ಪ್ಲೀಸ್ ಬಿಟ್ ಬಿಡಮ್ಮಾ ಪ್ಲೀಸ್ !! ಕಾಲಿಗೆ ಬಿದ್ದು ಬೇಡಿದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ !! ವೈರಲ್ ವಿಡಿಯೋ !!

14329
Yograj Bhat's Viral Video With Btv film Reporter.
Yograj Bhat's Viral Video With Btv film Reporter.

ಯೋಗರಾಜ್ ಭಟ್ ಯಾರಿಗೆ ಗೊತ್ತಿಲ್ಲ ಹೇಳಿ. ಸಿನಿ ದುನಿಯಾದಲ್ಲಿ ಯಾರಿಗೂ ಬಗ್ಗದೇ ತನ್ನದೇ ರಹದಾರಿಯಲ್ಲಿ ನಡೆದವರು ಯೋಗರಾಜ್ ಭಟ್.

ಯೋಗರಾಜ್ ಭಟ್ ಈಗ ಸಿನೇಮಾ ಇಂಡಸ್ಟ್ರಿಯಲ್ಲಿ ಮಾತ್ರ ಖ್ಯಾತಿವೆತ್ತವರಲ್ಲ. ಅವರನ್ನು ಹುಡುಕಿಕೊಂಡು ಎಲೆಕ್ಷನ್ ಕಮಿಷನ್ ಕೂಡಾ ಬಂದಿದೆ. ಮತಗಟ್ಟೆಗೆ ಜನ ಬರುವಂತೆ ಮಾಡಲು ಒಂದು ಚಲನಚಿತ್ರ ಮಾಧರಿಯ ಡಾಕ್ಯುಮೆಂಟರಿ ಮಾಡುವಂತೆ ಚುನಾವಣಾ ಆಯೋಗ ಕೋರಿದೆ. ಈ ಸಂಬಂಧ ಈಗಾಗಲೇ ಡಾಕ್ಯುಮೆಂಟರಿ ಕೆಲಸವನ್ನು ಯೋಗರಾಜ್ ಭಟ್ಟರು ಕೈಗೆತ್ತಿಕೊಂಡಿದ್ದಾರೆ. ಈ ಸಂಬಂಧ ಯೋಗರಾಜ್ ಭಟ್ಟರನ್ನು ಬಿಟಿವಿ ಪತ್ರಕರ್ತೆ ಪ್ರಿಯದರ್ಶಿನಿ ಮರೀಚಿ ಮಾತಿಗೆಳೆದರು.ಇತ್ತಿಚೆಗಷ್ಟೇ ಪತ್ರಿಕೋಧ್ಯಮಕ್ಕೆ ಬಂದ ಪತ್ರಕರ್ತರನ್ನು ಕಂಡರೆ ಯೋಗರಾಜ್ ಭಟ್ಟರಿಗೆ ಪ್ರೀತಿ. ಚುನಾವಣಾ ಆಯೋಗದ ಡಾಕ್ಯುಮೆಂಟರಿ ಸಿದ್ದತೆಗಳ ಬಗ್ಗೆ ಕಿರಿಯ ಪತ್ರಕರ್ತೆ ಪ್ರಿಯದರ್ಶಿನಿ ಕೇಳಿದ ಸಾಲು ಸಾಲು ಪ್ರಶ್ನೆಗಳಿಗೆ ಯೋಗರಾಜ್ ಭಟ್ ಉತ್ತರಿಸಿದ್ದಾರೆ.

ad

 

ಆದರೂ ನಮ್ಮ ಪತ್ರಕರ್ತೆ ಪ್ರಿಯದರ್ಶಿನಿಯವರ ಬತ್ತಳಿಕೆಯ ಖಾಲಿಯಾಗಿಲ್ಲ. ಮತ್ತೂ ಪ್ರಶ್ನೆಗಳು ಮುಗಿಯದೇ ಇದ್ದಾಗ ಯೋಗರಾಜ್ ಭಟ್ ವರದಿಗಾರ್ತಿ ಮರೀಚಿಯ ಕಾಲಿಗೆ ಉದ್ದಂಡ ನಮಸ್ಕಾರ ಮಾಡಿದರು. ಕಾಲಿಗೆ ಬಿದ್ದು ಎದ್ದ ಭಟ್ಟರು, “ಪ್ಲೀಸ್ ಬಿಟ್ ಬಿಡಮ್ಮಾ ಪ್ಲೀಸ್” ಎಂದು ಅಂಗಾಲಾಚುವ ನಟನೆ ಮಾಡಿದರು. ದೊಡ್ಡ ದೊಡ್ಡ ನಟರು ನಿರ್ಧೇಶಕರು ಕಿರಿಯ ಪತ್ರಕರ್ತರ ಜೊತೆ ಮಾತನಾಡುವುದಕ್ಕೇ ಹಿಂಜರಿಯುತ್ತಾರೆ. ಅಂತದ್ದರಲ್ಲಿ ಕಿರಿಯ ಪತ್ರಕರ್ತೆಗೆ ಹಿರಿಯ ನಟ ನಿರ್ದೇಶಕರ ಜೊತೆ ಇರುವ ವೃತ್ತಿ ಬಾಂಧವ್ಯ ಮತ್ತು ಯೋಗರಾಜ್ ಭಟ್ ಕಿರಿಯರ ಜೊತೆ ಆತ್ಮೀಯವಾಗಿ ಬೆರೆಯುವ ಅವರ ತಾಯಿಹೃದಯ ಈ ವಿಡಿಯೋದಲ್ಲಿ ಅನಾವರಣವಾಗಿದೆ‌.

ಈ ವಿಡಿಯೋ ನೋಡಿ :

Sponsored :

Related Articles