ತೋಳ್ಬಲ ಬಳಸಿ ಗೆಲುವು ಸಾಧಿಸಬಹುದು ಎನ್ನುವ ಭ್ರಮೆ – ಬಿ.ಎಸ್.ಯಡಿಯೂರಪ್ಪ…!

460

ಈ ಬಾರಿ ದೇವೇಗೌಡರ ಕುಟುಂಬ ರಾಜಕಾರಣ ವನ್ನು ನಾವು ಅಂತ್ಯಗೊಳಿಸುತ್ತೇವೆ. ಹಾಸನದಲ್ಲಿ ಎ.ಮಂಜು, ಮಂಡ್ಯದಲ್ಲಿ ಸುಮಲತಾ ಹಾಗೂ ತುಮಕೂರಿನಲ್ಲಿ ಜಿ.ಎಸ್.ಬಸವರಾಜು ಗೆಲುವು ನಿಶ್ಚಿತ. ಯಾವುದೇ ಕಾರಣಕ್ಕೂ ದೇವೇಗೌಡ, ಮೊಮ್ಮಕ್ಕಳು ಗೆಲ್ಲಲು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗುಡುಗಿದರು.

ad

ನಗರದ ಬಿಎಂ ರಸ್ತೆಯಲ್ಲಿ ಸೋಮವಾರ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎ.ಮಂಜು ಪರ ಭಾಷಣ ಮಾಡಿ, ಹಾಸನದಲ್ಲಿ ಜೆಡಿಎಸ್ ಮುಖಂಡರು, ಹಣ, ಅಧಿಕಾರ, ತೋಳ್ಬಲ ಬಳಸಿ ಗೆಲುವು ಸಾಧಿಸಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಇಲ್ಲಿನ ಜನರು ಜೆಡಿಎಸ್​ನವರಿಂದ ಯಾವ ರೀತಿಯ ಸಂಕಷ್ಟ ಅನುಭವಿಸಿದ್ದೀರಿ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಯಾವ ಕಚೇರಿಯಲ್ಲಿಯೂ ಬಿಜೆಪಿ ಕಾರ್ಯಕರ್ತರ ಕೆಲಸ ಆಗುವುದಿಲ್ಲ. ಇಲ್ಲಿನ ಸಭೆಗೆ ಬರಬೇಕಾದರೂ ಜನರು ಅವರ ಅನುಮತಿ ಪಡೆದುಕೊಂಡು ಬರಬೇಕು. ಇಲ್ಲವಾದರೆ ಸುಳ್ಳು ಕೇಸು ಹಾಕಿಸಿ ಕಿರಕುಳ ನೀಡುವುದನ್ನು ನಾವು ನೋಡಿದ್ದೇವೆ. ಇದರಿಂದ ಮುಕ್ತಿಗಾಗಿ ಈ ಬಾರಿ ಎ.ಮಂಜು ಅವರಿಗೆ ಮತ ಹಾಕಬೇಕು ಎಂದರು.

 

 

ನಟ ಅಂಬರೀಷ್ ಮೃತಪಟ್ಟಾಗ ಪಾರ್ಥಿವ ಶರೀರವನ್ನು ಹೆಲಿಕಾಪ್ಟರ್​ನಲ್ಲಿ ಮಂಡ್ಯಕ್ಕೆ ತಂದು ಮೆರವಣಿಗೆ ನಡೆಸಿ ಹೊಗಳಿದ್ದ ಸಿಎಂ ಕುಮಾರಸ್ವಾಮಿ ಈಗ ಮಂಡ್ಯಕ್ಕೆ ಅಂಬರೀಷ್ ಕೊಡುಗೆ ಏನು ಎಂದು ಪ್ರಶ್ನಿಸುವಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ. ತಮಗೆ ಯಾವ ರೀತಿಯ ಕಿರುಕುಳವಾಗುತ್ತಿದೆ ಎಂದು ಸ್ವತಃ ಸುಮಲತಾ ಹೇಳಿಕೊಂಡಿದ್ದಾರೆ. ಅವರ ಬೆಂಬಲಿಸಿದ ಚಿತ್ರನಟರ ಮನೆ ಮೇಲೆ ಕಲ್ಲು ಹೊಡೆಸುತ್ತಾರೆ ಎಂದು ಕಿಡಿಕಾರಿದರು.

Sponsored :

Related Articles