ನಮೋಗೆ ಪತ್ರ ಬರೆದ ಜಿ.ಪಂ ಅಧ್ಯಕ್ಷೆಗೆ ಪಕ್ಷ ನೀಡಿದ್ದು ಕಿಕ್​ ಔಟ್​​ ಗಿಫ್ಟ್​​- ಇದು ಕಾಫಿ ನಾಡಿನ ಕೇಸರಿ ರಾಜಕಾರಣ!

12146
ZP President Chaitra Suspended for 6 years from BJP.
ZP President Chaitra Suspended for 6 years from BJP.

ಇತ್ತೀಚಿಗಷ್ಟೇ ಚಿಕ್ಕಮಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಚೈತ್ರಶ್ರೀ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಚಿಕ್ಕಮಗಳೂರು ಅಭಿವೃದ್ಧಿ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಕೋರಿದ್ದರು.

ad

ಇದಕ್ಕೆ ಸ್ಪಂದಿಸಿದ್ದ ನಮೋ ಕಾರ್ಯಾಲಯ ಸಮಯ ನಿಗದಿ ಪಡಿಸುವ ಭರವಸೆ ನೀಡಿತ್ತು. ಆದರೇ ನಮೋ ಭೇಟಿಯ ಕನಸಿನಲ್ಲಿದ್ದ ಬಿಜೆಪಿ ಜಿ.ಪಂ ಅಧ್ಯಕ್ಷೆಗೆ ಕೇಸರಿಪಾಳಯ ಶಾಕ್​ ನೀಡಿದ್ದು, ಜಿ.ಪಂ ಅಧ್ಯಕ್ಷ ಸ್ಥಾನ ಬಿಟ್ಟುಕೊಡದ ಕಾರಣಕ್ಕೆ ಪಕ್ಷದಿಂದ 6 ವರ್ಷದ ಕಾಲ ಉಚ್ಛಾಟಿಸಿದೆ.
ಹೌದು ಚಿಕ್ಕಮಗಳೂರು ಜಿಲ್ಲಾ ಪಂಚಾಯತ್​​ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದ ಚೈತ್ರಶ್ರೀಯವರಿಗೆ 20 ತಿಂಗಳುಗಳ ಕಾಲ ಆಡಳಿತ ನಡೆಸಲು ಅವಕಾಶ ನೀಡಿತ್ತು. ಆದರೇ 20 ತಿಂಗಳ ಕಾಲಾವಕಶಾ ಮುಗಿದಿದ್ದರೂ ಜಿ.ಪಂ ಅಧ್ಯಕ್ಷೆ ಚೈತ್ರಶ್ರೀ ಹುದ್ದೆ ಬಿಟ್ಟುಕೊಡದ ಹಿನ್ನೆಲೆಯಲ್ಲಿ ಚೈತ್ರಶ್ರಿಯನ್ನು ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಛಾಟಿಸಿ ಆದೇಶ ಹೊರಡಿಸಿದೆ.

 

 

ಹೌದು ಪ್ರಧಾನಿ ಮೋದಿಗೆ ಪತ್ರ ಬರೆದು ವ್ಯಾಪಕ ಪ್ರಶಂಸೆಗೆ ಒಳಗಾಗಿದ್ದ ಚೈತ್ರಶ್ರೀಗೆ ಕಳೆದ ಕೆಲ ದಿನಗಳಿಂದಲೇ ಪಕ್ಷದಲ್ಲಿ ಅಸಮಧಾನ ಎದುರಾಗಿತ್ತು. ಇದೀಗ ಬಿಜೆಪಿ ಸಸ್ಪೆಂಡ್​​ ಮಾಡಿದ್ದು, ಸ್ವತಃ ಚೈತ್ರಶ್ರೀ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೊಂದು ಮೂಲಗಳ ಪ್ರಕಾರ ಚೈತ್ರಶ್ರೀ 20 ತಿಂಗಳ ಅಧಿಕಾರ ಮುಗಿದ ಬಳಿಕ ಕೂಡ ಗದ್ದುಗೆ ಬಿಟ್ಟು ಕೊಡದೇ ಮೂಡಿಗೆರೆಯಿಂದ ವಿಧಾನಸಭಾ ಕ್ಷೇತ್ರದ ಟಿಕೇಟ್​ ಆಕಾಂಕ್ಷಿಯಾಗಿದ್ದರು ಎನ್ನಲಾಗಿದೆ. ವಿಧಾನಸಭೆಯ ಟಿಕೇಟ್​ ನೀಡಿದ್ರೆ ಮಾತ್ರ ರಾಜೀನಾಮೆ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಬಿಜೆಪಿ ಈ ಕ್ರಮಕೈಗೊಂಡಿದೆ ಎಂಬ ಮಾತು ಕೇಳಿಬಂದಿದೆ.  ಒಟ್ಟಿನಲ್ಲಿ ಮೋದಿ ಕಾರ್ಯಾಲಯದಿಂದ ಮೆಚ್ಚುಗೆ ಪಡೆದುಕೊಂಡಿದ್ದ ಜಿ.ಪಂ ಅಧ್ಯಕ್ಷೆ ವಿರುದ್ಧ ಸ್ವಪಕ್ಷಿಯರೇ ಷಡ್ಯಂತ್ರ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಿನಲ್ಲಿ ಚೈತ್ರಶ್ರೀಗೆ ಇದು ಸಖತ್​ ಶಾಕ್​ ತಂದಿರೋದಂತು ಸತ್ಯ.

Sponsored :

Related Articles