ಮನೆಯಂಗಳದಲ್ಲಿ ಯಕ್ಷಗಾನ ನೃತ್ಯದ ಮೂಲಕ ಒಂದೇ ದಿನದಲ್ಲಿ ಕರುನಾಡಿನ ಮನೆಮಾತಾದ್ಲು ಈ ಯುವತಿ!!

3047

ಉಡುಪಿಯಲ್ಲೊಂದು ವಿಡಿಯೋ ವೈರಲ್ ಆಗಿದೆ. ಕಲಾರಸಿಕರು ಈ ವಿಡಿಯೋ ನೋಡಿ ನಿಬ್ಬೆರಗಾಗಿದ್ದಾರೆ. ಯಕ್ಷಗಾನ ಬಲ್ಲವರಂತೂ ಮತ್ತೆ ಮತ್ತೆ ಈ ವಿಡಿಯೋ ನೋಡುತ್ತಿದ್ದಾರೆ. ಸದ್ಯ ಟ್ರೋಲ್ ಆಗ್ತಿರೋ ತರುಣಿ ಚೈತ್ರ ಶೆಟ್ಟಿ ಅಪರೂಪದ ಹೆಜ್ಜೆಹಾಕಿದ್ದಾಳೆ.ಈಗಿನ ಯುವಜನತೆ ಯಕ್ಷಗಾನ ಆಧುನಿಕತೆ ತಕ್ಕಂತೆ ಹೇಗೆ ಬಳಸಿಕೊಳ್ಳುತ್ತಿದ್ದಾರೆ ಅನ್ನೊದಕ್ಕೆ ಇದೆ ಸಾಕ್ಷಿ.

ad

ಚಂಡೆ ಮದ್ದಳೆಯ ಬೀಟ್ ಗೆ ಸ್ವಲ್ಪವೂ ವಂಚಿಸದೆ ಲಯಬದ್ದ ಹೆಜ್ಜೆ ಹಾಕಿರುವ ಈ ವಿಡಿಯೋ ಸಖತ್ ವೈರಲ್ ಆಗಿದೆ. ಈ ಭಾಗದಲ್ಲಿ ಹತ್ತರಲ್ಲಿ ಒಬ್ಬನ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ರಾರಾಜಿಸ್ತಿದೆ. ಫೇಸ್ ಬುಕ್ ನಲ್ಲಂತೂ ಸಾವಿರಾರು ಲೈಕ್ ಗಳ ಸುರಿಮಳೆಯಾಗಿದೆ.

ಹೌದು, ಒಮ್ಮೆ ನೋಡಿದ್ರೆ ಮತ್ತೊಮ್ಮೆ ನೋಡಲೇಬೇಕು ಅನಿಸುವ ಈ ವಿಡಿಯೋ ತುಣುಕಿನಲ್ಲಿ ಕುಣಿದ ಭುವನ ಮೋಹಿನಿ ಕಲಾವಿದೆ ಚೈತ್ರ ಶೆಟ್ಟಿ. ಆದ್ರೆ ಕೆಲವೇ ಗಂಟೆಗಳಲ್ಲಿ ಈ ವಿಡಿಯೋ ಮಾಡಿದ ಮ್ಯಾಜಿಕ್ ಇದ್ಯಲ್ಲ, ಅದು ಚೇತ್ರ ವಿ ಶೆಟ್ಟಿ  ಯವರನ್ನು  ಮನೆ ಮನೆಗೂ ಪರಿಚಯಿಸಿದೆ. ಮನೆಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರ ಮುಂದೆ ಈಕೆ ಈ ಹೆಜ್ಜೆಹಾಕಿದ್ದಾಳೆ. ಮನೆಯವರೂ ಚಪ್ಪಾಳೆಯ ಸುರಿಮಳೆಗೈದಿದ್ದಾರೆ. ಕೊನೆಯಲ್ಲಿ ಆ ಮನೆಯ ತರುಣಿಯೊಬ್ಬಳು ಈಕೆಗೆ ಸಾಥ್ ನೀಡಿದ್ದಾಳೆ.ಯಕ್ಷಗಾನದಲ್ಲಿ ಯಾರೇ ನೀನು ಭುವನ ಮೋಹಿನಿ ಅತ್ಯಂತ ಜನಪ್ರಿಯ ಹಾಡು.

‘ಪಾಂಚಜನ್ಯ’ ಯಕ್ಷಗಾನ ಪ್ರಸಂಗದಲ್ಲಿ ಬರುವ ಈ ಹಾಡು ಬಡಗುತಿಟ್ಟಿನ ‘ಸ್ಟಾರ್ ಭಾಗವತ’ ಜನ್ಸಾಲೆ ರಾಘವೇಂದ್ರ ಆಚಾರ್ ಅವರ ಧ್ವನಿಯ ಮೂಲಕ ಪ್ರಸಿದ್ದಿಗೆ ಬಂತು. ಈ ಪ್ರಸಂಗದಲ್ಲಿ ಬರುವ ಕೃಷ್ಣ ಮತ್ತು ಅಸಿಕೆಯ ನಡುವಿನ ಪ್ರೇಮ ಸಲ್ಲಾಪದ ಹಾಡು ಅಭಿಮಾನಿಗಳ ಮೆಚ್ಚಿನ ದೃಶ್ಯವಾಗಿದೆ. ಒರಿಜಿನಲ್ ಕಲಾವಿದರಿಗೆ ಸರಿಸಾಟಿಯಾಗುವಂತೆ ಈ ವೈರಲ್ ಹುಡುಗಿ ಹಾಕಿರುವ ಹೆಜ್ಜೆ ಕಂಡು ಅಭಿಮಾನಿಗಳು ಪ್ರಶಂಸೆಯ ಸುರಿಮಳೆಗೈಯುತ್ತಿದ್ದಾರೆ.

 

ಮದುವೆ ಮನೆಯಲ್ಲಿ ಮದುಮಗಳೊಬ್ಬಳು ಹೆಜ್ಜೆ ಹಾಕಿದ್ದು ಇತ್ತೀಚೆಗೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವೇಷತೊಟ್ಟ ಕಲಾವಿದರ ನಡುವೆ ಜರಿಸೀರೆಯಲ್ಲಿ ಲಯಬದ್ದ ಹೆಜ್ಜೆ ಹಾಕಿದ್ದ ಈ ವಿಡಿಯೋ ಕೂಡಾ ವೈರಲ್ ಆಗಿತ್ತು. ಸದ್ಯ ಯುವಜನತೆ ಯಕ್ಷಗಾನ ವನ್ನು ಮೊಡರ್ನ್ ಟ್ರೆಂಡ್ ಗೆ ತಕ್ಕಂತೆ ಬಳಕೆ ಮಾಡುತ್ತಿದ್ದಾರೆ.ಈ‌ ಮೂಲಕ ಯಕ್ಷಗಾನ ಜನಪ್ರಿಯತೆಯ ಹೊಸ ಆಯಾಮ ಕಂಡುಕೊಳ್ಳುತ್ತಿದೆ.

ಒಂದೇ ದಿನದಲ್ಲಿ ಕರುನಾಡಿನ ಮನೆಮಾತಾದ್ಲು ಈ ಯುವತಿ!!

ಒಂದೇ ದಿನದಲ್ಲಿ ಕರುನಾಡಿನ ಮನೆಮಾತಾದ್ಲು ಈ ಯುವತಿ!!

BtvNews ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಮೇ 19, 2019

Sponsored :

Related Articles