ರಾಜೀನಾಮೆ ಯಾರಿಗೆ ಕೊಡಬೇಕು ಅನ್ನೋದು ಗೊತ್ತಿರಬೇಕು! ಆನಂದ ಸಿಂಗ್ ವಿರುದ್ಧ ಸ್ಪೀಕರ್​ ಗರಂ!!

329
9900071610

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರೋ ಆನಂದ್ ಸಿಂಗ್ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಗರಂ ಆಗಿದ್ದಾರೆ. ಶಾಸಕರಾದವರಿಗೆ ರಾಜೀನಾಮೆ ಯಾರಿಗೆ ಕೊಡಬೇಕು ಅನ್ನೋದು ಗೊತ್ತಿರಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಗುಡುಗಿದ್ದಾರೆ.

ad

ವಿಧಾನಸೌಧದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ, ಆನಂದಸಿಂಗ್ ರಾಜ್ಯಪಾಲರನ್ನಷ್ಟೇ ಅಲ್ಲ, ಬೇಕಿದ್ದರೆ ರಾಷ್ಟ್ರಪತಿಗಳನ್ನೂ ಭೇಟಿ ಮಾಡಲಿ. ಕ್ಷೇತ್ರದ ಜನರ ಅಭಿಪ್ರಾಯ ಪಡೆದೇ ರಾಜೀನಾಮೆ ಅಂಗೀಕಾರ ಮಾಡುವೆ. ಸಾಂವಿಧಾನಿಕ ರೀತಿಯಲ್ಲೇ ಕೆಲಸ ಮಾಡುವೆ ಎಂದಿದ್ದಾರೆ.

ಇಬ್ಬರು ರಾಜೀನಾಮೆ ಕೊಟ್ಟಿದ್ದಾರೆ ಅಂತಾ ಯಾರು ಹೇಳಿದ್ದು ? ಎಂದು ಪ್ರಶ್ನಿಸಿರುವ ಸ್ಪೀಕರ್ ರಮೇಶ್ ಕುಮಾರ, ಒಂದು ಮುಚ್ಚಿಟ್ಟುಕೊಂಡು ಇನ್ನೊಂದು ಹೇಳೋಕೆ ಆಗುತ್ತಾ? ನನಗೆ ಕೇವಲ ಒಂದು ರಾಜೀನಾಮೆ ತಲುಪಿದೆ. ಅದರ ಬಗ್ಗೆ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆ.ಕಾನೂನು ಸಲಹೆ ಪಡೆಯುತ್ತೇನೆ ಎಂದಿದ್ದಾರೆ.

 

ಅಲ್ಲದೇ ಆನಂದ ಸಿಂಗ್ ರಾಜೀನಾಮೆ ಬಗ್ಗೆ ಅಡ್ವೋಕೇಟ್​ ಜನರಲ್​ ಅಭಿಪ್ರಾಯವನ್ನು ಕೂಡ ಸ್ಪೀಕರ್​ ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ರಾಜೀನಾಮೆ ನೀಡಿರುವ ಆನಂದ ಸಿಂಗ್ ಸ್ಪೀಕರ್ ರಮೇಶ್ ಕುಮಾರ ಕೆಂಗಣ್ಣಿಗೆ ಗುರಿಯಾಗಿದ್ದು, ಏನಾಗುತ್ತೆ ಕಾದು ನೋಡಬೇಕಿದೆ.

Sponsored :


9900071610