಂಜುಶ್ರೀಯವರನ್ನು ಅಭಿನಂದಿಸಿದ್ದಾರೆ.

Sponsored :

Related Articles