ಕ್ರಿಕೆಟ್​​​ನಲ್ಲಿ ಯುವಿ ಯುಗಾಂತ್ಯ! ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ವಿದಾಯ ಘೋಷಿಸಿದ ಯುವರಾಜ್ ಸಿಂಗ್​!!

585
9900071610

ಮಾರಕರೋಗದಿಂದ ಚೇತರಿಸಿಕೊಂಡು ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಭಾರತೀಯ ಹೆಮ್ಮೆಯ ಕ್ರಿಕೆಟಿಗ್​ ಯುವರಾಜ್​ ಸಿಂಗ್​​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದಾರೆ. ಮುಂಬೈನ ಖಾಸಗಿ ಹೊಟೇಲ್​ವೊಂದರಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಯುವಿ ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

ad

ಭಾರತದ ಕ್ರಿಕೆಟ್ ಆಟದಲ್ಲಿ ಆಲ್ ರೌಂಡರ್ ಆಗಿದ್ದ ಟಿ20 ಸ್ಪೆಷಲಿಸ್ಟ್ ಯುವರಾಜ್ ಸಿಂಗ್ ಈ ಬಾರಿ ಐಪಿಎಲ್ ಪಂದ್ಯ ಆಡುವುದೆ ಸಂದೇಹವಿತ್ತು. ಆದರೆ, ಕೊನೆಯ ಹಂತದಲ್ಲಿ ಮುಂಬೈ ಇಂಡಿಯನ್ಸ್ ತಂಡ ಸೇರ್ಪಡೆಯಾಗಿ ಆಟ ಆಡಿದರು. ಇದುವರೆಗೂ 1996ರಲ್ಲಿ ಅಂಡರ್ 15 ವಿಶ್ವಕಪ್, 2000ರಲ್ಲಿ ಅಂಡರ್ 19 ವಿಶ್ವಕಪ್, 2007ರಲ್ಲಿ ಟಿ20 ವಿಶ್ವಕಪ್, 2011ರ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೇ 2007ರಲ್ಲಿ ಇಂಗ್ಲೆಂಡಿನಲ್ಲಿ ನಡೆದ ಪಂದ್ಯದಲ್ಲಿ 6 ಎಸೆತಗಳಿಗೆ 6 ಸಿಕ್ಸರ್ ಬಾರಿಸುವ ಮೂಲಕ ಗುರುತಿಸಿಕೊಂಡ ಕ್ರಿಕೆಟರ್ ಆಗಿದ್ದು ಹಲವು ಅಭಿಮಾನಿಗಳ ಪ್ರೀತಿಗೆ ಪಾತ್ರರಾಗಿದ್ದಾರೆ.

1981ರ ಡಿಸೆಂಬರ್ 11 ರಂದು ಜನಿಸಿದ ಯುವರಾಜ್ ಸಿಂಗ್ ಜನಿಸಿದರು. ಇವರು ಎಡಗೈ ಆಟಗಾರರಾಗಿದ್ದು, ಸಿಕ್ಸರ್ ಕಿಂಗ್ ಎಂದೇ ಪ್ರಸಿದ್ಧರಾಗಿದ್ದರು. ಯುವಿ ಜರ್ಸಿ ನಂ 12 ಆಗಿದ್ದು, 2000 ರಿಂದ 2017ರ ಆಲ್ ರೌಂಡರ್ ಆಗಿ ಆಟವಾಡಿದ್ದಾರೆ. ಇವರು 2009ರ ಅಕ್ಟೋಬರ್ 16 ರಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಆಡಿದ್ದು, 2012ರ ಡಿಸೆಂಬರ್ 9 ಇಂಗ್ಲೆಂಡ್ ವಿರುದ್ಧ ಕೊನೆ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ.ಅಲ್ಲದೆ 2000ರ ಅಕ್ಟೋಬರ್ 3ರಂದು ಕೀನ್ಯಾ ವಿರುದ್ಧ ಮೊದಲ ಏಕದಿನ ಪಂದ್ಯ ಆಡಿದ್ದು, 2017ರ ಜೂನ್30ರಂದು ವೆಸ್ಟ್ ಇಂಡೀಸ್ ವಿರುದ್ಧ ಕೊನೆ ಏಕದಿನ ಪಂದ್ಯ ಆಡಿದ್ದಾರೆ.

1996ರಿಂದ ಪಂಜಾಬ್ ಪರ ರಣಜಿ, 2003ರಲ್ಲಿ ಯಾರ್ಕ್ ಷೈರ್, 2008-2010ರ ತನಕ ಕಿಂಗ್ಸ್ ಎಲೆವನ್ ಪಂಜಾಬ್, 2011-2013ರ ತನಕ ಪುಣೆ ವಾರಿಯರ್ಸ್ ಇಂಡಿಯಾ, 2014ರಲ್ಲಿ ಆರ್ ಸಿಬಿ, 2015ರಲ್ಲಿ ಡೆಲ್ಲಿ ಡೇರ್ ಡೆವಿಲ್ಸ್, 2016-17ರಲ್ಲಿ ಸನ್ ರೈಸರ್ಸ್ ಹೈದರಾಬಾದ್, 2018 ಕಿಂಗ್ಸ್ ಎಲೆವನ್ ಪಂಜಾಬ್, 2019ರಲ್ಲಿ ಮುಂಬೈ ಇಂಡಿಯನ್ಸ್ ಆಟವಾಡಿದ್ದಾರೆ.

ಭಾರತ ಪರ ಟೆಸ್ಟ್, ಏಕದಿನ ಹಾಗೂ ಟಿ20ನಲ್ಲಿ ಆಡಿದ್ದಾರೆ ಭಾರತ ಪರ 40 ಟೆಸ್ಟ್ ಪಂದ್ಯವಾಡಿದ್ದಾರೆ, 1900ರನ್, 33.92ರನ್ ಸರಾಸರಿ, 3 ಶತಕ, 11 ಅರ್ಧಶತಕ, 169 ಗರಿಷ್ಠ ರನ್ ಗಳಿಸಿದ್ದು, 9ವಿಕೆಟ್ ಗಳನ್ನು ಹಾಗೂ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ 304 ಪಂದ್ಯಗಳನ್ನು ಆಡಿದ್ದು, 8,701 ರನ್, 36.55 ರನ್ ಸರಾಸರಿ, 14 ಶತಕ, 52 ಅರ್ಧ ಶತಕ, 150 ಗರಿಷ್ಠ ಮೊತ್ತ, 111 ವಿಕೆಟ್ ಪಡೆದುಕೊಂಡಿದ್ದಾರೆ.  ಟಿ20ಐನಲ್ಲಿ 58 ಪಂದ್ಯಗಳನ್ನು ಆಡಿ 1177 ರನ್ಗಳನ್ನು ಬಾರಿಸಿದ್ದಾರೆ, ಸರಾಸರಿ 28.02 ರನ್ಸಿಡಿಸಿದ್ದು, 77 ಅಜೇಯ ಗರಿಷ್ಠ ಮೊತ್ತ ಗಳಿಸಿ 28 ವಿಕೆಟ್ ಪಡೆದುಕೊಂಡಿದ್ದಾರೆ.

ಇನ್ನೂ ಪ್ರಥಮ ದರ್ಜೆ ಪಂದ್ಯಗಳಲ್ಲಿ 139 ಪಂದ್ಯಗಳನ್ನು ಆಡಿದ್ದು, 8965ರನ್ ಅಂದರೆ ಸರಾಸರಿ 44.16ರನ್ ಗಳಿಸಿದ್ದು, 26ಶತಕ, 36 ಅರ್ಧಶತಕ, ಗರಿಷ್ಠ 260 ಮೊತ್ತಗಳನ್ನು ಹಾಗೂ 41 ವಿಕೆಟ್ ಪಡೆದುಕೊಂಡಿದ್ದಾರೆ.

ಯುವರಾಜ್​​ ಸಿಂಗ್ ತಮ್ಮ ಕೆರಿಯರ್​ನ ಉತ್ತುಂಗದಲ್ಲಿದ್ದಾಗಲೇ, 2011 ರಲ್ಲಿ ಶ್ವಾಸಕೋಶದ ಕ್ಯಾನ್ಸರ್​​​ ಪೀಡಿತರಾಗಿದ್ದರು.  2012ರಲ್ಲಿ ಕ್ಯಾನ್ಸರ್ ಗೆದ್ದು ಬಂದು ಮತ್ತೆ ಕ್ರಿಕೆಟ್​​ ಅಂಗಳದಲ್ಲಿ ಮಿಂಚಿದ್ದರು. ಬಳಿಕ ಕ್ಯಾನ್ಸರ್ ಪೀಡಿತರಿಗಾಗಿಯೇ ಯುವರಾಜ್ 2013ರಲ್ಲಿ ಯೂ ವಿ ಕ್ಯಾನ್ ಸಂಸ್ಥೆಯನ್ನು ಸ್ಥಾಪಿಸಿದರು. ಈ ಮೂಲಕ ಅನೇಕ ಕ್ಯಾನ್ಸರ್ ರೋಗಿಗಳಿಗೆ ಯುವಿ ತನ್ನ ಕೈಯಿಂದಾಗುವ ಸಹಾಯ ಮಾಡುತ್ತಿದ್ದಾರೆ.

ಕ್ರಿಕೆಟ್​ನಿಂದ ನಿವೃತ್ತಿ ಪಡೆದ ಬಳಿಕ ಪೂರ್ಣಕಾಲ ಕ್ಯಾನ್ಸರ್ ರೋಗಿಗಳ ಸೇವೆ ಹಾಗೂ ಅವರ ಬದುಕಿನಲ್ಲಿ ಬೆಳಕು ಮೂಡಿಸುವ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವುದಾಗಿ ಯುವರಾಜ್ ಸಿಂಗ್ ಹೇಳಿದ್ದಾರೆ.

Sponsored :


9900071610