ಸಾವಿರ ರೂಪಾಯಿ ಕೊಟ್ರೆ ಇಲ್ಲಿ ಹೆಂಡ್ತಿ ಸಿಕ್ತಾಳೆ !! ಬೆಂಗಳೂರಿನಲ್ಲಿ ಬಾಬ ಬೈರಪ್ಪ !!

1950

 


ಹೆಂಡತಿ ನಾಪತ್ತೆಯಾದರೆ ಪೊಲೀಸ್ ಠಾಣೆಗೆ ಹೋಗಬೇಕಿಲ್ಲ. ನೇರ ಈ ಬಾಬಾನ ಬಳಿ ಬಂದರೆ ಹೆಂಡತಿಯನ್ನು ಹುಡುಕಿಕೊಡ್ತಾರೆ. ಹಾಗಂತ ನಿಮಗೆ ಮದುವೆಯಾಗದಿದ್ದರೂ ನಾಪತ್ತೆಯಾದ ನಿಮ್ಮ ಹೆಂಡತಿಯನ್ನು ಪತ್ತೆಹಚ್ಚಿಕೊಡುತ್ತಾರೆ ಈ ಬಾಬಾ. ಜಸ್ಟ್ ಥೌಸಂಡ್ ರೂಪೀಸ್ ಈ ಬಾಬಾನ ಮುಂದಿಡಬೇಕು ಅಷ್ಟೆ.ಹೌದು. ಬೆಂಗಳೂರಿನಲ್ಲಿ ಮತ್ತೊಬ್ಬ ಡೋಂಗಿ ಬಾಬಾ ಪ್ರತ್ಯಕ್ಷನಾಗಿದ್ದಾನೆ. ಸರ್ವ ಸಮಸ್ಯೆಗಳಿಗೆ ಸಕಲ ಪರಿಹಾರ ಕೊಡಲಾಗುವುದು ಎಂದು ಈ ಬಾಬಾ ನಂಬಿಸಿದ್ದಾನೆ.

ad

 

ಹೆಣ್ಣು ಮಕ್ಕಳಿಗೆ ಮದುವೆ ಸೌಭಾಗ್ಯ ಕರುಣಿಸುತ್ತಾನೆ. ಗಂಡಿಗೆ ಮದುವೆಯೇ ಆಗದಿದ್ರು ದಿವ್ಯ ದೃಷ್ಟಿಯಿಂದ ಹೆಂಡತಿಯನ್ನ ಹುಡುಕಿ ಕೊಡ್ತಾನೆ. 24 ಘಂಟೆ ದೇವರನ್ನೇ ಮೈಮೇಲೆ ಆವಾಹನೆ ಬರಿಸಿಕೊಂಡು ತನ್ನ ಬಳಿ ಬರೋ ಭಕ್ತರಿಗೆ ದೇವರ ಹೆಸರಿನಲ್ಲಿ ಉಂಡೆ ನಾಮ ಹಾಕ್ತಾನೆ.ಬೆಂಗಳೂರಿನ ಬನಶಂಕರಿಯ ಶ್ರೀನಗರದಲ್ಲಿ ದೈವಾನು ಸಂಭೂತ. ಮೂಲತಃ ಬೈರಪ್ಪ ಹೆಸರಿನ ಈತ ಭದ್ರ ಅನ್ನೋ ಬಾಬಾನ ಹೆಸರಿನಲ್ಲಿ ಲೀಲೆ ತೋರಿಸುತ್ತಿದ್ದಾನೆ.ಮದುವೆಯೇ ಆಗದಿದ್ರು ನಿನ್ನ ಹೆಂಡತಿ ಕಾಣೆಯಾಗಿದ್ದಾಳೆ, ಹುಡುಕಿಕೊಡ್ತೀನಿ 1000 ರೂ ಇಡು. ತಕ್ಷಣ ನಿನ್ನ ಹೆಂಡತಿ ಸಿಕ್ತಾಳೇ ಅಂತಾನೆ. ಮದುವೆನೆ ಆಗಿಲ್ವಲ್ಲಾ ಬಾಬಾ ಅಂದ್ರೆ ದೆವ್ವ ಬಂದೋನ ಹಾಗೇ ಒದ್ದಾಡ್ತಾನೆ. ಹೀಗೆ ದಿನನಿತ್ಯ ಹತ್ತಾರು ಮಂದಿಗೆ ದೇವರ ಹೆಸರಲ್ಲಿ ಅಮಾಯಕರನ್ನು ಸಾವಿರಾರು ರೂಪಾಯಿಗೆ ಸುಲಿಗೆ ಮಾಡ್ತಾನೆ. ಶ್ರೀನಗರ ಮುನೇಶ್ವರ ಬ್ಲಾಕ್ ನಲ್ಲಿರುವ ಈ ನಕಲಿ ಬಾಬಾ ವಿರುದ್ದ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

Sponsored :

Related Articles