ಕೊನೆಗೂ ಬದುಕಲಿಲ್ಲ ಯಾಸೀನ್; ಪಾಪಿಯ ದ್ವೇಷಾಗ್ನಿಗೆ ಇಡೀ ಕುಟುಂಬವೇ ಬಲಿ !

1642

ಕಲಬುರಗಿ: ಪತ್ನಿಯ ಮೇಲಿನ ದ್ವೇಷಕ್ಕೆ ಪತ್ನಿಯ ಅಣ್ಣನ ಮನೆಗೆ ಬೆಂಕಿ ಹಚ್ಚಿ ಮೂವರ ಹತ್ಯೆ ಪ್ರಕರಣ ಸಂಬಂಧಿಸಿದಂತೆ ಸುಟ್ಟು ಗಾಯದಿಂದ ಬಳಲುತ್ತಿದ್ದ 19 ವರ್ಷದ ಸಯ್ಯದ್ ಯಾಸೀನ್ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಸೊಲ್ಲಾಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಪಾಪಿಯ ದ್ವೇಷಾಗ್ನಿಗೆ ಇಡೀ ಕುಟುಂಬವೇ ಬಲಿಯಾದಂತಾಗಿದೆ. ಆರೋಪಿ ಮಹ್ಮದ್ ಮುಸ್ತಫಾ ತನ್ನ ಪತ್ನಿ ಹೀನಾ ಮೇಲಿನ ದ್ವೇಷಕ್ಕೆ ಪತ್ನಿಯ ಅಣ್ಣ ಅಕ್ಬರ್ ಮನೆಗೆ ಜುಲೈ 4 ರಂದು ಬೆಂಕಿ ಹಚ್ಚಿದ್ದ, ಘಟನೆಯಲ್ಲಿ ಮನೆಯಲ್ಲಿದ್ದ ಅಕ್ಬರ್, ಅಕ್ಬರ್ ಪತ್ನಿ ಹಾಗೂ ಇಬ್ಬರು ಮಕ್ಕಳು‌ ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಅಕ್ಬರ್, ಪತ್ನಿ ಶಹನಾಜ್ ಬೇಗಂ, ಪುತ್ರಿ ಸಾನಿಯಾ‌ ಮೃತಪಟ್ಟಿದ್ದರು. ಸಾವು ಬದುಕಿನ‌ ಮಧ್ಯೆ ಹೋರಾಟ ನಡೆಸುತ್ತಿದ್ದ ಮೃತ ಅಕ್ಬರ್ ಪುತ್ರ ಯಾಸೀನ್​​ ಮಹಾರಾಷ್ಟ್ರದ ಸಾಂಗ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಪರಾರಿಯಾಗಿದ್ದ ಆರೋಪಿ‌ ಮುಸ್ತಫಾನನ್ನು‌ ರಾಜಸ್ಥಾನದ ಅಜ್ಮೇರ್​​​​​ನಲ್ಲಿ ಕಲಬುರಗಿ ಪೊಲೀಸರು ಬಂಧಿಸಿದ್ದರು.

ad

ಆರೋಪಿ ಮೇಲೆ ಫೈರಿಂಗ್ ಮಾಡಿದ್ದ ಪೊಲೀಸರು

ಆರೋಪಿ ಮುಸ್ತಫಾ ನನ್ನು ಅಜ್ಮೇರ್ ನಲ್ಲಿ ಬಂಧಿಸಿ ಕಲಬುರಗಿಗೆ ಕರೆತಂದಿದ್ದ ಪೊಲೀಸರು, ಆರೋಪಿ ಕೃತ್ಯಕ್ಕೆ ಬಳಸಿದ್ದ ವಸ್ತುಗಳ ಜಪ್ತಿಗೆ ಕರೆದೊಯ್ಯಲಾಗಿತ್ತು. ಈ ಸಂದರ್ಭದಲ್ಲಿ ಕಲಬುರಗಿ ಹೊರವಲಯದ ಸೇಡಂ ರಸ್ತೆಯ ರಾಯಲ್ ಡಾಬಾ ಬಳಿ ಆರೋಪಿ ಮಹ್ಮದ್ ಮುಸ್ತಫಾ ಪೋಲಿಸರ ಮೇಲೆಯೇ ಹಲ್ಲೆ ಮಾಡಿ ಪರಾರಿಗೆ ಯತ್ನಿಸಿದ್ದ. ಈ ವೇಳೆ ಆತ್ಮರಕ್ಷಣೆಗಾಗಿ ಬ್ರಹ್ಮಪುರ ಠಾಣೆ ಇನ್ಸ್​​​​​ಪೆಕ್ಟರ್ ಯಾಳಗಿ ಆರೋಪಿ ಮುಸ್ತಫಾ ಕಾಲಿಗೆ ಎರಡು ಸುತ್ತು ಗುಂಡು ಹಾರಿಸಿದ್ದರು. ಘಟನೆಯಲ್ಲಿ ಓರ್ವ ಎಎಸ್‌ಐ ಹಾಗೂ ಇಬ್ಬರು ಹೆಡ್‌ ಕಾನ್ಸ್​​​ಟೇಬಲ್‌ಗಳಿಗೂ ಗಾಯವಾಗಿತ್ತು.

 

  

ಪ್ರಕರಣದ ಹಿನ್ನೆಲೆ

ಆರೋಪಿ ಮುಸ್ತಫಾ ತನ್ನ ಪತ್ನಿ ಹೀನಾಗೆ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ತನ್ನ ತಂಗಿ ಹೀನಾಗೆ ಕಿರುಕುಳ ನೀಡಬೇಡವೆಂದು ಮೃತ ಸೈಯದ್​ ಅಕ್ಬರ್​, ಅಳಿಯ ಮುಸ್ತಫಾಗೆ ಬುದ್ಧಿವಾದ ಹೇಳಿದ್ದರು. ಇದರಿಂದ ಕೋಪಗೊಂಡಿದ್ದ ಮುಸ್ತಫಾ, ಜುಲೈ 4ರಂದು 2.30ರ ಸುಮಾರಿಗೆ ಮನೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದ್ದ. ನಂತರ ಸಂಬಂಧಿಯೊಬ್ಬರಿಗೆ ಕರೆ ಮಾಡಿ ಉರ್ದುವಿನಲ್ಲಿ ‘ಜಲಾಕೇ ರಾಖ್ ಕರ್ ದಿಯಾ ಬೋಲೋ’ ಎಂದು ಹೇಳಿದ್ದ. ಈ ಕುರಿತು ಕಲಬುರಗಿಯ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

 

Sponsored :

Related Articles