ಶೋಭಾ ಕರಂದ್ಲಾಜೆ ಚುನಾವಣೆಗೆ ನಿಂತಿಲ್ಲ ಯಾಕೆ ಗೊತ್ತಾ ? ಯಡಿಯೂರಪ್ಪ ರಾಜಕೀಯವಾಗಿ ಅಂತ್ಯ ದಿನಗಳಲ್ಲಿದ್ದಾರೆಯೇ ?

1062
9900071610

ಕಾಂಗ್ರೆಸ್ ನಾಯಕರಿಗೆ ಅಧಿಕಾರಕ್ಕೆ ಬರುವ ವಿಶ್ವಾಸದ ಕೊರತೆ ಹಾಗು ಸ್ವತಃ ಗೆಲ್ಲುತ್ತೇವೆ ಎನ್ನುವ ಬಗ್ಗೆ ಅನುಮಾನ ಇರುವ ಕಾರಣ ಎಲ್ಲರೂ ರಾಜ್ಯ ಪ್ರವಾಸ ಬಿಟ್ಟು ಅವರವರ ಕ್ಷೇತ್ರಕ್ಕೆ ಸೀಮಿತವಾಗಿದ್ದಾರೆ ಇದು ಕೈ ನಾಯಕ ಹತಾಶೆಗೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ad

ಪ್ರೆಸ್ ಕ್ಲಬ್ ನಲ್ಲಿ ಮಾತು ಮಂಥನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದು ಸರ್ಕಾರಕ್ಕೆ ಅಭಿವೃದ್ಧಿ ಆಧಾರದಲ್ಲಿ ಗೆಲ್ಲುವ ವಿಶ್ವಾಸವಿಲ್ಲ, ಆ ಶಕ್ತಿ,ತಾಕತ್ತು ಉಳಿಸಿಕೊಂಡಿಲ್ಲ,ಹಾಗಾಗಿ ಬರೀ ಟೀಕೆಯಲ್ಲಿಯೇ ಕಾಲ ಹರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರಿಗೆ ವಿಶ್ವಾಸದ ಕೊರತೆ ಇದೆ, ಗೆಲ್ಲುವ ಅನಮಾನ ಕಾಡುತ್ತಿದೆ ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಡಿ.ಕೆ.ಶಿವಕುಮಾರ್ ಸೇರಿ ನಾಯಕರು ಅವರವರ ಕ್ಷೇತ್ರಕ್ಕೆ ಸೀಮಿತರಾಗಿದ್ದಾರೆ, ರಾಜ್ಯ ಪ್ರವಾಸ ಮಾಡುತ್ತಿಲ್ಲ, ಕೇವಲ ಸಿಎಂ ಸಿದ್ದರಾಮಯ್ಯ ಹಾಗು ರಾಹುಲ್ ಗಾಂಧಿ ಮಾತ್ರ ಪ್ರವಾಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಸಿಎಂ ಸಿದ್ದರಾಮಯ್ಯಗೆ ಚಾಮುಂಡೇಶ್ವರಿಯಲ್ಲಿ ಗೆಲ್ಲುವ ವಿಶ್ವಾಸ ಇಲ್ಲ,ಅಲ್ಲಿನ ಗೆಲುವು ಕಬ್ಬಣದ ಕಡಲೆ ಎಂದು ತಿಳಿದು ಮತ್ತೆ ಬಾದಾಮಿ ಕಡೆ ಮುಖ ಮಾಡಿದರು, ಬಾದಾಮಿಯಿಂದ ಮತ್ಯಾವ ಕ್ಷೇತ್ರ ಎನ್ನುವ ಮಾತು ಕೇಳಿತ್ತು,ಆದರೆ ಏಕೋ ರದ್ದಾಯಿತು, ಕಳೆದ ಐದು ವರ್ಷ ಏಕಚಕ್ರಾಧಿಪತ್ಯ ನಡೆಸಿದ ಸರ್ವಾಧಿಕಾರಿಯಾಗಿ ವರ್ತಿಸಿದ ಹಿರಿಯರ ಕಡೆಗಣಿಸಿ ಮಹಾರಾಜ ಎಂದು ಬಿಂಬಿಸಿಕೊಂಡ ಸಿಎಂ ಸಿದ್ದರಾಮಯ್ಯಗೆ ಎರಡು ಕ್ಷೇತ್ರದಲ್ಲಿ ನಿಲ್ಲುವ ದುಃಸ್ಥಿತಿ ಏಕೆ ಬಂತು ಎಂದು ಪ್ರಶ್ನಿಸಿದರು.

ಜನ ಸಿದ್ದು ಸರ್ಕಾದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ, ಈ ರೀತ ಜಾತಿ ಜಾತಿ ಒಡೆಯುವ ಧರ್ಮಗಳ ನಡುವೆ ಸಂಘರ್ಷ ತಂದು ಉಡಾಫೆಯಿಂದ ನಡೆದುಕೊಂಡ ದುರಹಂಕಾರದ ವರ್ತನೆ ಮಾಡಿದ ಮುಖ್ಯಮಂತ್ರಿಯನ್ನು ಕಂಡಿಲ್ಲ. ಕಾಂಗ್ರೆಸ್ ಗಿಂತ ಹೆಚ್ಚು‌ ಸಿಟ್ಟು ಜನಕ್ಕೆ ಸಿಎಂ ವಿರುದ್ಧ ಇದೆ, ಹಿರಿಯರ ಮೌನ,ಹತಾಶೆ,ಅಸಹಾಯಕತೆಯು ಕಾಂಗ್ರೆಸ್ ಪಕ್ಷವನ್ನು ಇಂದು ಈ ಪರಿಸ್ಥಿತಿಗೆ ತಂದು ನಿಲ್ಲಿಸಿದೆ ಎಂದರು. 138 ಸ್ಥಾನ ಗೆಲ್ಲುವುದಾಗಿ ಸಿಎಂ ಹೇಳಿಕೆ ನೀಡಿದ್ದಾರೆ. ಆದರೆ ಕಾಂಗ್ರೆಸ್ ನ ಬೇರೆ ಯಾವ ನಾಯಕರೂ ಇದನ್ನು ಹೇಳುತ್ತಿಲ್ಲ. ಬೇರೆಯವರು ರಾಜ್ಯದ ಪ್ರವಾಸ ಮಾಡುತ್ತಿಲ್ಲ. ನರೇಂದ್ರ ಮೋದಿ,ಅಮಿತ್ ಶಾ,ಯಡಿಯೂರಪ್ಪ ವಿರುದ್ಧ ಹಗುರ ಮಾತಾಡುತ್ತಿರುವುದು ಸಿಎಂ ಸಿದ್ದರಾಮಯ್ಯ ಅವರ ಹತಾಶೆಯನ್ನು ತೋರಿಸುತ್ತಿದೆ ಎಂದರು. 120 ಕ್ಷೇತ್ರಗಳಲ್ಲಿ ಯಡಿಯೂರಪ್ಪ ಪ್ರವಾಸ ಮಾಡುತ್ತಿದ್ದಾರೆ. ಆದರೆ 224 ಕ್ಷೇತ್ರಕ್ಕೂ ಅವರ ಬರಬೇಕು ಎಂದ ಬೇಡಿಕೆ ಇದೆ. ಒಬ್ಬ ವ್ಯಕ್ತಿ 120 ಕ್ಕೂ ಹೆಚ್ಚು ಕ್ಷೇತ್ರಕ್ಕೆ ಚುನಾವಣೆ ವೇಳೆ ಹೋಗುವುದು ಅಸಾಧ್ಯ ಆದರೂ ಯಡಿಯೂರಪ್ಪ ಪ್ರವಾಸ ಮಾಡಿತ್ತಿದ್ದಾರೆ. ಬಿಎಸ್ವೈ ಹೋಗದ ಕಡೆ ಬೇರೆ ನಾಯಕರನ್ನು ಕಳುಹಿಸಲಾಗುತ್ತಿದೆ. ಅಮಿತ್ ಶಾ ಪ್ರವಾಸ 30 ಕಡೆ,ಮೋದಿ ಪ್ರವಾಸ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಲಾಗಿದೆ ಎಂದರು.

 

ಬಹಳ ಕ್ಷೇತ್ರದಲ್ಲಿ ಮಹಿಳೆಯರ ನಿಲ್ಲಿಸುವ ಪ್ರಶ್ನೆ ಬಂದಾಗ ಗೆಲ್ಲುವುದು ಮುಖ್ಯ ಎನ್ನುವುದು ಗಮನಕ್ಕೆ ಬಂತು. ಯಡಿಯೂರಪ್ಪ ರಾಜಕೀಯ ಅಂತಿಮ ದಿನದಲ್ಲಿದ್ದಾರೆ. ಅವರು ಅಧಿಕಾರಕ್ಕೆ ಬರುವುದು ಮುಖ್ಯ. ಹಾಗಾಗಿ ಅದಕ್ಕೆ ಆಧ್ಯತೆ ನೀಡಿದೆವು. ಅರವಿಂದ ಲಿಂಬಾವಳಿ ಚುನಾವಣಾ ನಿರ್ವಹಣೆ ಜವಾಬ್ದಾರಿ ನಿರಾಕರಿಸಿದರು. ಹಾಗಾಗಿ ಚುನಾವಣೆ ನಿರ್ವಹಣಾ ಜವಾಬ್ದಾರಿ ಹೊತ್ತು ಚುನಾವಣೆಗೆ ನಿಲ್ಲಲಿಲ್ಲ. ನಾನೇ ಇದನ್ನು ಹೈಕಮಾಂಡ್ ಗೂ ಹೇಳಿದೆ ಎಂದು ಸ್ಪರ್ಧೆ ಮಾಡದೇ ಇರುವ ಕುರಿತು ಶೋಭಾ ಕರಂದ್ಲಾಜೆ ಸ್ಪಷ್ಟೀಕರಣ ನೀಡಿದರು. ಸಚಿವೆಯಾಗಿದ್ದಾಗ ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದರು. ಹಾಗಾಗಿ ಈ ಬಾರಿ ಟಿಕೆಟ್ ನೀಡಿಲ್ಲ ಎನ್ನುವುದು ನಿರಾಧಾರ. ನಾ‌ನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅದನ್ನ ಸಾಬೀತುಪಡಿಸಿದರೆ ರಾಜಕೀಯದಲ್ಲಿ ಇರಲ್ಲ ಎಂದು ಸವಾಲು ಹಾಕಿದ್ದೆ. ಈಗಲೂ ನನ್ನ ಹೇಳಿಕೆಗೆ ನಾನು ಬದ್ದವಾಗಿದ್ದೇನೆ. ಸಿಕ್ಕ ಇಲಾಖೆಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎಂದು ಆರೋಪವನ್ನು ತಳ್ಳಿಹಾಕಿದರು. ನರೇಂದ್ರ ಮೋದಿ ಪಿಎಂ ಆದ ನಂತರ ಪಾಕಿಸ್ತಾನ ಹಾಗು ಇತರೆ ಕಡೆ ಕಳ್ಳ ನೋಟು ಹಾಗು ತೆರಿಗೆ ವಂಚಿಸಿ ಸಂಗ್ರಹಿಸಿದ ಹಣ ಇರವ ಮಾಹಿತಿ ಸಿಕ್ಕಿತು. ಇದರ ತಡೆಗೆ ನೋಟ್ ಬ್ಯಾನ್ ಮಾಡಿದರು. ನೋಟ್ ಬ್ಯಾನ್, ಜಿಎಸ್ಟಿ ಒಟ್ಟಿಗೇ ಯಾರೂ ಮಾಡುತ್ತಿರಲಿಲ್ಲ. ಆದರೂ ಮೋದಿ ಮಾಡಿದ್ದಾರೆ. ಎರಡು ವರ್ಷ ತೊಂದರೆ ಕಷ್ಟ ಎಂದು ಮೊದಲೇ ಗೊತ್ತಿತ್ತು. ಆದರೂ ಚುನಾವಣಾ ರಾಜಕೀಯಕ್ಕಿಂತ ದೇಶದ ಹಿತ ಮುಖ್ಯ ಎಂದು ಇದನ್ನು ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡರು.

ನಮ್ಮ ದೃಷ್ಟಿಯಲ್ಲಿ ಕಾಂಗ್ರೆಸ್ ನಮಗೆ‌ ಬಹಳ ಕಡೆ ನೇರ ಸ್ಪರ್ಧೆ ನೀಡಿದರೆ ಕೆಲವೆಡೆ ತ್ರಿಕೋನ ಸ್ಪರ್ಧೆಯೂ ಇದೆ ಆದರೆ ಜೆಡಿಎಸ್ ಸ್ವಂತ ಕಾಲಮೇಲೆ ಅಧಿಕಾರಕ್ಕೆ ಬರಲ್ಲ.  ರೊಟ್ಟಿಜಾರಿ ತುಪ್ಪಕ್ಕೆ ಬೀಳಬೇಕು ಎಂದು ಸಮ್ಮಿಶ್ರ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ. ಅವರ ಬಗ್ಗೆ ನಾವೇನು ಮಾತಾಡಲ್ಲ. ಚುನಾವಣಾ ಪೂರ್ವ ಮತ್ತು ನಂತರ ಹೊಂದಾಣಿಕೆ‌ ಇಲ್ಲ ಎಂದು ಈಗಾಗಲೇ ವರಿಷ್ಠರೂ ಹೇಳಿದ್ದಾರೆ.ಅಲ್ಲದೇ ಈಗಾಗಲೇ ಜೆಡಿಎಸ್ ನಿಂದ ಕಹಿ ಅನುಭವ ಅನಿಭವಿಸಿದ್ದೇವೆ, ನಾವು ಅವರ ಜೊತೆ ಹೋಗುವ ಪ್ರಶ್ನೆಯೇ ಇಲ್ಲ, ಹಿಂದೆಹೆಚ್ಚು ಸ್ಥಾನ ಬಿಜೆಪಿಗೆ ಬಂದರೂ ಡಿಸಿಎಂ ಸ್ಥಾನವನ್ನು ಯಡಿಯೂರಪ್ಪ ಒಪ್ಪಿಕೊಂಡರು, ನಾವು ಬೆಂಬಲ ನೀಡದಿದ್ದರೆ ಕುಮಾರಸ್ವಾಮಿ ಕೂಡ ಸಿಎಂ ಆಗುತ್ತಿರಲಿಲ್ಲ ಎಂದು ಜೆಡಿಎಡ್ ಇಲ್ಲದಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿರಲಿಲ್ಲ ಎನ್ನುವ ಜೆಡಿಎಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು. ರಾಮ್ ಜೇಠ್ಮಲಾನಿ ಹಿರಿಯರು ಅವರ ಬಗ್ಗೆ ಮಾತಾಡಲ್ಲ. ಅವರು ಯಾವ ನೆನಪಿನ ಶಕ್ತಿಯಿಂದ ಮೋದಿ,ಶಾ ವಿರುದ್ದ ಹೇಳಿಕೆ ನೀಡಿದ್ದಾರೋ ಗೊತ್ತಿಲ್ಲ. 22 ರಾಜ್ಯದಲ್ಲಿ ಇಂದು ಬಿಜೆಪಿ ಬರಲು ಶಾ,ಮೋದಿ ಕಾರಣ. ಜೇಠ್ಮಲಾನಿ ಅವರಿಗೆ
95 ವರ್ಷ ಆಗಿದೆ ಹಾಗಾಗಿ ಅವರ ಹೇಳಿಕೆಗೆ ಕಮೆಂಟ್ ಮಾಡಲ್ಲ, ಸತ್ಯ ಮಾತು ಮುಚ್ಚಿಟ್ಟು ಮಾತಾಡುತ್ತಿದ್ದಾರೆ. ದೇಶದಲ್ಲಿ ಓಡಾಡಿ ಜನರ ಅಭಿಪ್ರಾಯ ಸಂಗ್ರಹಿಸಿ ಮಾತಾಡಲಿ ಎಂದು ಟಾಂಗ್ ನೀಡಿದರು. ಸಿಎಂ ದುಬಾರಿ ವಾಚ್ ಉಡುಗೊರೆ ಪಡೆದ ಪ್ರಕರಣಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ.2013 ರಲ್ಲಿ ಚೀನಾ ಪ್ರವಾಸದ ವೇಳೆ ಉಡುಗೊರೆ ಪಡೆದಿರುವ ಫೋಟೋ ಲಭ್ಯವಾಗಿದೆ,ಅದು ವಾಚ್ ಹೌದೋ ಅಲ್ಲೋ ಎಂದು ಸಿಎಂ ಸ್ಪಷ್ಟಪಡಿಸಬೇಕು, ದೊಡ್ಡ ವಂಚಕನೊಬ್ಬನಿಂದ ಉಡುಗೊರೆ ಆತಂಕಕ್ಕೆ ಕಾರಣವಾಗಿದ್ದು, ಅಪರಾಧಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ಆತಂಕ ತಂದಿದೆ ಎಂದರು.

Sponsored :


9900071610