ಅಪರೂಪದ ಗೊಂಬೆ ಮದುವೆ ನಡೆದಿದ್ಯಾಕೆ ಗೊತ್ತಾ?!

260

 

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಪರೂಪದ ಮದುವೆ.ಉತ್ತಮವಾಗಿ ಮಳೆ ಬೆಳೆ ಹಾಗೂ ಲೋಕಕ್ಕೆ ಕಲ್ಯಾಣವಾಗಲಿ ಅಂತಾ ವಾಣಿಜ್ಯ ‌ನಗರಿ ಹುಬ್ಬಳ್ಳಿಯಲ್ಲಿ ಸಂಪ್ರದಾಯ ಬದ್ಧವಾಗಿ ಗೊಂಬೆ ಮದುವೆ ಮಾಡಲಾಯಿತು. ನಗರದ ಬಾನಿ ಓಣಿಯಲ್ಲಿ ಯಲ್ಲಮ್ಮ ಶಿರಕೋಳ ಅವರ ಆಸೆಯಂತೆ ಕುಟುಂಬಸ್ಥರು ಹಾಗೂ ಕಾಲೋನಿಯ ಜನರು ಸೇರಿಕೊಂಡು ಸಂಭ್ರಮದಿಂದ ಗೊಂಬೆಗಳ ಮದುವೆ ಮಾಡಿದ್ದಾರೆ.ಸಾಕ್ಷಾತ್ ಶಿವ ಹಾಗೂ ಪಾರ್ವತಿ ಅಂತಾ ಮದು ಮಕ್ಕಳಿಗೆ ನಾಮಕರಣ ಮಾಡಿ, ಮದು ಮಕ್ಕಳನ್ನು ಅಲಂಕಾರ ಮಾಡಿ, ಶಾಸ್ತ್ರ ಬದ್ದವಾಗಿ ಮದುವೆ ಮಾಡಿ ಮಾಡಿದ್ದಾರೆ. ಹೆಣ್ಣಿನ ಕಡೆಯುವರು ಗಂಡನ ಮನೆಗೆ ಏನ್ನಲ್ಲಾ ವಸ್ತುಗಳನ್ನು ನೀಡ್ತಾರೆ ಅಂತಹ ವಸ್ತುಗಳನ್ನು ಗಂಡನ ಮನೆಯವರಿಗೆ ನೀಡಿದ್ದಾರೆ. ಉಡುಗೆ ಸಾಮಗ್ರಿ, ಮೊಬೈಲ್ ಸೇರಿದಂತೆ ಹಲವು ವಸ್ತುಗಳನ್ನು ಗಂಡನ ಕಡೆಯವರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ad

ಮದುವೆಗಾಗಿ ಮದುವೆ ಆಮಂತ್ರಣ ಪ್ರತಿಕೆ ಸಹ ಮಾಡಿದ್ದು, ಅದ್ದೂರಿಯಾದ ಪೆಂಡಾಲ್ ಹಾಕಿ‌, ಬಂದು ಬಳಗದವರು ಕರೆಸಿಕೊಂಡು ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿ, ಮದುವೆಗೆ ಬಂದವರಿಗೆ ಊಟ ಹಾಕಿದ್ದಾರೆ.ಇನ್ನೂ ಕಳೆದ 80 ವರ್ಷಗಳ ಹಿಂದೆ ಯಲ್ಲಮ್ಮಳ್ಳ‌ ಹಿರಿಯರು ಗೊಂಬೆಗಳ ಮದುವೆ ಮಾಡಿದ್ರು. ಹಾಗಾಗಿ ಈವಾಗ ಮತ್ತೊಮ್ಮೆ ಗೊಂಬೆಗಳ ಮದುವೆಯನ್ನು ಮಾಡಬೇಕು ಅಂತಾ ಯಲ್ಲಮ್ಮ ತನ್ನ ಮಕ್ಕಳಿಗೆ ಹೇಳಿದ್ದಾಳೆ. ಹಾಗಾಗಿ ಕುಟುಂಬಸ್ಥರು ಸೇರಿಕೊಂಡು ಮದುವೆ ಮಾಡಿದ್ದಾರೆ.ಈ ರೀತಿ ಗೊಂಬೆಗಳ ಮದುವೆ ಮಾಡಿದ್ರೆ ಮಳೆ ಬೆಳೆ, ಮದುವೆಯಾಗದವರಿಗೆ ಕಲ್ಯಾಣವಾಗುತ್ತೇ, ಸಂಕಷ್ಟಗಳು ನಿವಾರಣೆಯಾಗುತ್ತೇ ಎನ್ನುವ ನಂಬಿಕೆಯಿದೆ. ಹಾಗಾಗಿ ತಮ್ಮ ಕುಟುಂಬಕ್ಕೂ ಹಾಗೂ ಲೋಕಕ್ಕೂ ಒಳ್ಳೆದು ಆಗುತ್ತದೆ ಎನ್ನುವ ವಿಶ್ವಾಸದಿಂದ ಇಂತಹ ಅಪರೂಪದ ಗೊಂಬೆ ಮದುವೆ ಮಾಡಿದ್ದಾರೆ.

Sponsored :

Related Articles