ನಡುರಸ್ತೆಯಲ್ಲಿ ಆಕೆ ಮತ್ತು ಆತ ಮಾಡಿದ್ದೇನು ಗೊತ್ತಾ ? ಬಾರೆ ಬಾರೆ ರಸ್ತೆ ಮಂಟಪಕ್ಕೆ ಬಾ !! ವಿಡಿಯೋ ವೈರಲ್ !

6081
Young Men tied up Mangalya to woman at road.

ನೀರಿನಲ್ಲಿ, ಆಕಾಶದಲ್ಲಿ,ಸಮುದ್ರದ ಆಳದಲ್ಲಿ ಮದುವೆಯಾದ ಜೋಡಿ ನೋಡಿರ್ತಿರಾ ಆದರೆ ಇದೊಂದು ಅಪರೂಪದ ಮದುವೆ.

 

ad

ಹೌದು ಇಲ್ಲಿ ವಾದ್ಯ ಗೋಷ್ಠಿ,ಮಂತ್ರಘೋಷ,ಹಾರ ತುರಾಯಿ,ಅರಿಸಿನ ಕುಂಕುಮ ವಿಲ್ಲದೇ ಕಲ್ಯಾಣವೊಂದು ನಡೆದು ಹೋಗಿದೆ.
ಹೌದು ನಡುರಸ್ತೆಯಲ್ಲೇ ಯುವಕನೊರ್ವ ಕಾಲೇಜಿನಿಂದ ಮರಳುತ್ತಿದ್ದ ಯುವತಿ ರಸ್ತೆ ಮಧ್ಯದಲ್ಲೇ ತಾಳಿ ಕಟ್ಟಿದ್ದಾನೆ. ಕಾಲೇಜಿನಿಂದ ಬರುತ್ತಿದ್ದ ಯುವತಿಯನ್ನು ಅರ್ಧ ರಸ್ತೆಯಲ್ಲೇ ಅಡ್ಡಗಟ್ಟಿದ ಯುವಕ ಅರಿಸಿನ ಕೊಂಬು ಹಾಗೂ ಅರಿಸಿನ ದಾರ ಕಟ್ಟಿದ್ದಾನೆ.

ಹೀಗೆ ನಡುರಸ್ತೆಯಲ್ಲಿ ನಡೆದ ಕಲ್ಯಾಣ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಜನರು ವಿಡಿಯೋ ನೋಡಿ ಅಚ್ಚರಿಗೊಳ್ಳುತ್ತಿದ್ದಾರೆ. ಇನ್ನು ತಾಳಿ ಕಟ್ಟಿದ ಯುವಕ ಹಾಗೂ ಯುವತಿ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದು ಈ ಘಟನೆ ತಮಿಳುನಾಡಿನಲ್ಲಿ ನಡೆದಿರಬಹುದು ಎಂದು ಶಂಕಿಸಲಾಗಿದೆ.
ಈ ಯುವಕ-ಯುವತಿಯರು ಪರಸ್ಪರ ಪ್ರೀತಿಸುತ್ತಿದ್ದು, ಮನೆಯವರ ವಿರೋಧಕ್ಕೆ ಹೀಗೆ ಮದುವೆಯಾಗಿರಬಹುದು. ಅಥವಾ ಹುಡುಗಾಟಕ್ಕೆ ಹೀಗೆ ನಟಿಸಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ.

Sponsored :

Related Articles