ಬಾಟಲ್ ಕ್ಯಾಪ್ ಓಫನ್​​ ಚಾಲೆಂಜ್ ಯುವರಾಜ್​ ಭರ್ಜರಿ ಆನ್ಸರ್​! ಸಿಂಗ್​ ಯಾರ ಯಾರಿಗೆ ಚಾಲೆಂಜ್​ ಹಾಕಿದ್ರು ಗೊತ್ತಾ ?

393

ಇಂಟರ್​ನೆಟ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿರೋ ಬಾಟಲ್ ಕ್ಯಾಪ್ ಚಾಲೆಂಜ್​ಗೆ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಜನರು ಕೂಡ ಫುಲ್ ಫಿದಾ ಆಗಿದ್ದು ಗೊತ್ತೆ ಇದೆ ,ಇದೀಗ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಾಟಲ್ ಕ್ಯಾಪ್ ಚಾಲೆಂಜ್​ಗೆ ಕ್ಲೀನ್ ಬೌಲ್ಡ್ ಆಗಿದ್ದಾರೆ.


ಹೌದು ಯುವಿ ಕೂಡ ಬಾಟಲಿಯ ಕ್ಯಾಪ್ ಉದುರಿಸಿದ್ದಾರೆ. ಆದ್ರೆ ಕಾಲಿನಿಂದ ಬಾಟಲಿಯ ಮುಚ್ಚಳ ಉದುರಿಸಿಲ್ಲ. ನಾವೇ ಬೇರೆ ನಮ್ಮ ಸ್ಟೈಲೇ ಬೇರೆ ಎಂಬಂತೆ ಕ್ರಿಕೆಟ್​ ಬ್ಯಾಟ್ ಹಿಡಿದು ಚೆಂಡಿಗೆ ಸ್ಟ್ರೇಟ್​ ಡ್ರೈವ್ ಶಾಟ್ ಹೊಡಿದಿದ್ದಾರೆ. ಆ ಚೆಂಡು ನೇರವಾಗಿ ಬಾಟಲಿಗೆ ತಗುಲಿ ಕ್ಯಾಪ್​ ಸಮೇತ ಬಾಟಲಿ ಕೆಳಗೆ ಬಿದ್ದಿದೆ. ಬಾಟಲ್ ಕ್ಯಾಪ್ ಚಾಲೆಂಜ್ ನೀವು ಕೂಡ ಮಾಡಿ ಅಂತಾ ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಶಿಖರ್ ಧವನ್ ಹಾಗೂ ಕ್ರಿಸ್​ ಗೇಲ್​ಗೆ ಯುವರಾಜ್ ಸಿಂಗ್ ಟ್ಯಾಗ್ ಮಾಡಿದ್ದಾರೆ.

ad

ಇನ್ನು ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗಷ್ಟೇ ವೈರಲ್‌ ಆಗಿರುವ Bottle Cap Challenge ಸ್ವೀಕರಿಸುವಲ್ಲಿ ಸ್ಟಾರ್‌ಗಳು ಕೂಡ ಮುಂದಾಗುತ್ತಿದ್ದು, ಈ ಸಾಲಿಗೆ ಇದೀಗ ಸ್ಯಾಂಡಲ್‌ವುಡ್‌ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಗೋಲ್ಡ್ ನ್ ಸ್ಟಾರ್ ಗಣೇಶ್,ಅರ್ಜುನ್ ಸರ್ಜಾ,ಚಿರಚಿಂವಿ ಸರ್ಜಾ ಸ್ಯಾಂಡಲ್​ವುಡ್​ನ ಡಿಂಪಲ್​ ಕ್ವೀನ್ ರಚಿತಾ ರಾಮ್ ಹಾಗೂ ಬಾಲಿವುಡ್​ ನಟಿ ಸುಶ್ಮಿತಾ ಸೇನ್, ಪರಿಣಿತಿ ಚೋಪ್ರಾ​​​ ಕೂಡ ಸ್ವೀಕರಿಸಿ ಕೂಡ ಭಾಗಿಯಾಗಿ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.ಇನ್ನು ಸಾಮಾನ್ಯ ಜನರು ಕೂಡ  Bottle Cap Challenge ಸ್ವೀಕರಿಸುವಲ್ಲಿ ಸ್ಟಾರ್‌ಗಳಂತೆ ಮುಂದಾಗಿದ್ದಾರೆ.

 

Sponsored :

Related Articles